ಬೋಪಣ್ಣ ಜೋಡಿಗೆ ಸೋಲುಣಿಸಿದ ಸಾನಿಯಾ-ಡೊಡಿಗ್ ಜೋಡಿ

Published : Jan 25, 2017, 12:18 PM ISTUpdated : Apr 11, 2018, 01:04 PM IST
ಬೋಪಣ್ಣ ಜೋಡಿಗೆ ಸೋಲುಣಿಸಿದ ಸಾನಿಯಾ-ಡೊಡಿಗ್ ಜೋಡಿ

ಸಾರಾಂಶ

ಸೆಮಿಫೈನಲ್ ಸುತ್ತಿನಲ್ಲಿ ಬಹುತೇಕ ಸಾನಿಯಾ-ಡೊಡಿಗ್ ಜೋಡಿ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜತೆ ಸೆಣಸುವ ಸಂಭವವಿದೆ.

ಮೆಲ್ಬೋರ್ನ್(ಜ.25): ಚೆನ್ನೈ ಓಪನ್ ಡಬಲ್ಸ್ ಚಾಂಪಿಯನ್ ರೋಹನ್ ಬೋಪಣ್ಣ ವರ್ಷದ ಮೊದಲ ಗ್ರಾಂಡ್‌'ಸ್ಲಾಮ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಇಂದು ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಆಕೆಯ ಜತೆಯಾಟಗಾರ ಕ್ರೊವೇಷಿಯಾದ ಇವಾನ್ ಡೊಡಿಗ್ ಜೋಡಿ ರೋಚಕವಾಗಿದ್ದ ಟೈಬ್ರೇಕ್ ಕಾದಾಟದಲ್ಲಿ 6-3, 3-6, 12-10 ಸೆಟ್'ಗಳಿಂದ ಬೋಪಣ್ಣ ಜೋಡಿಗೆ ಸೋಲುಣಿಸಿ ನಾಲ್ಕರ ಘಟ್ಟಕ್ಕೇರಿತು.

ಪುರುಷರ ಡಬಲ್ಸ್ ವಿಭಾಗದಲ್ಲಿನ ಎರಡನೇ ಸುತ್ತಿನ ವೈಫಲ್ಯದ ನಂತರ ಮಿಶ್ರ ಡಬಲ್ಸ್‌'ನಲ್ಲಿ ಪ್ರಶಸ್ತಿ ಅರಸುತ್ತಿದ್ದ ಬೋಪಣ್ಣ ಮತ್ತು ಅವರ ಕೆನಡಾದ ಜತೆಯಾಟಗಾರ್ತಿ ಗೇಬ್ರಿಯೇಲ ಡಬ್ರೋವ್‌ಸ್ಕಿ ಜತೆಗೆ ಸೋಲಿನ ಆಘಾತ ಅನುಭವಿಸಿದರು

ಸೆಮಿಫೈನಲ್ ಸುತ್ತಿನಲ್ಲಿ ಬಹುತೇಕ ಸಾನಿಯಾ-ಡೊಡಿಗ್ ಜೋಡಿ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜತೆ ಸೆಣಸುವ ಸಂಭವವಿದೆ.

ಇತ್ತ, ಭಾರತದ ಯುವ ಆಟಗಾರ್ತಿ ಜೀಲ್ ದೇಸಾಯಿ ಬಾಲಕಿಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಪ್ಯಾಟ್‌ ಕಮಿನ್ಸ್ ಬರುವವರೆಗೂ ಈ ಬಿಗ್ ಹಿಟ್ಟರ್‌ಗೆ ನಾಯಕತ್ವ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್!
T20 Rankings: ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!