ಕ್ರಿಕೆಟ್'ಗೆ ಗುಡ್ ಬೈ ಹೇಳಿದ ಡೇವಿಡ್ ಹಸ್ಸಿ

Published : Jan 25, 2017, 10:24 AM ISTUpdated : Apr 11, 2018, 01:02 PM IST
ಕ್ರಿಕೆಟ್'ಗೆ ಗುಡ್ ಬೈ ಹೇಳಿದ ಡೇವಿಡ್ ಹಸ್ಸಿ

ಸಾರಾಂಶ

ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿದ್ದ ಹಸ್ಸಿ, ಬಿಗ್ ಬ್ಯಾಷ್ ಟೂರ್ನಿಯಲ್ಲಿ ತಮ್ಮ ತಂಡ ಸೆಮಿಫೈನಲ್'ನಲ್ಲಿ ಮುಗ್ಗರಿಸಿದ ಬೆನ್ನಲ್ಲೇ ನಿವೃತ್ತಿ ತೀರ್ಮಾನ ಕೈಗೊಂಡಿದ್ದಾರೆ.

ಮೆಲ್ಬೋರ್ನ್(ಜ.25): ಆಸೀಸ್ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದ ಡೇವಿಡ್ ಎಲ್ಲಾ ಮಾದರಿಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದಾರೆ.

ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿದ್ದ ಹಸ್ಸಿ, ಬಿಗ್ ಬ್ಯಾಷ್ ಟೂರ್ನಿಯಲ್ಲಿ ತಮ್ಮ ತಂಡ ಸೆಮಿಫೈನಲ್'ನಲ್ಲಿ ಮುಗ್ಗರಿಸಿದ ಬೆನ್ನಲ್ಲೇ ನಿವೃತ್ತಿ ತೀರ್ಮಾನ ಕೈಗೊಂಡಿದ್ದಾರೆ.

ಆಸೀಸ್ ತಂಡದ ಖ್ಯಾತ ಮಾಜಿ ಕ್ರಿಕೆಟಿಗ ಮೈಕ್ ಹಸ್ಸಿಯ ಸಹೋದರರಾದ ಡೇವಿಡ್ ಹಸ್ಸಿ 2008ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದರು.  ಆಸೀಸ್ ಪರ ಒಟ್ಟು 69 ಪಂದ್ಯಗಳನ್ನು ಪ್ರತಿನಿಧಿಸಿರುವ ಹಸ್ಸಿ 32.65ರ ಸರಾಸರಿಯಲ್ಲಿ 1769 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 14 ಆಕರ್ಷಕ ಅರ್ಧ ಶತಕಗಳು ಸೇರಿವೆ. ಇದಷ್ಟೇ ಅಲ್ಲದೇ 39 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನೂ ಆಡಿದ್ದಾರೆ.

ಇನ್ನು ಐಪಿಎಲ್'ನಲ್ಲೂ ತಮ್ಮ ಕೈಚಳಕ ತೂರಿಸಿದ್ದ ಡೇವಿಡ್ ಹಸ್ಸಿ ಮೂರು ಬೇರೆ-ಬೇರೆ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2008-10ರ ಅವಧಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರೆ, 2011-13ರವರೆಗೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲಿ ಆಡಿದ್ದರು. ಇನ್ನು 2014ರಲ್ಲಿ ಕೊನೆಯದಾಗಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿಳಿದಿದ್ದರು.   

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಿಂದ ಹೊರಬಿದ್ದ ಟಾಪ್-5 ಆಟಗಾರರಿವರು! ಪಟ್ಟಿಯಲ್ಲಿವೆ ಅಚ್ಚರಿ ಹೆಸರು
ಶುಭ್‌ಮನ್ ಗಿಲ್ ಕೈಬಿಟ್ಟಿಕ್ಕೇಕೆ?: ಫಾರ್ಮ್ ಅಲ್ಲ, ಬೇರೆಯೇ ಕಾರಣ ಎಂದ ಅಜಿತ್ ಅಗರ್ಕರ್!