
ನವದೆಹಲಿ(ಮೇ.12): ಭಾರತದ ಭರವಸೆಯ ಕುಸ್ತಿಪಟು ಸಾಕ್ಷಿ ಮಲ್ಲಿಕ್, ವಿನಿಶ್ ಫೋಗಟ್ ಹಾಗೂ ದಿವ್ಯಾ ಕುಕ್ರಾನ್ ಏಷ್ಯನ್ ಕುಸ್ತಿ ಚಾಂಪಿಯನ್'ಶಿಪ್'ನಲ್ಲಿ ಫೈನಲ್'ಗೆ ಲಗ್ಗೆಯಿಟ್ಟಿದ್ದಾರೆ.
ರಿಯೊ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ (60 ಕೆ.ಜಿ) ಕ್ವಾರ್ಟರ್ ಫೈನಲ್'ನಲ್ಲಿ ಉಜ್ಬೆಕಿಸ್ತಾನ್'ನ ನಬಿರಾ ಎಸ್ಸೆಬೆವಾರನ್ನು 6-2 ಅಂತರದಿಂದ ಮಣಿಸಿದರೆ, ಸೆಮಿಫೈನಲ್'ನಲ್ಲಿ ಕಜಾಕಿಸ್ತಾನದ ಅಯೊಲೆಮ್ ಕಸ್ಸೆವಾವಾರನ್ನು 15-3 ಅಂಕಗಳ ಅಂತರದಿಂದ ಸುಲಭವಾಗಿ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದರು.
ಇನ್ನು 55 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್'ನಲ್ಲಿ ಉಜ್ಬೆಕಿಸ್ತಾನದ ಸೆವರಾ ಎಶ್ಮುರಾಟೊವಾ ವಿರುದ್ಧ ಜಯ ಸಾಧಿಸಿದ ವಿನಿಶ್ ಫೋಗಾಟ್ ಸೆಮೀಸ್'ನಲ್ಲಿ ಚೀನಾದ ಕ್ವಿ ಜಾಂಗ್'ರನ್ನು ಸೋಲಿಸಿ ಅಂತಿಮ ಸುತ್ತಿಗೇರಿದರು.
ಅದೇರೀತಿ ತೈಪೆಯ ಚೆನ್-ಚಿ ಹುವಾಂಗ್'ಗೆ ಕ್ವಾರ್ಟರ್ ಫೈನಲ್'ನಲ್ಲಿ ಸೋಲಿನ ರುಚಿ ತೋರಿಸಿದ ದಿವ್ಯಾ ಕುಕ್ರಾನ್ (69 ಕೆ.ಜಿ) ಸೆಮೀಸ್'ನಲ್ಲಿ ಕೊರಿಯಾದ ಹೆಯೊನಿಯಾಂಗ್'ರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.
ಭಾರತೀಯ ಕುಸ್ತಿಪಟುಗಳು ಕಳೆದ ವರ್ಷ ಬ್ಯಾಂಕಾಕ್'ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಮತ್ತು 5 ಕಂಚಿನೊಂದಿಗೆ 9 ಪದಕ ಜಯಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.