ಇಂದಿನಿಂದ ವಿಶ್ವಕುಸ್ತಿ: ಪದಕದ ಮೇಲೆ ಕಣ್ಣಿಟ್ಟ ಸಾಕ್ಷಿ, ಭಜರಂಗ್

By Suvarna Web DeskFirst Published Aug 21, 2017, 9:33 AM IST
Highlights

ರಿಯೋ ಗೇಮ್ಸ್‌'ನಲ್ಲಿ ಸಾಕ್ಷಿ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಆದರೆ ಮೇ ತಿಂಗಳಲ್ಲಿ ನಡೆದಿದ್ದ ಏಷ್ಯಾ ಚಾಂಪಿಯನ್‌'ಶಿಪ್‌'ನಲ್ಲಿ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.

ಪ್ಯಾರಿಸ್(ಆ.21): ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಇಂದಿನಿಂದ ಆರಂಭಗೊಳ್ಳಲಿರುವ ವಿಶ್ವ ಕುಸ್ತಿ ಚಾಂಪಿಯನ್‌'ಶಿಪ್‌'ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ವಿಶ್ವ ಮಟ್ಟದಲ್ಲಿ ಛಾಪು ಮೂಡಿಸಿರುವ ಸಾಕ್ಷಿ, ಪದಕದ ಮೇಲೆ ಕಣ್ಣಿಟ್ಟಿದ್ದು 60 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.

ರಿಯೋ ಗೇಮ್ಸ್‌'ನಲ್ಲಿ ಸಾಕ್ಷಿ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಆದರೆ ಮೇ ತಿಂಗಳಲ್ಲಿ ನಡೆದಿದ್ದ ಏಷ್ಯಾ ಚಾಂಪಿಯನ್‌'ಶಿಪ್‌'ನಲ್ಲಿ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಇದೇ ವೇಳೆ ಪುರುಷರ 65 ಕೆಜಿ ವಿಭಾಗದ ಏಷ್ಯಾ ಚಾಂಪಿಯನ್ ಭಜರಂಗ್ ಪೂನಿಯಾ ಸಹ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.

ಇನ್ನು ಪೊಗಟ್ ಸಹೋದರಿಯರ ಪೈಕಿ ಕೇವಲ ವಿನೇಶ್ ಪೊಗಟ್ ಮಾತ್ರ ಸ್ಪರ್ಧೆಗಿಳಿಯುತ್ತಿದ್ದಾರೆ. ಗೀತಾ ಹಾಗೂ ಬಬಿತಾ ಆಯ್ಕೆ ಟ್ರಯಲ್ಸ್‌'ನಲ್ಲಿ ಪಾಲ್ಗೊಂಡಿರಲಿಲ್ಲ. ಇನ್ನು ರಿತು ಹಾಗೂ ಸಂಗೀತಾ ಪೊಗಟ್ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.

ಮೊದಲೆರಡು ದಿನ ಗ್ರೀಕೊ ರೋಮನ್ ವಿಭಾಗದ ಸ್ಪರ್ಧೆ ನಡೆಯಲಿದ್ದು, 8 ಭಾರತೀಯರು ಕಣಕ್ಕಿಳಿಯಲಿದ್ದಾರೆ. ಪಂದ್ಯಾವಳಿಯಲ್ಲಿ ಭಾರತದ ಒಟ್ಟು 24 ಕುಸ್ತಿಪಟುಗಳು ಪಾಲ್ಗೊಳ್ಳುತ್ತಿದ್ದಾರೆ.

click me!