ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಹಾಗೂ ಪರಪಳ್ಳಿ ಕಶ್ಯಪ್ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಡಿಸೆಂಬರ್ 16ಕ್ಕೆ ಅದ್ಧೂರಿ ವಿವಾಹ ಮಹೋತ್ಸವ ಆಯೋಜಿಸಲಾಗಿದೆ. ಆದರೆ ಇದಕ್ಕೂ ಮೊದಲೇ ಅಭಿಮಾನಿಗಳಿಗೆ ನವ ಜೋಡಿ ಅಚ್ಚರಿ ನೀಡಿದ್ದಾರೆ.
ಹೈದರಾಬಾದ್(ಡಿ.14): ಬ್ಯಾಡ್ಮಿಂಟನ್ ಸ್ಟಾರ್ಸ್ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೈನಾ ಹಾಗೂ ಕಶ್ಯಪ್ ಮದುವೆ ಸಮಾರಂಭ ಡಿಸೆಂಬರ್ 16ಕ್ಕೆ ನಡೆಯಲಿದೆ. ಆದರೆ ಇಂದು(ಡಿ.14) ಇವರಿಬ್ಬರು ಮದುವೆಯಾಗೋ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.
Best match of my life ❤️... ☺️ pic.twitter.com/cCNJwqcjI5
— Saina Nehwal (@NSaina)
ಸಾಮಾಜಿಕ ಜಾಲತಾಣದಲ್ಲಿ ಸೈನಾ ನೆಹ್ವಾಲ್ ಮದುವೆ ಫೋಟೋ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ, ಬಾಳ ಸಂಗಾತಿ, ಜಸ್ಟ್ ಮ್ಯಾರೀಡ್ ಎಂದು ಬರೆದುಕೊಂಡಿದ್ದಾರೆ. ನೀಲಿ ಬಣ್ಣದ ಲೆಹೆಂಗಾ ಉಡುಗೆ ಹಾಗೂ ಸರಳ ಮೇಕ್‌ಅಪ್, ಆಭರಣದಲ್ಲಿ ಸೈನಾ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಇತ್ತ ಕಶ್ಯಪ್ ಪಿಂಕ್ ಕುರ್ತಾ ಹಾಗೂ ಬಿಳಿ ಪೈಜಾಮದಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ: ಟೆನಿಸ್’ನಲ್ಲೂ ಧೋನಿ ಚಾಂಪಿಯನ್
ಎರಡು ಕುಟಂಬದ ಆಪ್ತರ ಸಮ್ಮುಖದಲ್ಲಿ ಸೈನಾ ಹಾಗೂ ಕಶ್ಯಪ್ ಹಾರ ಬದಲಾಯಿಸಿಕೊಂಡಿದ್ದಾರೆ. ಸರಳ ಸಮಾರಂಭದಲ್ಲಿ ಇವರಿಬ್ಬರು ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಇವರ ಮದವೆ ಹಾಗೂ ಆರತಕ್ಷತೆ ಸಮಾರಂಭ ಡಿ.16ಕ್ಕೆ ಅದ್ಧೂರಿಯಾಗಿ ನಡೆಯಲಿದೆ.