ವಿರಾಟ್ ಕೊಹ್ಲಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಲಹೆ

By Web DeskFirst Published Aug 8, 2018, 5:06 PM IST
Highlights

ಮೊದಲ ಪಂದ್ಯದ ಸೋಲಿನ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ನೆರವಿಗೆ ಧಾವಿಸಿದ್ದಾರೆ. ಲಾರ್ಡ್ಸ್ ಪಂದ್ಯದ ಗೆಲುವಿಗಾಗಿ ಬ್ಯಾಟಿಂಗ್ ಮಾಂತ್ರಿಕ ಸಚಿನ್, ನಾಯಕ ಕೊಹ್ಲಿಗೆ ಸಲಹೆ ನೀಡಿದ್ದಾರೆ. ಸಚಿನ್ ಸಲಹೆ ಏನು?  ಇಲ್ಲಿದೆ.

ಲಂಡನ್(ಆ.08): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ನಾಯಕ ವಿರಾಟ್ ಕೊಹ್ಲಿಗೆ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ 31 ರನ್‌ಗಳ ಸೋಲು ಅನುಭವಿಸಿತ್ತು. ಇದೀಗ ಕೊಹ್ಲಿ ಸೈನ್ಯ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಲಾರ್ಡ್ಸ್ ಪಂದ್ಯ ಆರಂಭಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಹಲವು ಸೂಚನೆ ನೀಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಏಕಾಂಗಿ ಹೋರಾಟ ಮಾಡಿದ ವಿರಾಟ್ ಕೊಹ್ಲಿಯನ್ನ ಪ್ರಶಂಸಿಸಿದ ಸಚಿನ್, ರನ್ ಹಸಿವು ಹೀಗೆ ಇರಲಿ ಎಂದು ಹೇಳಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಬ್ಯಾಟ್ಸ್‌‍ಮನ್‌ಗಳು ರನ್‌ಗಾಗಿ ಹೆಚ್ಚು ಗಮನಕೇಂದ್ರಿಕರಿಸಬೇಕು. ರನ್ ದಾಹ ಯಾವುತ್ತು ನಿಲ್ಲಬಾರದು ಎಂದು ಸಚಿನ್ ಸಲಹೆ ನೀಡಿದ್ದಾರೆ.

ಟೀಂ ಇಂಡಿಯಾ ಮೊದಲ ಪಂದ್ಯದ ಸೋಲಿನಿಂದ ಹೊರ ಬಂದು ಅತ್ಯುತ್ತಮ ಪ್ರದರ್ಶನ ನೀಡಬೇಕು. ಬೌಲರ್‌ಗಳು 20 ವಿಕೆಟ್ ಕಬಳಿಸಿದ್ದಾರೆ. ಆದರೆ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವತ್ತ ಗಮನ ನೀಡಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ.
 

click me!