
ಲಂಡನ್(ಆ.08): ನೈಟ್ ಕ್ಲಬ್ ಪಾರ್ಟಿ ಮುಗಿಸಿ ವಾಪಾಸ್ಸಾಗುತ್ತಿದ್ದ ಸೌತ್ಆಫ್ರಿಕಾ ಯುವ ಕ್ರಿಕೆಟಿಗರಿಬ್ಬರ ಮೇಲೆ ಅಪರಿಚಿತರ ಗುಂಪೊಂದು ದಾಳಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಲಂಡನ್‌ನ ಯಾರ್ಕ್‌ಶೈರ್ ಸ್ಟ್ರೀಟ್‌ನಲ್ಲಿ ನಡೆದಿದೆ.
ಶಾ ಕ್ರಿಕೆಟ್ ಕ್ಲಬ್ ಪರ ಆಡುತ್ತಿರುವ ಸೌತ್ಆಫ್ರಿಕಾ ಮೂಲದ ಜಸ್ಟಿನ್ ವ್ಯಾಟ್ಸನ್ ಹಾಗೂ ಮಾರ್ಕ್ಯೂಸ್ ಆಕರ್ಮ್ಯಾನ್ ಮೇಲೆ 7 ಜನರ ಅಪರಿಚಿತರ ಗುಂಪು ದಾಳಿ ಮಾಡಿದೆ. ಮಧ್ಯರಾತ್ರಿ ಇಬ್ಬರು ಕ್ರಿಕೆಟಿಗರನ್ನ ಥಳಿಸಿದ ಗುಂಪು ಪರಾರಿಯಾಗಿದೆ. ಪ್ರಜ್ಞೆ ತಪ್ಪಿ ಬಿದ್ದ ಸೌತ್ಆಫ್ರಿಕಾ ಕ್ರಿಕೆಟಿಗರನ್ನ ಪೊಲೀಸರು ಆಸ್ಪತ್ರೆ ದಾಖಲಿಸಿದ್ದಾರೆ.
ಗಂಭೀರ ಗಾಯಗೊಂಡಿರುವ ಜಸ್ಟಿನ್ ವ್ಯಾಟ್ಸನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇಷ್ಟೇ ಅಲ್ಲ, ಗಾಯದಿಂದಾಗಿ ಕ್ರಿಕೆಟ್ ಕರಿಯರ್ ಅಂತ್ಯವಾಗೋ ಭೀತಿಯಲ್ಲಿದ್ದಾರೆ. ಮತ್ತೊರ್ವ ಕ್ರಿಕೆಟಿಗ ಮಾರ್ಕ್ಯೂಸ್ ಚೇತರಿಸಿಕೊಳ್ಳುತ್ತಿದ್ದು, ಕನಿಷ್ಠ 3 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.