ನಿವೃತ್ತಿ ನಿರ್ಧಾರ ಧೋನಿಗೆ ಬಿಟ್ಟದ್ದು

Published : Dec 06, 2016, 01:23 PM ISTUpdated : Apr 11, 2018, 12:53 PM IST
ನಿವೃತ್ತಿ ನಿರ್ಧಾರ ಧೋನಿಗೆ ಬಿಟ್ಟದ್ದು

ಸಾರಾಂಶ

ಮಾಹಿ ಈಗಲೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆ. ಹಾಗಾಗಿ ತಾವು ಯಾವಾಗ ನಿವೃತ್ತಿ ತೆಗೆದುಕೊಳ್ಳಬೇಕು ಎನ್ನುವ ತೀರ್ಮಾನವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಗೆದುಕೊಳ್ಳಲಿದ್ದಾರೆ.

ಮುಂಬೈ(ಡಿ.06): ಸೀಮಿತ ಓವರ್‌'ಗಳ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ನಿವೃತ್ತಿಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಈ ಕುರಿತು ಅವರೇ ಅಂತಿಮ ನಿರ್ಧಾರ ತಳೆಯಲಿದ್ದಾರೆ ಎಂದಿದ್ದಾರೆ.

‘‘ವಯಸ್ಸಿಗೂ, ಆಟಗಾರ ತೋರುತ್ತಿರುವ ಪ್ರದರ್ಶನಕ್ಕೂ ಒಂದನ್ನೊಂದು ತಳಕು ಹಾಕುವುದು ಸರಿಯಲ್ಲ. ಟಿ20 ಪಂದ್ಯಾವಳಿಯು ಕೇವಲ ಯುವಕರಿಗಷ್ಟೇ ಎಂದು ಹೇಳಲಾಗಿತ್ತು. ಆದರಿದನ್ನು ನಾನು ಒಪ್ಪುವುದಿಲ್ಲ. ಬ್ರಾಡ್ ಹಾಗ್ 44ರ ಹರೆಯದಲ್ಲೂ ಟಿ20 ಆಡುತ್ತಾರೆ. ಅಂತೆಯೇ 38ರ ಹರೆಯದಲ್ಲಿ ನಾನು ಏಕದಿನ ಕ್ರಿಕೆಟ್‌'ನಲ್ಲಿ ದ್ವಿಶತಕ ಬಾರಿಸಿದೆ. ಆಟಗಾರನೊಬ್ಬ ಮಾನಸಿಕ ಹಾಗೂ ದೈಹಿಕವಾಗಿ ಸ್ಥಿರವಾಗಿರುವುದಷ್ಟೇ ಕ್ರೀಡೆಯಲ್ಲಿ ಮುಖ್ಯ’’ ಎಂದು ಸಚಿನ್ ದ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಾಹಿ ಈಗಲೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆ. ಹಾಗಾಗಿ ತಾವು ಯಾವಾಗ ನಿವೃತ್ತಿ ತೆಗೆದುಕೊಳ್ಳಬೇಕು ಎನ್ನುವ ತೀರ್ಮಾನವನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಗೆದುಕೊಳ್ಳಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಗಿಲ್‌ಗಿಲ್ಲ ಉಪನಾಯಕ ಪಟ್ಟ!
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮೇಜರ್ ಚೇಂಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌