ಕಿರಿಯರಿಗೆ ಓಲ್ಟ್'ಮನ್ಸ್ ಕಿವಿಮಾತು

Published : Dec 06, 2016, 12:56 PM ISTUpdated : Apr 11, 2018, 12:53 PM IST
ಕಿರಿಯರಿಗೆ ಓಲ್ಟ್'ಮನ್ಸ್ ಕಿವಿಮಾತು

ಸಾರಾಂಶ

2017ರ ಹಾಕಿ ಇಂಡಿಯಾ ಲೀಗ್ (ಎಚ್‌'ಐಎಲ್) ನಂತರ ಪ್ರಮುಖ ಆಟಗಾರರ ಸಮರ್ಥ ತಂಡವೊಂದರನ್ನು ಸಿದ್ಧಪಡಿಸುವ ಆಲೋಚನೆಯಿದೆ. ಆದರೆ, ಅದು ವಿಶ್ವಕಪ್, ಎಚ್‌'ಐಎಲ್‌'ನಲ್ಲಿನ ಪ್ರದರ್ಶನದ ಮೇಲೆ ಅವಲಂಬಿತ. - ರೋಲೆಂಟ್ ಓಲ್ಟ್‌ಮನ್ಸ್

ನವದೆಹಲಿ(ಡಿ.06): ಕಿರಿಯರ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದ ಆಟಗಾರರಿಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭವಿಷ್ಯದಲ್ಲಿ ಸುವರ್ಣಾವಕಾಶಗಳು ಒದಗಿ ಬರಲಿವೆ ಎಂದು ಹಿರಿಯರ ಹಾಕಿ ತಂಡದ ಪ್ರಧಾನ ಕೋಚ್ ರೋಲೆಂಟ್ ಓಲ್ಟ್‌ಮನ್ಸ್ ಕಿವಿಮಾತು ಹೇಳಿದ್ದಾರೆ.

ಟೂರ್ನಿಯಲ್ಲಿ ನೀಡುವ ಪ್ರದರ್ಶನ ಹಿರಿಯರ ತಂಡಕ್ಕೆ ಸೇರ್ಪಡೆಗೊಳ್ಳುವ ಉತ್ತಮ ಅವಕಾಶವನ್ನು ಒದಗಿಸಿಕೊಡಲಿದೆ. ಆಟದ ಮೇಲೆ ಆಟಗಾರರು ಹೆಚ್ಚು ಗಮನ ನೀಡಬೇಕೆಂದು ಭಾರತೀಯ ಕಿರಿಯರ ತಂಡವನ್ನು ಭೇಟಿ ಮಾಡಿದ ಓಲ್ಟ್‌ಮನ್ಸ್ ಹೇಳಿದ್ದಾರೆ

ಇದೇವೇಳೆ ಅವರು, ‘‘2017ರ ಹಾಕಿ ಇಂಡಿಯಾ ಲೀಗ್ (ಎಚ್‌'ಐಎಲ್) ನಂತರ ಪ್ರಮುಖ ಆಟಗಾರರ ಸಮರ್ಥ ತಂಡವೊಂದರನ್ನು ಸಿದ್ಧಪಡಿಸುವ ಆಲೋಚನೆಯಿದೆ. ಆದರೆ, ಅದು ವಿಶ್ವಕಪ್, ಎಚ್‌'ಐಎಲ್‌'ನಲ್ಲಿನ ಪ್ರದರ್ಶನದ ಮೇಲೆ ಅವಲಂಬಿತ’’ ಎಂದು ತಿಳಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಗಿಲ್‌ಗಿಲ್ಲ ಉಪನಾಯಕ ಪಟ್ಟ!
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮೇಜರ್ ಚೇಂಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌