ಮತ್ತೊಮ್ಮೆ ಭಾರತೀಯರ ಮನಗೆದ್ದ ಸಚಿನ್ ತೆಂಡುಲ್ಕರ್

By Web DeskFirst Published Feb 25, 2019, 12:20 PM IST
Highlights

ಫೆಬ್ರವರಿ 14ರಂದು ಪುಲ್ವಾಮದಲ್ಲಿ ಭಯೋತ್ಫಾದಕರು ನಡೆಸಿದ ಆತ್ಮಹತ್ಯಾ ದಾಳಿಗೆ ಭಾರದ 40ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದರು. ಯೋಧರ ಕುಟುಂಬಗಳಿಗೆ ನೆರವಾಗಲು ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ 15 ಲಕ್ಷ ರುಪಾಯಿ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ನವದೆಹಲಿ(ಫೆ.25): ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರ ಕುಟುಂಬಗಳಿಗೆ ದೇಣಿಗೆ ನೀಡುವ ಸಲುವಾಗಿ ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಸಾವಿರಾರು ಜನರ ಜತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹ ಹೆಜ್ಜೆ ಹಾಕಿದರು.

Today, we made a difference & all it took was 10 push-ups. Thank you for infusing that extra energy by participating in the Push-up Challenge at the & helping us contribute to the Fund. Delhi, you truly delivered! pic.twitter.com/zs7BlgQSnE

— Sachin Tendulkar (@sachin_rt)

ಇಲ್ಲಿನ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಆರಂಭವಾಗುವ ಮುನ್ನ, ‘ಕೀಪ್ ಮೂವಿಂಗ್ ಪುಷ್ ಅಪ್ ಚಾಲೆಂಜ್’ ಸ್ವೀಕರಿಸಿದ ಸಚಿನ್, 10 ಪುಷ್ ಅಪ್ ಮಾಡಿದರು. ಈ ವೇಳೆ ₹15 ಲಕ್ಷ ಸಂಗ್ರಹವಾಗಿದ್ದು, ಈ ಮೊತ್ತವನ್ನು ಯೋಧರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಓಟದ ಆಯೋಜಕರು ತಿಳಿಸಿದ್ದಾರೆ.

ಪಾಕ್ ವಿರುದ್ಧ ವಿಶ್ವಕಪ್: ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ

ಫೆಬ್ರವರಿ 14ರಂದು ಪುಲ್ವಾಮದಲ್ಲಿ ಭಯೋತ್ಫಾದಕರು ನಡೆಸಿದ ಆತ್ಮಹತ್ಯಾ ದಾಳಿಗೆ ಭಾರದ 40ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಸಚಿನ್ ತೆಂಡುಲ್ಕರ್ ಸುಮ್ಮನೆ ಪಾಕಿಸ್ತಾನಕ್ಕೆ 2 ಅಂಕ ಬಿಟ್ಟುಕೊಡುವುದಕ್ಕಿಂತ ಭಾರತ ಕಾದಾಡುವುದೇ ಒಳ್ಳೆಯದು ಎಂದು ಹೇಳಿದ್ದರು.  

ವಿಶ್ವಕಪ್ 2019: ಬದ್ಧವೈರಿ ಪಾಕ್‌ಗೆ 2 ಅಂಕ ನೀಡಲು ಇಷ್ಟಪಡೋದಿಲ್ಲ - ಸಚಿನ್

click me!