ಸಚಿನ್ ತೆಂಡುಲ್ಕರ್ ಶತಕಗಳ ಶತಕಕ್ಕೆ 7ರ ಸಂಭ್ರಮ

By Web DeskFirst Published Mar 16, 2019, 5:01 PM IST
Highlights

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ನೂರು ಶತಕ ಸಿಡಿಸಿ ಇಂದಿಗೆ 8 ವರ್ಷ ಪೂರ್ಣಗೊಂಡಿವೆ. ಬರೋಬ್ಬರಿ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ 100 ಶತಕ ಸಿಡಿಸಿದ ಏಕೈಕ ಕ್ರಿಕೆಟಿಗನ ಸಾಧನೆಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

ಬೆಂಗಳೂರು(ಮಾ.16): ಕ್ರಿಕೆಟ್ ಜಗತ್ತಿನ ಜೀವಂತ ದಂತಕತೆ ಸಚಿನ್ ತೆಂಡುಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕಗಳ ಶತಕ ಸಿಡಿಸಿ ಇಂದಿಗೆ ಸರಿಯಾಗಿ 8 ವರ್ಷಗಳು ಭರ್ತಿಯಾಗಿವೆ. ಮಾರ್ಚ್ 16, 2012ರಲ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ 114ರನ್ ಸಿಡಿಸುವುದರೊಂದಿಗೆ 100 ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಅಪರೂಪದ ಮೈಲಿಗಲ್ಲನ್ನು ನೆಟ್ಟಿದ್ದರು.

ಸಚಿನ್ ತೆಂಡುಲ್ಕರ್ ಸಾಧನೆಗೆ 10 ವರ್ಷ; ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!

24 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ 463 ಏಕದಿನ ಹಾಗೂ 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡುಲ್ಕರ್ ಕ್ರಮವಾಗಿ 49 ಹಾಗೂ 51 ಶತಕ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್ 1998ರಲ್ಲಿ ಬರೋಬ್ಬರಿ 12 ಶತಕ ಸಿಡಿಸಿ ಮಿಂಚಿದ್ದರು. ಇನ್ನುಳಿದಂತೆ 1996, 1999 ಹಾಗೂ 2010ರಲ್ಲಿ 8 ಶತಕ ಬಾರಿಸಿದ್ದರು. ತೆಂಡುಲ್ಕರ್ ಬಾರಿಸಿದ ಕೊನೆಯ 3 ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವಿನ ಸಿಹಿ ಸವಿಯಲು ಸಾಧ್ಯವಾಗಿರಲಿಲ್ಲ.

ಸಚಿನ್ ಯಾವ ದೇಶಗಳ ಮೇಲೆ ಎಷ್ಟು ಶತಕ ಸಿಡಿಸಿದ್ದಾರೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..

SL ದೇಶ ಟೆಸ್ಟ್ ಏಕದಿನ ಒಟ್ಟು
1 ಆಸ್ಟ್ರೇಲಿಯಾ 11 09 20
2 ಶ್ರೀಲಂಕಾ 09 08 17
3 ದಕ್ಷಿಣ ಆಫ್ರಿಕಾ 07 05 12
4 ಇಂಗ್ಲೆಂಡ್     07 02 09
5 ನ್ಯೂಜಿಲೆಂಡ್ 04 05 09
6 ಜಿಂಬಾಬ್ವೆ 03 05 08
7 ಪಾಕಿಸ್ತಾನ 02 05 07
8 ವೆಸ್ಟ್ ಇಂಡೀಸ್ 03 04 07
9 ಬಾಂಗ್ಲಾದೇಶ 05 01 06
10 ಕೀನ್ಯಾ 00 04 04
11 ನಮೀಬಿಯಾ 00 01 01

 

click me!