ಟೀಂ ಇಂಡಿಯಾ ಸರಣಿ ಜಯದ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಆಫ್ರಿಕಾ

By Suvarna Web DeskFirst Published Jan 17, 2018, 4:15 PM IST
Highlights

ಚೊಚ್ಚಲ ಪಂದ್ಯದಲ್ಲಿಯೇ ಲುಂಗಿ ಎನ್'ಜಿಡಿ 6 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿನ ರೂವಾರಿ ಎನಿಸಿದರು. ರಬಾಡ 3 ವಿಕೆಟ್ ಕಬಳಿಸಿ ಆಫ್ರಿಕಾ ಗೆಲುವನ್ನು ಸುಲಭಗೊಳಿಸಿದರು.

ಸೆಂಚೂರಿಯನ್(ಜ.17): ಸತತ 9 ಸರಣಿ ಜಯದೊಂದಗಿಗೆ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾದ ವಿಜಯದ ನಾಗಾಲೋಟಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಬ್ರೇಕ್ ಬಿದ್ದಿದೆ. ಆಫ್ರಿಕಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 135 ರನ್'ಗಳ ಸೋಲು ಕಾಣುವ ಮೂಲಕ ಟೆಸ್ಟ್ ಸರಣಿ ಕೈಚೆಲ್ಲಿದೆ. ಈ ಜಯದೊಂದಿಗೆ 3 ಪಂದ್ಯಗಳ ಫ್ರೀಡಂ ಟ್ರೋಫಿಯಲ್ಲಿ ಡು ಪ್ಲೆಸಿಸ್ ಪಡೆ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು.

ನಾಲ್ಕನೇ ದಿನವೇ 35 ರನ್'ಗಳಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ಐದನೇ ದಿನದಲ್ಲಿ 151 ರನ್'ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಪೂಜಾರ ಎರಡನೇ ಇನಿಂಗ್ಸ್'ನಲ್ಲೂ ಇಲ್ಲದ ರನ್ ಕದಿಯಲು ಹೋಗಿ ಆಲೌಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ಶರ್ಮಾ(47) ಹಾಗೂ ಕೆಳಕ್ರಮಾಂಕದಲ್ಲಿ ಮೊಹಮ್ಮದ್ ಶಮಿ(28) ಅಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

ಚೊಚ್ಚಲ ಪಂದ್ಯದಲ್ಲಿಯೇ ಲುಂಗಿ ಎನ್'ಜಿಡಿ 6 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿನ ರೂವಾರಿ ಎನಿಸಿದರು. ರಬಾಡ 3 ವಿಕೆಟ್ ಕಬಳಿಸಿ ಆಫ್ರಿಕಾ ಗೆಲುವನ್ನು ಸುಲಭಗೊಳಿಸಿದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 335&258

ಭಾರತ: 307&151

ಫಲಿತಾಂಶ: ದಕ್ಷಿಣ ಆಫ್ರಿಕಾಗೆ 135 ರನ್'ಗಳ ಜಯ

click me!