ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸಿದ ಮಿಥಾಲಿ ಪಡೆ

Published : Jul 08, 2017, 10:01 PM ISTUpdated : Apr 11, 2018, 01:10 PM IST
ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸಿದ ಮಿಥಾಲಿ ಪಡೆ

ಸಾರಾಂಶ

ಅಂತಿಮವಾಗಿ ಭಾರತ ವನಿತೆಯರ ತಂಡ 158ರನ್'ಗಳಿಗೆ ಸರ್ವಪತನ ಕಾಣುವ ಮೂಲಕ 115ರನ್ ಅಂತರದ ಸೋಲುಂಡಿತು.

ಲಂಡನ್(ಜು.08): ದೀಪ್ತಿ ಶರ್ಮಾ(60) ಜೂಲನ್ ಗೋಸ್ವಾಮಿ(44*)  ಹೋರಾಟದ ನಡುವೆಯೂ ಮಧ್ಯಮ ಕ್ರಮಾಂಕ ದಿಢೀರ್ ಕುಸಿದಿದ್ದರಿಂದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡದ ಅಜೇಯ 5ನೇ ಗೆಲುವಿನ ಕನಸಿಗೆ ಬ್ರೇಕ್ ಬಿದ್ದಿದೆ. ವಿಶ್ವಕಪ್'ನ ಕಳೆದ ನಾಲ್ಕು ಪಂದ್ಯದಲ್ಲೂ ಮಿಥಾಲಿ ರಾಜ್ ಪಡೆ ಗೆಲುವಿನ ನಗೆ ಬೀರಿತ್ತು.

ದಕ್ಷಿಣ ಆಫ್ರಿಕಾ ನೀಡಿದ್ದ 273ರನ್'ಗಳ ಬೃಹತ್ ಗುರಿ ಬೆನ್ನತ್ತಿದ ವನಿತೆಯರ ತಂಡ ಆರಂಭದಲ್ಲೆ ಮುಗ್ಗರಿಸಿತು. ಭರವಸೆಯ ಆರಂಭಿಕ ಆಟಗಾರ್ತಿ ಮಂದಾನ ಕೇವಲ 4ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್'ಗೆ ಪೂನಮ್ ರಾವತ್- ದೀಪ್ತಿ ಶರ್ಮಾ ಜೋಡಿ 44 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನೀಡಿದರು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ರಾವತ್(22 ರನ್) ಆಯ್'ಬಾಂಗಾ ಖಾಕಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ರಾವತ್ ಔಟ್ ಆಗುತ್ತಿದ್ದಂತೆ ನಾಯಕಿ ಮಿಥಾಲಿ ರಾಜ್ ಹಾಗೂ ಹರ್ಮನ್'ಪ್ರೀತ್ ಸಿಂಗ್ ಇಬ್ಬರೂ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ವೇದಾ ಕೃಷ್ಣಮೂರ್ತಿ ಆಟ ಕೂಡಾ ಕೇವಲ 3ರನ್'ಗೆ ಸೀಮಿತವಾಯಿತು.

ನಿರಂತರವಾಗಿ ವಿಕೆಟ್ ಉದುರುತ್ತಿದ್ದರು, ಆಫ್ರಿಕಾ ಬೌಲರ್'ಗಳನ್ನು ದಿಟ್ಟವಾಗಿ ಎದುರಿಸಿದ ದೀಪ್ತಿ ಶರ್ಮಾ ಭರ್ಜರಿ ಅರ್ಧಶತಕ ಸಿಡಿಸಿದರು. ಒಂದು ಹಂತದಲ್ಲಿ ನೂರು ರನ್ ಒಳಗೆ ಆಲೌಟ್ ಆಗುವ ಭೀತಿಯಲ್ಲಿದ್ದ ಮಿಥಾಲಿ ಪಡೆಗೆ ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿ ಹಾಗೂ ದೀಪ್ತಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ದೀಪ್ತಿ 60 ರನ್ ಬಾರಿಸಿ ವಾನ್ ನಿಲ್'ಕ್ರೈಕ್'ಗೆ ವಿಕೆಟ್ ಒಪ್ಪಿಸಿದರೆ, ಇನ್ನೊಂದು ತುದಿಯಲ್ಲಿ ಅಜೇಯವಾಟವಾಡಿದ ಜೂಲನ್ ಗೋಸ್ವಾಮಿ 43 ಬಾರಿಸಿದರು. ಅಂತಿಮವಾಗಿ ಭಾರತ ವನಿತೆಯರ ತಂಡ 158ರನ್'ಗಳಿಗೆ ಸರ್ವಪತನ ಕಾಣುವ ಮೂಲಕ 115ರನ್ ಅಂತರದ ಸೋಲುಂಡಿತು. ದಕ್ಷಿಣ ಆಫ್ರಿಕಾ ಪರ ಶಿಸ್ತಿನ ದಾಳಿ ಸಂಘಟಿಸಿದ ನಾಯಕಿ ವಾನ್ ನಿಲ್'ಕ್ರೈಕ್ ನಾಲ್ಕು ವಿಕೆಟ್ ಪಡೆದರೆ, ಆಯ್'ಬಾಂಗಾ ಖಾಕ ಎರಡು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೂ ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ಲಿಜ್ಜೆಲ್ ಲೀ(92) ಹಾಗೂ ನಾಯಕಿ ಡ್ಯಾನ್ ವಾನ್ ನೈಕ್ರೇಕ್(57) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್'ಗಳಲ್ಲಿ 9 ವಿಕೆಟ್ ಕಳೆದುಕೊಂಡು 273ರನ್ ಕಲೆಹಾಕಿತು.

ಭಾರತ ಪರ ಶಿಖಾ ಪಾಂಡೆ ಮೂರು ವಿಕೆಟ್ ಕಬಳಿಸಿದರೆ, ಹರ್ಮನ್'ಪ್ರೀತ್ ಕೌರ್ ಹಾಗೂ ಏಕ್ತಾ ಬಿಶ್ಟ್ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 273/9

ಲಿಜ್ಜಲ್ ಲೀ : 92

ಡ್ಯಾನ್ ವಾನ್ ನೈಕ್ರೇಕ್ : 57

ಶಿಖಾ ಪಾಂಡೆ : 40/3

ಭಾರತ : 158/10

ದೀಪ್ತಿ ಶರ್ಮಾ : 60

ಜೂಲನ್ ಗೋಸ್ವಾಮಿ : 43*

ಡ್ಯಾನ್ ವಾನ್ ನೈಕ್ರೇಕ್ : 22/4

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್‌-19 ಏಷ್ಯಾಕಪ್‌: ಪಾಕ್‌ನ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ತಂಡ!
'ಕುಸಿದು ಹೋಗಿದ್ದೆ, ನಾನ್ಯಾವತ್ತೂ ಕ್ರಿಕೆಟ್ ಆಡಬಾರದು ಅಂದುಕೊಂಡಿದ್ದೆ: ಆ ನೋವು ಇನ್ನೂ ಮರೆತಿಲ್ಲ ಎಂದ ರೋಹಿತ್ ಶರ್ಮಾ!