ಅಂಡರ್-17 ವಿಶ್ವಕಪ್; ಟಫ್ ಗ್ರೂಪ್'ನಲ್ಲಿ ಭಾರತ; ಇಲ್ಲಿದೆ ಫುಲ್ ಶೆಡ್ಯೂಲ್

By Suvarna Web DeskFirst Published Jul 8, 2017, 6:11 PM IST
Highlights

ಎರಡು ಪಂದ್ಯ ಗೆದ್ದರೆ ಭಾರತ ಕ್ವಾರ್ಟರ್'ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಯಾಗಲು ಸಾಧ್ಯವುಂಟು. ಭಾರತ ಜೂನಿಯರ್ ತಂಡದ ಕೋಚ್ ಲೂಯಿಸ್ ನಾರ್ಟನ್ ಅವರು ತಮ್ಮ ತಂಡದಿಂದ ಒಳ್ಳೆಯ ಪ್ರದರ್ಶನದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನವದೆಹಲಿ(ಜುಲೈ 08): ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಅತೀದೊಡ್ಡ ಮೈಲಿಗಲ್ಲು ಎನಿಸಲಿರುವ ಅಂಡರ್-17 ಫೀಫಾ ವಿಶ್ವಕಪ್'ನ ವೇಳಾಪಟ್ಟಿ ನಿನ್ನೆ ಬಿಡುಗಡೆಯಾಗಿದೆ. ಭಾರತ ತಂಡ ಎ ಗುಂಪಿನಲ್ಲಿದೆ. ಒಟ್ಟು 6 ಗುಂಪುಗಳಿದ್ದು ಪ್ರತೀ ಗುಂಪಿನಲ್ಲಿ 4 ತಂಡಗಳಿವೆ. ಭಾರತವಿರುವ ಎ ಗುಂಪಿನಲ್ಲಿ ಅಮೆರಿಕ, ಕೊಲಂಬಿಯಾ ಮತ್ತು ಘಾನಾ ತಂಡಗಳೂ ಇವೆ. ಈ ಮೂರೂ ತಂಡಗಳು ಅಸಾಮಾನ್ಯ ಫುಟ್ಬಾಲ್ ತಂಡಗಳೆನಿಸಿವೆ. ಆರು ಗುಂಪುಗಳಲ್ಲಿ ಎ ಗುಂಪು ಅತ್ಯಂತ ಕಠಿಣ ಗುಂಪುಗಳಲ್ಲೊಂದೆನಿಸಿದೆ. ಭಾರತಕ್ಕೆ ಪ್ರತಿಯೊಂದೂ ಪಂದ್ಯವೂ ಅತ್ಯಂತ ಅಮೂಲ್ಯ ಮತ್ತು ಅವಿಸ್ಮರಣೀಯ. ಎರಡು ಪಂದ್ಯ ಗೆದ್ದರೆ ಭಾರತ ಕ್ವಾರ್ಟರ್'ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಯಾಗಲು ಸಾಧ್ಯವುಂಟು. ಭಾರತ ಜೂನಿಯರ್ ತಂಡದ ಕೋಚ್ ಲೂಯಿಸ್ ನಾರ್ಟನ್ ಅವರು ತಮ್ಮ ತಂಡದಿಂದ ಒಳ್ಳೆಯ ಪ್ರದರ್ಶನದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಎ ಗುಂಪು:
ಭಾರತ, ಅಮೆರಿಕ, ಕೊಲಂಬಿಯಾ, ಘಾನಾ

ಬಿ ಗುಂಪು:
ಪರಗ್ವೆ, ಮಾಲಿ, ನ್ಯೂಜಿಲೆಂಡ್, ಟರ್ಕಿ

ಸಿ ಗುಂಪು:
ಇರಾನ್, ಗ್ಯುನಿಯಾ, ಜರ್ಮನಿ, ಕೋಸ್ಟ-ರಿಕಾ

ಡಿ ಗುಂಪು:
ಉತ್ತರ ಕೊರಿಯಾ, ನೈಗರ್, ಬ್ರಜಿಲ್, ಸ್ಪೇನ್

ಇ ಗುಂಪು:
ಹೊಂಡುರಾಸ್, ಜಪಾನ್, ನ್ಯೂ ಸಲೆಡೋನಿಯಾ, ಫ್ರಾನ್ಸ್

ಎಫ್ ಗುಂಪು:
ಇರಾಕ್, ಮೆಕ್ಸಿಕೋ, ಚಿಲಿ, ಇಂಗ್ಲೆಂಡ್

ಎಲ್ಲೆಲ್ಲಿ ಪಂದ್ಯಗಳು?:
ಜವಾಹರಲಾಲ್ ನೆಹರೂ ಸ್ಟೇಡಿಯಂ, ನವದೆಹಲಿ
ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ
ಫಟೋರ್ಡಾ ಸ್ಟೇಡಿಯಂ, ಗೋವಾ
ಜವಾಹರಲಾಲ್ ನೆಹರೂ ಸ್ಟೇಡಿಯಂ, ಕೊಚ್ಚಿ
ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂ, ಗುವಾಹತಿ
ಸಾಲ್ಟ್ ಲೇಕ್ ಸ್ಟೇಡಿಯಂ, ಕೋಲ್ಕತಾ

ಕೋಲ್ಕತಾ, ಗೋವಾ, ಗುವಾಹತಿ ಮತ್ತು ಕೊಚ್ಚಿಯಲ್ಲಿ ಕ್ವಾರ್ಟರ್'ಫೈನಲ್ ಪಂದ್ಯಗಳು ನಡೆಯಲಿವೆ
ಗುವಾಹತಿ ಮತ್ತು ನವಿ ಮುಂಬೈನಲ್ಲಿ ಸೆಮಿಫೈನಲ್ ಹಣಾಹಣಿ ಇರಲಿದೆ.
ಕೋಲ್ಕತಾದಲ್ಲಿ 3ನೇ ಸ್ಥಾನ ಮತ್ತು ಫೈನಲ್ ಮ್ಯಾಚ್ ನಡೆಯಲಿದೆ.

ಭಾರತದ ಪಂದ್ಯಗಳ ಪಟ್ಟಿ:
ಅಕ್ಟೋಬರ್ 6: ಅಮೆರಿಕ ವಿರುದ್ಧ
ಅಕ್ಟೋಬರ್ 9: ಕೊಲಂಬಿಯಾ ವಿರುದ್ಧ
ಅಕ್ಟೋಬರ್ 12: ಘಾನಾ ವಿರುದ್ಧ
(ಈ ಮೂರೂ ಪಂದ್ಯಗಳು ನವದೆಹಲಿಯ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆಯಲಿವೆ.)

ಗ್ರೂಪ್ ಹಂತದ ಬಳಿಕ?
ಒಟ್ಟು 6 ಗುಂಪುಗಳಿದ್ದು, ಪ್ರತೀ ತಂಡಗಳು 3 ಪಂದ್ಯಗಳನ್ನಾಡುತ್ತವೆ. ಆಯಾ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ನೇರ ಕ್ವಾರ್ಟರ್'ಫೈನಲ್ ಪ್ರವೇಶಿಸುತ್ತವೆ. ಗುಂಪಿನಲ್ಲಿ 3ನೇ ಸ್ಥಾನ ಪಡೆಯುವ 6 ತಂಡಗಳ ಪೈಕಿ ಅತ್ಯುತ್ತಮ 4 ತಂಡಗಳನ್ನ ವಿವಿಧ ಮಾನದಂಡದ ಮೂಲಕ ಆರಿಸಿ ಕ್ವಾರ್ಟರ್'ಫೈನಲ್'ಗೆ ಬಡ್ತಿ ನೀಡಲಾಗುವುದು.

click me!