ಧೋನಿ ಪಡೆಗೆ ಸ್ಫರ್ಧಾತ್ಮಕ ಗುರಿ ನೀಡಿದ ರಾಜಸ್ಥಾನ

By Web DeskFirst Published Apr 11, 2019, 9:44 PM IST
Highlights

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ಸ್ಫೋಟಕ ಆರಂಭ ಪಡೆಯಿತು. ರಹಾನೆ-ಬಟ್ಲರ್ ಜೋಡಿ ಮೊದಲ ವಿಕೆಟ್’ಗೆ 2.5 ಓವರ್’ಗಳಲ್ಲಿ 31 ರನ್’ಗಳ ಜತೆಯಾಟವಾಡಿತು. ರಹಾನೆ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಬಟ್ಲರ್ ಕೇವಲ 10 ಎಸೆತಗಳಲ್ಲಿ 23 ರನ್ ಚಚ್ಚಿ ಶಾರ್ದೂಲ್ ಠಾಕೂರ್ ಬೌಲಿಂಗ್’ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಜೈಪುರ[ಏ.11]: ಚೆನ್ನೈ ಸೂಪರ್’ಕಿಂಗ್ಸ್ ಶಿಸ್ತಿನ ದಾಳಿಯ ಹೊರತಾಗಿಯೂ ರಾಜಸ್ಥಾನ ಬ್ಯಾಟ್ಸ್’ಮನ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ 151 ರನ್ ಕಲೆಹಾಕಿದ್ದು, ಧೋನಿ ಪಡೆಗೆ ಸ್ಫರ್ಧಾತ್ಮಕ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ಸ್ಫೋಟಕ ಆರಂಭ ಪಡೆಯಿತು. ರಹಾನೆ-ಬಟ್ಲರ್ ಜೋಡಿ ಮೊದಲ ವಿಕೆಟ್’ಗೆ 2.5 ಓವರ್’ಗಳಲ್ಲಿ 31 ರನ್’ಗಳ ಜತೆಯಾಟವಾಡಿತು. ರಹಾನೆ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಬಟ್ಲರ್ ಕೇವಲ 10 ಎಸೆತಗಳಲ್ಲಿ 23 ರನ್ ಚಚ್ಚಿ ಶಾರ್ದೂಲ್ ಠಾಕೂರ್ ಬೌಲಿಂಗ್’ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಗಾಯದ ಬಳಿಕ ತಂಡ ಕೂಡಿಕೊಂಡ ಸ್ಯಾಮ್ಸನ್ ಆಟ ಕೇವಲ 6 ರನ್’ಗಳಿಗೆ ಸೀಮಿತವಾಯಿತು.

ಸ್ಯಾಮ್ಸನ್ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್’ಮನ್’ಗಳು,[ಸ್ಮಿತ್ 15, ತ್ರಿಪಾಠಿ 10, ಸ್ಟೋಕ್ಸ್ 28, ಪರಾಗ್ 16, ಆರ್ಚರ್ 13* ದಾಗೂ ಗೋಪಾಲ್ 19*] ಎರಡಂಕಿ ಮೊತ್ತ ಕಲೆಹಾಕುವಲ್ಲಿ ಸಫಲವಾದರು. ಅದರಲ್ಲೂ ಕೊನೆಯಲ್ಲಿ ಅಬ್ಬರಿಸಿದ ಕನ್ನಡಿಗ ಗೋಪಾಲ್ ಕೇವಲ 7 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕುವಲ್ಲಿ ನೆರವಾದರು. 
ಚೆನ್ನೈ ಸೂಪರ್’ಕಿಂಗ್ಸ್ ಪರ ದೀಪಕ್ ಚಾಹರ್, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ ಒಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:

ರಾಜಸ್ಥಾನ ರಾಯಲ್ಸ್: 151/7
ಬೆನ್ ಸ್ಟೋಕ್ಸ್: 28
ಜಡೇಜಾ: 20/2

[* ವಿವರ ಅಪೂರ್ಣ] 

 

click me!