ಪ್ರೊ ಕಬಡ್ಡಿಗೂ ಮುನ್ನ ಬಂಡಾಯ ಲೀಗ್ ಆರಂಭ

By Web Desk  |  First Published Apr 11, 2019, 9:05 PM IST

ಅಮೆಚೂರ್ ಕಬಡ್ಡಿ ಸಂಸ್ಥೆಗೆ ಬಂಡಾಯವಾಗಿ ಹುಟ್ಟಿಕೊಂಡಿರುವ ನ್ಯೂ ಕಬಡ್ಡಿ ಫೆಡರೇಷನ್ ಇಂಡಿಯಾ (ಎನ್‌ಕೆಎಫ್‌ಐ) ಈ ಕಬಡ್ಡಿ ಲೀಗ್‌ನ್ನು ಆಯೋಜಿಸುತ್ತಿದೆ. ಮೊದಲ ಬಾರಿ ಲೀಗ್‌ನ್ನು ಆಯೋಜಿಸುತ್ತಿರುವ ಕಾರಣದಿಂದ ಪಂದ್ಯಗಳು 3 ಸ್ಥಳಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.


ನವದೆಹಲಿ[ಏ.11] ಪ್ರೊ ಕಬಡ್ಡಿಗೆ ಸೆಡ್ಡು ಹೊಡೆದಿರುವ ಇಂಡೋ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಮೇ 13 ರಿಂದ ಜೂನ್ 4 ರವರೆಗೆ ನಡೆಸಲು ನಿರ್ಧರಿಸಲಾಗಿದೆ. 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಜುಲೈನಲ್ಲಿ ಆರಂಭವಾಗಲಿದೆ.

ಅಮೆಚೂರ್ ಕಬಡ್ಡಿ ಸಂಸ್ಥೆಗೆ ಬಂಡಾಯವಾಗಿ ಹುಟ್ಟಿಕೊಂಡಿರುವ ನ್ಯೂ ಕಬಡ್ಡಿ ಫೆಡರೇಷನ್ ಇಂಡಿಯಾ (ಎನ್‌ಕೆಎಫ್‌ಐ) ಈ ಕಬಡ್ಡಿ ಲೀಗ್‌ನ್ನು ಆಯೋಜಿಸುತ್ತಿದೆ. ಮೊದಲ ಬಾರಿ ಲೀಗ್‌ನ್ನು ಆಯೋಜಿಸುತ್ತಿರುವ ಕಾರಣದಿಂದ ಪಂದ್ಯಗಳು 3 ಸ್ಥಳಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಪುಣೆ, ಮೈಸೂರು ಹಾಗೂ ಬೆಂಗಳೂರಿನ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ಆಯಾ ಕ್ರೀಡಾಂಗಣಗಳ ಅನುಮತಿ ಪಡೆಯಲಾಗಿದೆ. ಒಟ್ಟು 44 ಪಂದ್ಯಗಳು ನಡೆಯಲಿವೆ. ಲೀಗ್‌ನಲ್ಲಿ 8 ತಂಡಗಳು ಅದೃಷ್ಠ ಪರೀಕ್ಷೆಗೆ ಇಳಿಯಲಿವೆ. 16 ವಿದೇಶಿ ಆಟಗಾರರು ಸೇರಿದಂತೆ ಒಟ್ಟಾರೆ 160 ಆಟಗಾರರು ಲೀಗ್‌ನಲ್ಲಿ ಆಡಲಿದ್ದಾರೆ.

Latest Videos

undefined

ಆಟಗಾರರ ಸಂಭಾವನೆ ಹಾಗೂ ಬಹುಮಾನದ ಹಣವನ್ನು ಹೊರತುಪಡಿಸಿ ಲೀಗ್‌ನಿಂದ ಬರುವ ಶೇ. 20 ರಷ್ಟು ಆದಾಯವನ್ನು ಆಟಗಾರರಿಗೆ ಹಂಚಲು ಆಯೋಜಕರು ನಿರ್ಧರಿಸಿದ್ದಾರೆ. ಮೂರು ಹಂತಗಳಲ್ಲಿ ಪಂದ್ಯಗಳನ್ನು ನಡೆಯಲಿವೆ. ಮೊದಲ ಹಂತವಾಗಿ ಮೇ 13 ರಿಂದ 21 ರವರೆಗೆ ಪುಣೆಯ ಬಾಳೆವಾಡಿ ಕ್ರೀಡಾಂಗಣದಲ್ಲಿ 20 ಪಂದ್ಯಗಳನ್ನು ನಡೆಸಲಾಗುವುದು. ಮೇ. 24 ರಿಂದ 29 ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 2ನೇ ಹಂತದ 17 ಪಂದ್ಯಗಳು ನಡೆಯಲಿವೆ. ಇನ್ನೂ 3ನೇ ಹಂತ ಜೂನ್ 1 ರಿಂದ 4 ರವರೆಗೆ ಬೆಂಗಳೂರಿನ
ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೂನ್ 4 ರಂದು ಫೈನಲ್ ಪಂದ್ಯ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

13 ಕನ್ನಡಿಗರಿಗೆ ಚಾನ್ಸ್
ಬಂಡಾಯ ಲೀಗ್‌ನಲ್ಲಿ ಒಟ್ಟಾರೆ 13 ಕರ್ನಾಟಕದ ಆಟಗಾರರು ಆಡುತ್ತಿದ್ದಾರೆ. ಬೆಂಗಳೂರು ರೈನೋಸ್ ತಂಡದಲ್ಲಿ ಮೂರರಿಂದ ನಾಲ್ವರು ಕನ್ನಡಿಗರು ಆಡುವ ಸಾಧ್ಯತೆಯಿದೆ ಎಂದು ಫ್ರಾಂಚೈಸಿ ಸಹ ಮಾಲೀಕ ಉದ್ಯಮಿ ಪ್ರಶಾಂತ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಪ್ರೊ ಕಬಡ್ಡಿ ಲೀಗ್‌ನಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗಿದೆ. ಬೆಂಗಳೂರು ಬುಲ್ಸ್ ತಂಡದಲ್ಲಿ ಒಬ್ಬನೇ ಒಬ್ಬ ಕನ್ನಡಿಗ ಆಟಗಾರನಿಗೂ ಅವಕಾಶ ನೀಡಿಲ್ಲ. 

ತಂಡಗಳು
ಬೆಂಗಳೂರು ರೈನೋಸ್, ಚೆನ್ನೈ ಚಾಲೆಂಜರ್ಸ್, ದಿಲೇರ್ ಡೆಲ್ಲಿ, ತೆಲುಗು ಬುಲ್ಸ್, ಪುಣೆ ಪ್ರೈಡ್, ಹರ‌್ಯಾಣ ಹೀರೋಸ್, ಮುಂಬೈ ಚೆ ರಾಜೆ ಹಾಗೂ ರಾಜಸ್ಥಾನ ರಜಪೂತ್ಸ್ ಹೆಸರಿನಲ್ಲಿ ಫ್ರಾಂಚೈಸಿಗಳಿವೆ. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!