
ಅಬುದಾಬಿ(ನ.07): ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಶೈಲಿಯನ್ನ,ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಾಸ್ ಟೇಲರ್ ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ಹಫೀಜ್ ಮೊದಲ ಓವರ್ ಮಾಡುತ್ತಿದ್ದಂತೆ, ಕ್ರೀಸ್‌ನಲ್ಲಿದ್ದ ರಾಸ್ ಟೇಲರ್ ಪ್ರಶ್ನಿಸಿದ್ದಾರೆ. ಹಫೀಜ್ ಬೌಲಿಂಗ್ ಶೈಲಿ ಕಾನೂನು ಬಾಹಿರ ಎಂದು ಅಂಪೈರ್‌ಗೆ ಸೂಚಿಸಿದ್ದಾರೆ. ಟೇಲರ್ ಕೈಸನ್ನೇ ಮಾಡುತ್ತಿದ್ದಂತೆ ಪಾಕಿಸ್ತಾನ ನಾಯಕ ಸರ್ಫಾರಾಜ್ ಅಹಮ್ಮದ್ ರೊಚ್ಚಿಗೆದ್ದಿದ್ದಾರೆ. ಇಷ್ಟೇ ಅಲ್ಲ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ.
ಆಕ್ಷೇಪಣ ಬೌಲಿಂಗ್ ಶೈಲಿಯಿಂದ ಮೊಹಮ್ಮದ್ ಈಗಾಗಲೇ ಹಲವು ಭಾರಿ ನಿಷೇಧಕ್ಕೊಳಗಾಗಿದ್ದಾರೆ. ನಿಷೇಧದ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಹಫೀಜ್ ಮೇಲೆ ರಾಸ್ ಟೇಲರ್ ತಿರುಗಿ ಬಿದ್ದಿದ್ದಾರೆ.
ರಾಸ್ ಟೇಲರ್ ಮೈದಾನದ ನಡವಳಿ ನಿಯಮ ಉಲ್ಲಂಘಿಸಿದ್ದಾರೆ. ಬೌಲರ್ ಶೈಲಿ ಹಾಗೂ ಇತರ ಆಕ್ಷೇಪಣ ಬೌಲಿಂಗ್ ಕುರಿತು ಐಸಿಸಿ ಮ್ಯಾಚ್ ರೆಫ್ರಿ ದೂರು ಸಲ್ಲಿಸಿ ವಿಚಾರಣೆ ನಡೆಸಲಾಗುತ್ತೆ. ಇಲ್ಲಿ ಬ್ಯಾಟ್ಸ್‌ಮನ್‌ಗಳೂ ಲಿಖಿತ ದೂರು ನೀಡಲು ಅವಕಾಶವಿದೆ. ಆದರೆ ಮೈದಾನದಲ್ಲಿ ಯಾವುದೇ ರೀತಿ ಸನ್ನೇ ಮೂಲಕ ವಿರೋಧ ವ್ಯಕ್ತಪಡಿಸುವ ಅವಕಾಶವಿಲ್ಲ. ಇಷ್ಟೇ ಅಲ್ಲ ಇದು ಎದುರಾಳಿಯನ್ನ ಅವಮಾನ ಮಾಡಿದಂತೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.