ಮಗಳ ಹೆಸರು ಬಹಿರಂಗ ಪಡಿಸಿದ ರೋಹಿತ್ ಶರ್ಮಾ!

By Web Desk  |  First Published Jan 6, 2019, 1:56 PM IST

ತಂದೆಯಾಗಿರುವ ರೋಹಿತ್ ಶರ್ಮಾ ಸದ್ಯ  ತವರಿನಲ್ಲಿದ್ದಾರೆ. ಪತ್ನಿ ಹಾಗೂ ಮಗುವಿನ ಜೊತೆಗಿರುವ ರೋಹಿತ್ ಶರ್ಮಾ ಇದೀಗ ಮುದ್ದಾದ ಮಗಳ ಹೆಸರನ್ನ ಬಹಿರಂಗ ಪಡಿಸಿದ್ದಾರೆ. ರೋಹಿತ್ ಮಗಳ ಹೆಸರೇನು? ಇಲ್ಲಿದೆ ವಿವರ.


ಮುಂಬೈ(ಜ.06): ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 2018ನೇ ವರ್ಷದ ಅಂತ್ಯದಲ್ಲಿ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯವನ್ನ ಮಿಸ್ ಮಾಡಿಕೊಂಡು ತವರಿಗೆ ಆಗಮಿಸಿದ್ದರು. ಇತ್ತೀಚೆಗೆ ಮಗಳ ಮೊದಲ ಫೋಟೋ ರಿವೀಲ್ ಮಾಡಿದ್ದ ರೋಹಿತ್ ಶರ್ಮಾ ಇದೀಗ ಹೆಸರು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಮುದ್ದು ಮಗಳ ಮೊದಲ ಫೋಟೋ ಬಹಿರಂಗ ಪಡಿಸಿದ ರೋಹಿತ್ ಶರ್ಮಾ!

Tap to resize

Latest Videos

ರೋಹಿತ್ ಮಗಳಿಗೆ ಸಮೈರಾ ಎಂದು ಹೆಸರಿಟ್ಟಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಫೋಟೋ ಕೂಡ ಹಂಚಿಕೊಂಡಿದ್ದಾರೆ. 11 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಮಗಳಿಗಾಗಿ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದ್ದರು.

 

I spent last night
On the last flight to you ❤️
Took a whole day up
Trying to get way up

Baby Samaira ❤️https://t.co/xR2fjlvwOr This video never fails to give me goosebumps pic.twitter.com/XPNtfwS4qX

— Rohit Sharma (@ImRo45)

 

ಇದನ್ನೂ ಓದಿ: ಬ್ಯಾಡ್ ಲೈಟ್ ಆಸರೆ- ಆಸ್ಟ್ರೇಲಿಯಾ ಸೋಲು 5ನೇ ದಿನಕ್ಕೆ ಮುಂದೂಡಿಕೆ!

ಡಿಸೆಂಬರ್ 30 ರಂದು ರೋಹಿತ್ ಪತ್ನಿ ರಿತಿಕಾ ಸಜ್ದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಜನವರಿ 8 ರಂದು ರೋಹಿತ್ ಶರ್ಮಾ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ಟೀಂ ಮ್ಯಾನೇಜ್ಮೆಂಟ್ ಹೇಳಿದೆ. ಜನವರಿ 12ರಿಂದ ಏಕದಿನ ಸರಣಿ ಆರಂಭವಾಗಲಿದೆ.

 

Well hello world! Let’s all have a great 2019 😉 pic.twitter.com/N1eJ2lHs8A

— Rohit Sharma (@ImRo45)

 

click me!