ಟೆಸ್ಟ್ ಸರಣಿ ಅರ್ಧಕ್ಕೆ ಬಿಟ್ಟು ತವರಿಗೆ ರೋಹಿತ್ ಶರ್ಮಾ ವಾಪಸ್..?

By Web Desk  |  First Published Dec 19, 2018, 11:18 AM IST

ಮೆಲ್ಬರ್ನ್‌ನಲ್ಲಿ ಡಿ. 26 ರಿಂದ 3ನೇ ಟೆಸ್ಟ್ ಆರಂಭವಾಗಲಿದೆ. ರೋಹಿತ್, ಅಡಿಲೇಡ್ ಟೆಸ್ಟ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದರು. ಇದರಿಂದಾಗಿ ಪರ್ತ್ ಟೆಸ್ಟ್‌ನಲ್ಲಿ ಆಡಿರಲಿಲ್ಲ.


ನವದೆಹಲಿ[ಡಿ.19]: ಭಾರತ ಏಕದಿನ ತಂಡದ ಆರಂಭಿಕ ರೋಹಿತ್ ಶರ್ಮಾ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ಹಿಂತಿರುಗುವ ಸಾಧ್ಯತೆಗಳು ಹೆಚ್ಚಿದ್ದು, 3ನೇ ಟೆಸ್ಟ್ ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

#INDvAUS ಕೊನೆಯ 2 ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ!

Tap to resize

Latest Videos

ಮೆಲ್ಬರ್ನ್‌ನಲ್ಲಿ ಡಿ. 26 ರಿಂದ 3ನೇ ಟೆಸ್ಟ್ ಆರಂಭವಾಗಲಿದೆ. ರೋಹಿತ್, ಅಡಿಲೇಡ್ ಟೆಸ್ಟ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದರು. ಇದರಿಂದಾಗಿ ಪರ್ತ್ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಜತೆಗೆ ಪಾದದ ನೋವಿಗೆ ತುತ್ತಾಗಿರುವ ಪೃಥ್ವಿ ಶಾ ಕೂಡ ಅಲಭ್ಯರಾಗಿದ್ದಾರೆ. ಹಾಗಾಗಿ ಮುಂದಿನ 2 ಟೆಸ್ಟ್‌ಗಳಿಗೆ ಕನ್ನಡಿಗ ಮಯಾಂಕ್ ಅಗರ್’ವಾಲ್ ಮತ್ತು ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಪರ್ತ್ ಟೆಸ್ಟ್: ಆಸಿಸ್’ಗೆ ಶರಣಾದ ಟೀಂ ಇಂಡಿಯಾ

ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉಭಯ ತಂಡಗಳು1-1 ರ ಗೆಲುವಿನ ಸಮಬಲ ಸಾಧಿಸಿದ್ದು, ಇನ್ನುಳಿದ 2 ಟೆಸ್ಟ್ ಪಂದ್ಯಗಳಲ್ಲಿ ಯಾರು ಜಯಭೇರಿ ಬಾರಿಸಲಿದ್ದಾರೆ ಎನ್ನುವುದನ್ನು ಕಾದು ನೊಡಬೇಕಿದೆ. ಭಾರತ ಇದುವರೆಗೂ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಸರಣಿ ಗೆಲುವಿನ ಕನವರಿಕೆಯಲ್ಲಿದೆ.

ಕೆಎಲ್ ರಾಹುಲ್ ಕಳಪೆ ಪ್ರದರ್ಶನ: ರೊಚ್ಚಿಗೆದ್ದ ಟ್ವಿಟರಿಗರು !

click me!