ಇಂಜುರಿಯಿಂದ ರೋಹಿತ್ ಶರ್ಮಾ ಚೇತರಿಕೆ- ರಾಜಸ್ಥಾನ ವಿರುದ್ಧ ಕಣಕ್ಕೆ?

Published : Apr 12, 2019, 11:08 PM IST
ಇಂಜುರಿಯಿಂದ ರೋಹಿತ್ ಶರ್ಮಾ ಚೇತರಿಕೆ- ರಾಜಸ್ಥಾನ ವಿರುದ್ಧ ಕಣಕ್ಕೆ?

ಸಾರಾಂಶ

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಲಭ್ಯರಿದ್ದಾರ? ಈ ಕುರಿತು ತಂಡದ ನಿರ್ದೇಶಕ ಜಹೀರ್ ಖಾನ್ ಹೇಳಿದ್ದೇನು? ಇಲ್ಲಿದೆ ವಿವರ.

ಮುಂಬೈ(ಏ.12): ಅಭ್ಯಾಸದ ವೇಳೆ ಇಂಜುರಿಗೆ ತುತ್ತಾದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಕಳೆದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ರೋಹಿತ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಶನಿವಾರ(ಏ.13)ರಂದು ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಿದ್ದಾರೆ.

ಇದನ್ನೂ ಓದಿ: ಸಿಕ್ಸರ್ ಬಾರಿಸಿದ ಜಡೇಜಾ ತಲೆ ಮೇಲೆ ಹೊಡೆದ ಧೋನಿ!

ತವರಿನಲ್ಲಿ ಮುಂಬೈ ಇಂಡಿಯನ್ಸ್ ರಾಜಸ್ಥಾನ ರಾಯಲ್ಸ್ ವಿರುದ್ದ ಹೋರಾಟ ನಡೆಸಲಿದೆ. ಗಾಯದಿಂದ ಗುಣಮುಖರಾಗಿರುವ ರೋಹಿತ್ ಶರ್ಮಾ, ರಾಜಸ್ತಾನ ವಿರುದ್ದದ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಆಪರೇಶನ್ ನಿರ್ದೇಶಕ ಜಹೀರ್ ಖಾನ್ ಹೇಳಿದ್ದಾರೆ. 

ಇದನ್ನೂ ಓದಿ: ಗೆಲುವಿಗಾಗಿ RCB ಹೊಸ ತಂತ್ರ- ತಂಡ ಸೇರಿಕೊಂಡ ಸ್ಟಾರ್ ಕ್ರಿಕೆಟಿಗ!

ಇಂಜುರಿ ಕಾರಣದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಿದ್ದರು. ಹೀಗಾಗಿ ಕೀರನ್ ಪೊಲಾರ್ಡ್ ತಂಡದ ನಾಯಕತ್ವ ವಹಿಸಿದ್ದರು. ಈ ಪಂದ್ಯದಲ್ಲಿ ಪೊಲಾರ್ಡ್ ಏಕಾಂಗಿ ಹೋರಾಟ ನೀಡಿದ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಇದೀಗ ರೋಹಿತ್ ಆಗಮನದಿಂದ ತಂಡ  ಮತ್ತಷ್ಟು ಬಲಿಷ್ಠವಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನೆಲ್ ಮೆಸ್ಸಿ ನೋಡಲಾಗದೇ ರೊಚ್ಚಿಗೆದ್ದ ಕೋಲ್ಕತಾ! ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಪೊಲೀಸರಿಂದ ಲಾಠಿಚಾರ್ಜ್
ಮೆಸ್ಸಿ ಭೇಟಿ ವೇಳೆ ಕೋಲ್ಕತಾದಲ್ಲಿ ರಾದ್ಧಾಂತ: ಆಟಗಾರನ ಕಣ್ತುಂಬಿಕೊಳ್ಳಲು ಆಗದ್ದಕ್ಕೆ ಅಭಿಮಾನಿಗಳ ಆಕ್ರೋಶ