ಟೆನಿಸ್ ಡಬಲ್ಸ್‌ ರ್‍ಯಾಂಕಿಂಗ್‌: ಟಾಪ್‌-5ಗೆ ಬೋಪಣ್ಣ ಎಂಟ್ರಿ!

By Naveen KodaseFirst Published Oct 15, 2023, 12:19 PM IST
Highlights

2013ರಲ್ಲಿ 3ನೇ ಸ್ಥಾನ ಪಡೆದಿದ್ದು ಬೋಪಣ್ಣರ ಈ ವರೆಗಿನ ಶ್ರೇಷ್ಠ ಸಾಧನೆ ಎನಿಸಿದೆ. ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಟೂರ್ನಿಯಲ್ಲಿ ಆಡುತ್ತಿರುವ ಕರ್ನಾಟಕದ 43 ವರ್ಷದ ಬೋಪಣ್ಣ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಫ್ಯಾಬಿಯನ್‌ ರೆಬೋಲ್‌-ಸ್ಯಾಡಿಯೊ ಡೊಂಬಿಯಾ ವಿರುದ್ಧ 7-6(7/0), 4-6, 10-2 ಅಂತರದಲ್ಲಿ ಗೆದ್ದರು.

ಶಾಂಘೈ(ಅ.15): ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಶಾಂಘೈ ಮಾಸ್ಟರ್ಸ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಆ ಮೂಲಕ ದಶಕದ ಬಳಿಕ ಎಟಿಪಿ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಿಗೂ ಮುನ್ನ 7ನೇ ಸ್ಥಾನದಲ್ಲಿದ್ದ ಬೋಪಣ್ಣ ಸದ್ಯ 5ನೇ ಸ್ಥಾನಕ್ಕೇರಿದ್ದಾರೆ. 2013ರಲ್ಲಿ 3ನೇ ಸ್ಥಾನ ಪಡೆದಿದ್ದು ಬೋಪಣ್ಣರ ಈ ವರೆಗಿನ ಶ್ರೇಷ್ಠ ಸಾಧನೆ ಎನಿಸಿದೆ. ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಟೂರ್ನಿಯಲ್ಲಿ ಆಡುತ್ತಿರುವ ಕರ್ನಾಟಕದ 43 ವರ್ಷದ ಬೋಪಣ್ಣ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಫ್ಯಾಬಿಯನ್‌ ರೆಬೋಲ್‌-ಸ್ಯಾಡಿಯೊ ಡೊಂಬಿಯಾ ವಿರುದ್ಧ 7-6(7/0), 4-6, 10-2 ಅಂತರದಲ್ಲಿ ಗೆದ್ದರು.

ಆರ್ಕ್‌ಟಿಕ್‌ ಓಪನ್‌: ಸಿಂಧು ಸೆಮೀಸಲ್ಲಿ ಸೋತು ಔಟ್‌

Latest Videos

ವ್ಯಾನ್ಟಾ(ಫಿನ್ಲೆಂಡ್‌): ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಆರ್ಕ್‌ಟಿಕ್‌ ಓಪನ್‌ ಸೂಪರ್ 500 ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಇದರೊಂದಿಗೆ 2023ರಲ್ಲಿ ಸಿಂಧು ಅವರ ಪ್ರಶಸ್ತಿ ಬರ ಮುಂದುವರಿದಿದೆ. ಸ್ಪೇನ್‌ ಮಾಸ್ಟರ್‌ ಫೈನಲ್‌ಗೇರಿದ್ದು ಸಿಂಧು ಅವರ ಈ ವರ್ಷದ ಶ್ರೇಷ್ಠ ಸಾಧನೆ. ಶನಿವಾರ 8ನೇ ಶ್ರೇಯಾಂಕಿತೆ ಸಿಂಧು ಮಹಿಳಾ ಸಿಂಗಲ್ಸ್‌ ಸೆಮೀಸ್‌ನಲ್ಲಿ ವಿಶ್ವ ನಂ.11, ಚೀನಾದ ವ್ಯಾಂಗ್‌ ಝಿ ಯಿ ವಿರುದ್ಧ 12-21, 21-11, 7-21 ಅಂತರದಲ್ಲಿ ಸೋಲನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತೀಯರ ಅಭಿಯಾನ ಕೊನೆಗೊಂಡಿತು.

World Cup 2023: ಮೋದಿ ಸ್ಟೇಡಿಯಂನಲ್ಲಿ ಪಾಕ್‌ಗೆ ಬೆಂಡೆತ್ತಿದ ಭಾರತ, ದಾಖಲೆಗಳ ಸಾಮ್ರಾಜ್ಯ!

400 ಮೀ. ಹರ್ಡಲ್ಸ್‌ನಲ್ಲಿ ರಾಜ್ಯದ ಸಿಂಚಲ್‌ಗೆ ಚಿನ್ನ

ಬೆಂಗಳೂರು: 62ನೇ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸಿಂಚಲ್‌ ಕಾವೇರಮ್ಮ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ ಮಹಿಳೆಯರ ವಿಭಾಗದ ಓಟದಲ್ಲಿ ಸಿಂಚಲ್‌ 57.88 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನ ಪಡೆದರು. ಮಹಿಳೆಯರ ಜಾವೆಲಿನ್‌ ಎಸೆತದಲ್ಲಿ ಉಡುಪಿಯ ಕರಿಶ್ಮಾ 52.86 ಮೀ. ದೂರಕ್ಕೆ ಎಸೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

World Cup 2023: 'ಜಯ್ ಶಾ' ಹೆಸರಿನ ವ್ಯಕ್ತಿಯಿಂದ ಟಿಕೆಟ್ ವಂಚನೆ..! ಮೋಸಗಾರ ಆರೆಸ್ಟ್..!

ಮಹಿಳೆಯರ ಹೈಜಂಪ್‌ನಲ್ಲಿ ಅಭಿನಯ ಶೆಟ್ಟಿ 1.76 ಮೀ. ಎತ್ತರಕ್ಕೆ ನೆಗೆದು ಕಂಚಿನ ಪದಕ ಪಡೆದರು. ಇದೇ ವೇಳೆ ಪುರುಷರ 200 ಮೀ. ಓಟದಲ್ಲಿ ಶಶಿಕಾಂತ್‌ ಅಂಗಡಿ 21.14 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿಗೆ ತೃಪ್ತಿಪಟ್ಟುಕೊಂಡರು. ಈ ನಾಲ್ವರೂ ರೈಲ್ವೇಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಭಾರತದ ಗೆಲುವಿಗೆ ಮೋದಿ, ಶಾ ಸಂತಸ

ನವದೆಹಲಿ: ಪಾಕ್‌ ವಿರುದ್ಧದ ಭಾರತದ ಬೃಹತ್‌ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಅಹಮದಾಬಾದ್‌ನಲ್ಲಿ ಭಾರತ ಅಮೋಘ, ಶ್ರೇಷ್ಠ ಗೆಲುವು ದಾಖಲಿಸಿದೆ. ತಂಡಕ್ಕೆ ಅಭಿನಂದನೆ’ ಎಂದಿರುವ ಅವರು, ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದಾರೆ.

ಇನ್ನು, ಕ್ರೀಡಾಂಗಣದಲ್ಲಿ ಕೂತು ಪಂದ್ಯ ವೀಕ್ಷಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಅದ್ಭುತ ಗೆಲುವು ಸಾಧಿಸಿದ ನಮ್ಮ ತಂಡಕ್ಕೆ ಅಭಿನಂದನೆಗಳು. ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾದ ತಡೆ ರಹಿತ ಗೆಲುವಿನ ಓಟ ಮುಂದುವರಿದಿದೆ. ದೇಶ ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದ್ದೀರಿ’ ಎಂದು ಆಟಗಾರರನ್ನು ಶ್ಲಾಘಿಸಿದ್ದಾರೆ.

ಏಕದಿನದಲ್ಲಿ ರೋಹಿತ್‌ 300 ಸಿಕ್ಸರ್‌: 3ನೇ ಬ್ಯಾಟರ್‌

ಪಾಕ್‌ ವಿರುದ್ಧ 6 ಸಿಕ್ಸರ್‌ ಚಚ್ಚಿದ ರೋಹಿತ್‌, ಏಕದಿನ ಕ್ರಿಕೆಟ್‌ನಲ್ಲಿ 300 ಸಿಕ್ಸರ್‌ ಮೈಲಿಗಲ್ಲು ತಲುಪಿದರು. ಈ ಸಾಧನೆ ಮಾಡಿದ ಭಾರತದ ಮೊದಲ, ವಿಶ್ವದ 3ನೇ ಬ್ಯಾಟರ್‌ ಎನಿಸಿದರು. ಪಾಕಿಸ್ತಾನದ ಶಾಹಿದ್‌ ಅಫ್ರಿದಿ 351 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ವಿಂಡೀಸ್‌ನ ಕ್ರಿಸ್‌ ಗೇಲ್‌ 331 ಸಿಕ್ಸರ್‌ನೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಸದ್ಯ 303 ಸಿಕ್ಸರ್‌ಗಳೊಂದಿಗೆ ರೋಹಿತ್‌ 3ನೇ ಸ್ಥಾನದಲ್ಲಿದ್ದಾರೆ.
 

click me!