French Open 2024: ರೋಹನ್ ಬೋಪಣ್ಣ-ಎಬೆನ್ ಸೆಮಿಗೆ ಲಗ್ಗೆ

Published : Jun 06, 2024, 10:13 AM IST
French Open 2024: ರೋಹನ್ ಬೋಪಣ್ಣ-ಎಬೆನ್ ಸೆಮಿಗೆ ಲಗ್ಗೆ

ಸಾರಾಂಶ

ಆಸ್ಟ್ರೇಲಿಯಾದ ಮ್ಯಾಥ್ಯ ಎಲ್ಲೆನ್ ಜೊತೆಗೂಡಿ ಕಣಕ್ಕಿಳಿದಿರುವ ವರ್ಷದ ಬೋಪಣ್ಣ ಬುಧವಾರ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಲಿಯಂನ ಸ್ಯಾಂಡರ್‌ಗಿಲ್ ಹಾಗೂ ಜೋರನ್ 7-6 (7/3), 5-7, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಪ್ಯಾರಿಸ್: ಭಾರತದ ಹಿರಿಯ ಟೆನಿಸಿಗ, ಕನ್ನಡಿಗ ರೋಹನ್ ಬೋಪಣ್ಣ ಫ್ರೆಂಚ್ ಓಪನ್ ಗ್ರಾನ್‌ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 

ಆಸ್ಟ್ರೇಲಿಯಾದ ಮ್ಯಾಥ್ಯ ಎಲ್ಲೆನ್ ಜೊತೆಗೂಡಿ ಕಣಕ್ಕಿಳಿದಿರುವ ವರ್ಷದ ಬೋಪಣ್ಣ ಬುಧವಾರ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಲಿಯಂನ ಸ್ಯಾಂಡರ್‌ಗಿಲ್ ಹಾಗೂ ಜೋರನ್ 7-6 (7/3), 5-7, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ವರ್ಷ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ 2ನೇ ಶ್ರೇಯಾಂಕಿತ ಇಂಡೋ-ಆಸೀಸ್ ಜೋಡಿ, ಟೂರ್ನಿಯ ಅಂತಿಮ 4ರ ಪಂದ್ಯದಲ್ಲಿ ಇಟಲಿಯ ಸಿಮೊನ್ ಬೊಲೆಲ್ಲಿ- ಆ್ಯಂಡ್ರಿಯಾ ವಿರುದ್ಧ ಸೆಣಸಲಿದೆ.

ಚೊಚ್ಚಲ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೆ ಪೌಲಿನಿ: ಸಬಲೆಂಕಾ, ರಬೈಕೆನಾಗೆ ಶಾಕ್‌

ಪ್ಯಾರಿಸ್‌: ಇಟಲಿಯ ಜಾಸ್ಮಿನ್‌ ಪೌಲಿನಿ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗ್ರ್ಯಾನ್‌ ಸ್ಲಾಂಗಳಲ್ಲಿ ಇದೇ ಮೊದಲ ಬಾರಿಗೆ ಅವರು ಅಂತಿಮ 4ರ ಸುತ್ತು ಪ್ರವೇಶಿಸಿದ್ದು, ಫೈನಲ್‌ಗೇರುವ ನಿರೀಕ್ಷೆಯಲ್ಲಿದ್ದಾರೆ.

ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ನಲ್ಲಿ 4ನೇ ಸುತ್ತಿಗೇರಿದ್ದ 12ನೇ ಶ್ರೇಯಾಂಕಿತೆ ಪೌಲಿನಿ ಬುಧವಾರ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ವಿಂಬಲ್ಡನ್‌ ಚಾಂಪಿಯನ್‌ ಕಜಕಸ್ತಾನದ ಎಲೈನಾ ರಬೈಕೆನಾ ವಿರುದ್ಧ 6-2, 4-6, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಬಾರಿ ಆಸ್ಟ್ರೇಲಿಯನ್‌ ಓಪನ್‌ಗೂ ಮುನ್ನ 16 ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಆಡಿದ್ದ ಪೌಲನಿ ಒಮ್ಮೆಯೂ 2ನೇ ಸುತ್ತು ದಾಟಿರಲಿಲ್ಲ.

ಟಿ20 ವಿಶ್ವಕಪ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ ಈ 6 ಟೀಂ ಇಂಡಿಯಾ ಕ್ರಿಕೆಟರ್ಸ್..!

ಇದೇ ವೇಳೆ 2ನೇ ಶ್ರೇಯಾಂಕಿತೆ, ಬೆಲಾರಸ್‌ನ ಅರೈನಾ ಸಬಲೆಂಕಾ ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಮಿರ್ರಾ ಆ್ಯಂಡ್ರೀವಾ ವಿರುದ್ಧ 7-6, 4-6, 4-6 ಸೆಟ್‌ಗಳಲ್ಲಿ ಸೋತು ಅಭಿಯಾನ ಕೊನೆಗೊಳಿಸಿದರು.

ಸಿಟ್ಸಿಪಾಸ್‌ ವಿರುದ್ಧ ಆಲ್ಕರಜ್‌ಗೆ ಗೆಲುವು

ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.3, ಸ್ಪೇನ್‌ನ 21ರ ಕಾರ್ಲೊಸ್‌ ಆಲ್ಕರಜ್‌ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌ ವಿರುದ್ಧ 6-3, 7-6(7/3), 6-4 ನೇ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ 2021ರ ಬಳಿಕ ಮತ್ತೊಮ್ಮೆ ಫ್ರೆಂಚ್‌ ಓಪನ್‌ ಫೈನಲ್‌ಗೇರುವ, ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ಗ್ರೀಕ್‌ ಆಟಗಾರನ ಕನಸು ಭಗ್ನಗೊಂಡಿತು.

ಮಂಡಿ ಗಾಯ: ಫ್ರೆಂಚ್‌ ಓಪನ್‌ನಿಂದಲೇ ನಿರ್ಗಮಿಸಿದ ಜೋಕೋವಿಚ್‌

ಆಲ್ಕರಜ್‌ ಸೆಮೀಸ್‌ನಲ್ಲಿ ಇಟಲಿಯ 2ನೇ ಶ್ರೇಯಾಂಕಿತ ಯಾನ್ನಿಕ್‌ ಸಿನ್ನರ್ ವಿರುದ್ಧ ಸೆಣಸಲಿದ್ದಾರೆ. ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್ ಸಿನ್ನರ್‌, ಕ್ವಾರ್ಟರ್‌ನಲ್ಲಿ 10ನೇ ಶ್ರೇಯಾಂಕಿತ ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೊವ್‌ರನ್ನು ಮಣಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಡರ್‌-19 ಏಕದಿನ ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ!
ಲಂಕಾ ಎದುರು ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟ ಹರ್ಮನ್‌ಪ್ರೀತ್ ಕೌರ್ ಪಡೆ!