ಸೋಮವಾರ ರಾತ್ರಿ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ಜೋಕೋ ವಿಶ್ವ ನಂ.23, ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೆಲೊ ವಿರುದ್ಧ 6-1, 5-7, 3-6, 7-5, 6-3 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದ್ದರು.

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ರ ಕನಸು ಭಗ್ನಗೊಂಡಿದೆ. ಮಂಗಳವಾರ ಮಂಡಿ ಗಾಯದ ಕಾರಣದಿಂದ ಅವರು ಟೂರ್ನಿಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದು, ಇದನ್ನು ಆಯೋಜಕರು ಖಚಿತಪಡಿಸಿದ್ದಾರೆ.

ಸೋಮವಾರ ರಾತ್ರಿ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ಜೋಕೋ ವಿಶ್ವ ನಂ.23, ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೆಲೊ ವಿರುದ್ಧ 6-1, 5-7, 3-6, 7-5, 6-3 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದ್ದರು.

Scroll to load tweet…

2 ಮತ್ತು 3ನೇ ಸೆಟ್‌ ಕಳೆದುಕೊಂಡು, 4ನೇ ಸೆಟ್‌ನಲ್ಲಿ 5-5ರ ಅಂಚಿಗೆ ತಲುಪಿ ಸೋಲುವ ಭೀತಿಯಲ್ಲಿದ್ದರೂ ಹೋರಾಟ ಬಿಡದ ಜೋಕೋ ತಾವೇಕೆ ವಿಶ್ವ ಶ್ರೇಷ್ಠ ಟೆನಿಸಿಗ ಎಂಬುದನ್ನು ತೋರಿಸಿಕೊಟ್ಟರು. ಪಂದ್ಯದ ನಡುವೆ ಮಂಡಿ ಗಾಯಕ್ಕೆ ತುತ್ತಾದ ಜೋಕೋ ಅಂಗಳದಲ್ಲೇ ಚಿಕಿತ್ಸೆ ಪಡೆದು ಆಟ ಪೂರ್ಣಗೊಳಿಸಿದರು.

ಆದರೆ ಗಾಯದ ಪ್ರಮಾಣ ಹೆಚ್ಚಿರುವ ಕಾರಣ ಟೂರ್ನಿಯಿಂದ ಹೊರನಡೆದಿದ್ದಾರೆ. ಅವರ ವಿರುದ್ಧ ಕ್ವಾರ್ಟರ್‌ನಲ್ಲಿ ಸೆಣಸಬೇಕಿದ್ದ ನಾರ್ವೆಯ ಕ್ಯಾಸ್ಪೆರ್ ರುಡ್‌ ನೇರವಾಗಿ ಸೆಮೀಸ್‌ಗೇರಿದ್ದಾರೆ. ವಿಶ್ವ ನಂ.7 ರುಡ್‌ ಅವರು ಕಳೆದೆರಡು ಆವೃತ್ತಿಗಳಲ್ಲಿ ಫ್ರೆಂಚ್‌ ಓಪನ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು.

ಇಗಾ ಸ್ವಿಯಾಟೆಕ್, ಕೊಕೊ ಗಾಫ್ ಸೆಮೀಸ್‌ ಪ್ರವೇಶ

ಪ್ಯಾರಿಸ್: ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಶ್ವ ನಂ.1 ಇಗಾ ಸ್ವಿಯಾಟೆಕ್, ಚೊಚ್ಚಲ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸ ದಲ್ಲಿರುವ ಕೊಕೊ ಗಾಫ್ ಫ್ರೆಂಚ್ ಓಪನ್ ಗ್ಯಾನ್‌ಸ್ಲಾಂ ಟೆನಿಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಂಗಳವಾರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಚೆಕ್ ಗಣರಾಜ್ಯದ 5ನೇ ಶ್ರೇಯಾಂಕಿತ ಮಾರ್ಕೆಟಾ ವೊಂಪ್ರೊಸೋವಾ ವಿರುದ್ಧ 6-0, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ಹಾಲಿ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಗಾಫ್ ಟ್ಯುನೀಶಿಯಾದ 8ನೇ ಶ್ರೇಯಾಂಕಿತೆ ಒನ್ಸ್ ಜಬು‌ ಅವರನ್ನು 4-6, 6-2, 6-3 ಸೆಟ್‌ಗಳಲ್ಲಿ ಸೋಲಿಸಿ ಅಂತಿಮ 4ರ ಘಟ್ಟ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಇಗಾ ಹಾಗೂ ಗಾಫ್ ಪರಸ್ಪರ ಸೆಣಸಾಡಲಿದ್ದು, ಭಾರಿ ಪೈಪೋಟಿ ನಿರೀಕ್ಷಿಸ ಲಾಗಿದೆ. ಇದೇ ವೇಳೆ ಪುರುಷರ ಸಿಂಗಲ್ಸ್ ನಲ್ಲಿ 4ನೇ ಶ್ರೇಯಾಂಕಿತ ಜೈರೆವ್ ಕ್ವಾರ್ಟರ್ ಫೈನಲ್‌ಗೇರಿದರು.

ಒಲಿಂಪಿಕ್ಸ್‌ನಲ್ಲಿ ಶ್ರೀರಾಂ ಜತೆ ಬೋಪಣ್ಣ ಕಣಕ್ಕೆ

ನವದೆಹಲಿ: ಪ್ಯಾರಿ ರಿಸ್ ಒಲಿಂಪಿಕ್ಸ್‌ ಪುರುಷರ ಡಬಲ್ಸ್‌ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಅವರು ತಮಿಳುನಾಡಿನ ಶ್ರೀರಾಮ್ ಬಾಲಾಜಿ ಜೊತೆ ಕಣಕ್ಕಿಳಿಯಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ತಮ್ಮ ಸಹ ಆಟಗಾರನ ಆಯ್ಕೆ ಮಾಡಲು ಭಾರತೀಯ ಟೆನಿಸ್ ಸಂಸ್ಥೆ(ಎಐಟಿಎ) ಬೋಪಣ್ಣಗೆ ಅವಕಾಶ ನೀಡಿತ್ತು. ಯೂಕಿ ಭಾಂಬ್ರಿ ಕೂಡಾ ರೇಸ್‌ನಲ್ಲಿ ದ್ದರೂ ಬೋಪಣ್ಣ ಬಾಲಾಜಿಯನ್ನು ಆಯ್ಕೆಮಾಡಿದ್ದಾರೆ.