ರಾಜಸ್ಥಾನಕ್ಕೆ ರೋಚಕ ಜಯ ತಂದಿತ್ತ ಆರ್ಚರ್

By Web DeskFirst Published Apr 26, 2019, 12:17 AM IST
Highlights

ಕೋಲ್ಕತಾ ನೈಟ್’ರೈಡರ್ಸ್ ತಂಡ ಸತತ 6ನೇ ಸೋಲು ಕಂಡು ಪ್ಲೇ ಆಫ್ ಪ್ರವೇಶದ ಹಾದಿಯನ್ನು ಮತ್ತಷ್ಟು ಕಠಿಣವಾಗಿಸಿಕೊಂಡಿದೆ.

ಕೋಲ್ಕತಾ[ಏ.26]: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯವನ್ನು ಕೊನೆಗೂ ಕೈವಶ ಮಾಡಿಕೊಳ್ಳುವಲ್ಲಿ ರಾಜಸ್ಥಾನ ರಾಯಲ್ಸ್ ಯಶಸ್ವಿಯಾಗಿದೆ. ಕೊನೆಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಜೋಪ್ರಾ ಆರ್ಚರ್ ರಾಜಸ್ಥಾನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.  ಇನ್ನು ಕೋಲ್ಕತಾ ನೈಟ್’ರೈಡರ್ಸ್ ತಂಡ ಸತತ 6ನೇ ಸೋಲು ಕಂಡು ಪ್ಲೇ ಆಫ್ ಪ್ರವೇಶದ ಹಾದಿಯನ್ನು ಮತ್ತಷ್ಟು ಕಠಿಣವಾಗಿಸಿಕೊಂಡಿದೆ.

ಕೋಲ್ಕತಾ ನೀಡಿದ್ದ 176 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಸಂಜು ಸ್ಯಾಮ್ಸನ್-ಅಜಿಂಕ್ಯ ರಹಾನೆ ಜೋಡಿ 53 ರನ್’ಗಳ ಜತೆಯಾಟ ನಿಭಾಯಿಸಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ರಹಾನೆ[34], ನರೈನ್ ಬೌಲಿಂಗ್’ನಲ್ಲಿ ಎಲ್’ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಸ್ಯಾಮ್ಸನ್[22] ಕೂಡಾ ಪೆವಿಲಿಯನ್ ಸೇರಿದರು. ಸ್ಮಿತ್ 2 ಹಾಗೂ ಬೆನ್ ಸ್ಟೋಕ್ಸ್ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ 78 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜಸ್ಥಾನಕ್ಕೆ ರಿಯಾನ್ ಪರಾಗ್ ಆಸರೆಯಾದರು. ಕೇವಲ 31 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 47 ರನ್ ಸಿಡಿಸಿದರು. ಕನ್ನಡಿಗ ಶ್ರೇಯಸ್ ಗೋಪಾಲ್ 4 ಬೌಂಡರಿ ಸಹಿತ 18 ರನ್ ಬಾರಿಸಿ ರನ್ ವೇಗ ಹೆಚ್ಚಿಸಿದರು. ಇನ್ನು ಕೊನೆಯಲ್ಲಿ ಅಬ್ಬರಿಸಿದ ಜೋಪ್ರಾ ಆರ್ಚರ್ ಕೇವಲ 12 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ 27 ರನ್ ಬಾರಿಸುವ ಮೂಲಕ ಇನ್ನೂ 4 ಎಸೆತ ಬಾಕಿಯಿರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿರು.

ದಿನೇಶ್ ಕಾರ್ತಿಕ್ ಅಬ್ಬರ: ಸ್ಮಿತ್ ಪಡೆಗೆ ಸವಾಲಿನ ಗುರಿ

ಇದಕ್ಕೂ ಮೊದಲು ನಾಯಕ ದಿನೇಶ್ ಕಾರ್ತಿಕ್ 97 ರನ್ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ ತಂಡ 175 ರನ್ ಬಾರಿಸಿತ್ತು.

 

click me!
Last Updated Apr 26, 2019, 12:23 AM IST
click me!