
ಪೋರ್ಟ್ ಆಫ್ ಸ್ಪೇನ್(ಜೂ.24): ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವುದು ಸಾಮಾನ್ಯ. ಸದ್ಯ ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಫೋಟೊವೊಂದನ್ನು ಟ್ವೀಟ್ ಮಾಡಿ, ಅವರನ್ನು ಕಿಚಾಯಿಸಲಾಗುತ್ತಿದೆ. ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯ ನಡೆಯುವ ವೇಳೆ ವಿರಾಟ್ ಕೊಹ್ಲಿ ಪೆವಿಲಿಯನ್‌ನಲ್ಲಿರುವ ಕಿಟಕಿಯಲ್ಲಿ ಇಣುಕಿ ನೋಡುತ್ತಿರುವ ಫೋಟೊವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಟ್ವಿಟರ್‌ನಲ್ಲಿ ಈ ಫೋಟೊ ಹರಿದಾಡುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಶೀರ್ಷಿಕೆ ನೀಡುತ್ತಿದ್ದಾರೆ. ‘ರವೀಂದ್ರ ಜಡೇಜಾ ಆಚೆ ಬಾ... ಹಾರ್ದಿಕ್ ಪಾಂಡ್ಯ ಹೊಡೆಯೊಲ್ಲ’.... ‘ಅನುಷ್ಕಾ ನೀನು ಇನ್ನೂ ರೆಡಿ ಆಗಿಲ್ವಾ, ಹಾಗಾದ್ರೆ ನಾನೊಬ್ಬನೇ ಹೋಗ್ತೀನಿ’... ‘ಧೋನಿ ಬಾಯ್ ಡಿಆರ್‌ಎಸ್ ತೆಗೆದುಕೊಳ್ಳುವುದೋ ಬೇಡವೋ’... ಹೀಗೆ ತರಹೇವಾರಿ ಶೀರ್ಷಿಕೆಗಳನ್ನು ಹಾಕುತ್ತಿದ್ದು, ಸಖತ್ ಟ್ರೆಂಡ್ ಆಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.