ಕುಂಬ್ಳೆ ದಾಖಲೆ ಸರಿಗಟ್ಟಿದ ಯುವ ಕ್ರಿಕೆಟಿಗ : ಇನ್ನಿಂಗ್ಸ್'ನ ಎಲ್ಲ 10 ವಿಕೇಟ್ ಕಬಳಿಕೆ

Published : Jun 24, 2017, 07:47 PM ISTUpdated : Apr 11, 2018, 01:12 PM IST
ಕುಂಬ್ಳೆ ದಾಖಲೆ ಸರಿಗಟ್ಟಿದ ಯುವ ಕ್ರಿಕೆಟಿಗ : ಇನ್ನಿಂಗ್ಸ್'ನ ಎಲ್ಲ 10 ವಿಕೇಟ್ ಕಬಳಿಕೆ

ಸಾರಾಂಶ

ಲಾಯ್ಡ್ಸ್‌ ತಂಡವನ್ನು ಪ್ರತಿನಿಧಿಸಿದ್ದ ವರುಣ್ ಬಲಗೈ ವೇಗದ ಬೌಲರ್ ಆಗಿದ್ದು ಎದುರಾಳಿ ತಂಡದ 10 ವಿಕೆಟ್'ಗಳನ್ನು 8 ಓವರ್'ಗಳಲ್ಲಿ 36 ರನ್ ನೀಡಿ ಕಬಳಿಸಿದ್ದಾನೆ. ಔಟ್ ಮಾಡಿದ 10 ವಿಕೆಟ್'ಗಳಲ್ಲಿ ಐವರು ಬೌಲ್ಡ್, ಇಬ್ಬರು ಎಲ್'ಬಿ ಉಳಿದ ಮೂವರು  ಬ್ಯಾಟ್ಸ್‌ಮನ್‌ಗಳು ಕ್ಯಾಚ್‌ ನೀಡುವ ಮೂಲಕ ಪೆವಿಲಿಯನ್'ಗೆ ತೆರಳಿದ್ದಾರೆ. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿರುವುದು ಮತ್ತೊಂದು ವಿಶೇಷ.

ಬೆಂಗಳೂರು(ಜೂ.24): ಯುವ ಕ್ರಿಕೆಟಿಗನೊಬ್ಬ ಭಾರತದ ಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾನೆ. ಕೆಎಸ್‌ಸಿಎ ಆಯೋಜಿಸಿದ್ದ ರಾಯಚೂರು ವಲಯದ 3ನೇ ವಲಯ ಕ್ರಿಕೆಟ್‌ ಟೂರ್ನಿಯ ಒಂದೇ ಪಂದ್ಯದಲ್ಲಿ ವರುಣ್‌ ಸೋರಗಾವಿ ಎಂಬಾತ ಎಲ್ಲಾ ಹತ್ತು ವಿಕೆಟ್‌ಗಳನ್ನು ಉರುಳಿಸಿದ್ದಾನೆ. ಈ ಸಾಧನೆ ಮೂಡಿ ಬಂದಿದ್ದು ಬಾಗಲಕೋಟೆಯ ಲಾಯ್ಡ್ಸ್‌ ಸ್ಪೋರ್ಟ್ಸ್‌ ಫೌಂಡೇಷನ್‌ ಮತ್ತು ಗುಳೇದಗುಡ್ಡ ಕ್ಲಬ್‌ ನಡುವಣ ಪಂದ್ಯದಲ್ಲಿ.

ಲಾಯ್ಡ್ಸ್‌ ತಂಡವನ್ನು ಪ್ರತಿನಿಧಿಸಿದ್ದ ವರುಣ್ ಬಲಗೈ ವೇಗದ ಬೌಲರ್ ಆಗಿದ್ದು ಎದುರಾಳಿ ತಂಡದ 10 ವಿಕೆಟ್'ಗಳನ್ನು 8 ಓವರ್'ಗಳಲ್ಲಿ 36 ರನ್ ನೀಡಿ ಕಬಳಿಸಿದ್ದಾನೆ. ಔಟ್ ಮಾಡಿದ 10 ವಿಕೆಟ್'ಗಳಲ್ಲಿ ಐವರು ಬೌಲ್ಡ್, ಇಬ್ಬರು ಎಲ್'ಬಿ ಉಳಿದ ಮೂವರು  ಬ್ಯಾಟ್ಸ್‌ಮನ್‌ಗಳು ಕ್ಯಾಚ್‌ ನೀಡುವ ಮೂಲಕ ಪೆವಿಲಿಯನ್'ಗೆ ತೆರಳಿದ್ದಾರೆ. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿರುವುದು ಮತ್ತೊಂದು ವಿಶೇಷ.

ಬಾಗಲಕೋಟೆ ತಾಲ್ಲೂಕು ಮುಗಳೊಳ್ಳಿಯ ಶ್ರೀಶೈಲ ಸೋರಗಾವಿ ಹಾಗೂ ವೀಣಾ ದಂಪತಿಯ ಪುತ್ರ ವರುಣ್‌ ಬೆಂಗಳೂರಿನ ಯಲಹಂಕದ ಬಿ.ಎಂ.ಎಸ್‌. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2010ರಲ್ಲಿ ಸೇಂಟ್‌ಆ್ಯನ್ಸ್ ಶಾಲೆಯಲ್ಲಿ ಓದುತ್ತಿದ್ದಾಗ 16 ವರ್ಷದ ಒಳಗಿನವರ ರಾಷ್ಟ್ರೀಯ ಶಾಲಾ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ನೂತನ ದಾಖಲೆ
ವಲಯ ಕ್ರಿಕೆಟ್ ಮತ್ತು ರಾಜ್ಯ ಟೂರ್ನಿಗಳ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಬೌಲರ್‌ ಒಬ್ಬ 10 ವಿಕೆಟ್‌ಗಳನ್ನು ಕಬಳಿಸಿರುವುದು ಇದೇ ಮೊದಲಾಗಿದೆ. ಇದನ್ನು ಕೆಎಸ್‌ಸಿಇ ಕೂಡ ಸ್ಪಷ್ಟ ಪಡಿಸಿದೆ. ಅನಿಲ್ ಕುಂಬ್ಳೆ ಅವರು 1999ರಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 74 ರನ್'ಗಳಿಗೆ 10 ವಿಕೆಟ್ ಕಿತ್ತಿದ್ದರು.

ಸ್ಕೋರ್

ಗುಳೇದಗುಡ್ಡ ಕ್ರಿಕೆಟ್‌ ಕ್ಲಬ್‌ 15 ಓವರ್‌ಗಳಲ್ಲಿ 70. ಬಾಗಲಕೋಟೆಯ ಲಾಯ್ಡ್ಸ್‌ ಸ್ಪೋರ್ಟ್ಸ್‌ ಫೌಂಡೇಷನ್‌ 9 ಓವರ್‌ಗಳಲ್ಲಿ 2ಕ್ಕೆ71.

ಫಲಿತಾಂಶ: ಲಾಯ್ಡ್ಸ್‌ ಸ್ಪೋರ್ಟ್ಸ್‌  ತಂಡಕ್ಕೆ 8 ವಿಕೆಟ್ ಗೆಲುವು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?