
ಪೋರ್ಚುಗಲ್(ಮಾ.30): ರಿಯಲ್ ಮ್ಯಾಡ್ರಿಡ್ ಕ್ಲಬ್'ನ ಪೋರ್ಚುಗೀಸ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ 2016-17ರ ಸಾಲಿನಲ್ಲಿ ಗರಿಷ್ಠ ಹಣ ಸಂಪಾದಿಸಿದ ಜಗತ್ತನ ನಂ.1 ಫುಟ್ಬಾಲಿಗ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ತನ್ನ ನಿಕಟ ಸ್ಪರ್ಧಿ ಅರ್ಜೆಂಟೀನಾ ಹಾಗೂ ಬಾರ್ಸಿಲೋನಾದ ಲಯೊನೆಲ್ ಮೆಸ್ಸಿಯನ್ನು ಹಿಂದಿಕ್ಕುವಲ್ಲಿ ರೊನಾಲ್ಡೊ ಯಶಸ್ವಿಯಾಗಿದ್ದಾರೆ.
ರೊನಾಲ್ಡೊ 87.5 ಮಿಲಿಯನ್ ಯೂರೋ (ಅಂದಾಜು 618 ಕೋಟಿ ರೂಪಾಯಿ) ಸಂಪಾದಿಸಿದ್ದಾರೆ ಎಂದು ‘ಫ್ರಾನ್ಸ್ ಫುಟ್ಬಾಲ್' ತನ್ನ ಸಂಚಿಕೆಯಲ್ಲಿ ವರದಿ ಮಾಡಿದೆ.
ಮೆಸ್ಸಿ 76.5 ಮಿಲಿಯನ್ ಯೂರೋ (ಅಂದಾಜು 540 ಕೋಟಿ ರು.) ಸಂಪಾದನೆಯೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್‌ನ ನೇಮಾರ್ (392 ಕೋಟಿ ರು.) ಹಾಗೂ ವೇಲ್ಸ್'ನ ಗೆರಾತ್ ಬೇಲ್ (289) ಸಂಪಾದನೆಯೊಂದಿಗೆ ಕ್ರಮವಾಗಿ 3 ಹಾಗೂ 4ನೇ ಸ್ಥಾನ ಪಡೆದಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್'ನ ಜೋಸ್ ಮೌರೀನೊ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕೋಚ್ ಎಂದು ‘ಫ್ರಾನ್ಸ್ ಫುಟ್ಬಾಲ್' ವರದಿ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.