ಸನ್'ಗೆ ಬೃಹತ್ ಗುರಿ : ಮೋಯಿನ್, ಎಬಿಡಿ ಸ್ಫೋಟಕ ಆಟ

First Published May 17, 2018, 9:55 PM IST
Highlights

ಮೂರನೆ ವಿಕೇಟ್ ಜೊತೆಯಾಟದಲ್ಲಿ ಸ್ಫೋಟಕ ಆಟವಾಡಿದ ಮೋಹಿನ್ ಅಲಿ ಹಾಗೂ ಎಬಿಡಿ ವಿಲಿಯರ್ಸ್ ಜೋಡಿ 9.3 ಓವರ್'ಗಳಲ್ಲಿ 107 ರನ್ ಪೇರಿಸಿದರು. ಮೋಯಿನ್ 34 ಚಂಡುಗಳಲ್ಲಿ 6 ಸಿಕ್ಸ್'ರ್ 2 ಬೌಂಡರಿಯೊಂದಿಗೆ 69 ರನ್ ಬಾರಿಸಿದರೆ, ಎಬಿಡಿ 39 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸ್ ನೊಂದಿಗೆ 65 ಸ್ಫೋಟಿಸಿದರು.

ಬೆಂಗಳೂರು(ಮೇ.17): ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ  ರಾಯಲ್ಸ್ ಚಾಲೆಂಚರ್ಸ್ ಬೆಂಗಳೂರಿನ ಕೊಹ್ಲಿ ಪಡೆ 219 ರನ್'ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದ ಹೈದರಾಬಾದಿನ ನಾಯಕ ಕೇನ್ ವಿಲಿಯಮ್ಸ್'ನ್  ವಿರಾಟ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಮೊದಲ 5 ಓವರ್'ಗಳಾಗುವಷ್ಟರಲ್ಲಿ ನಾಯಕ ಕೊಹ್ಲಿ ಹಾಗೂ ಪಾರ್ಥೀವ್ ಪಟೇಲ್ ಇಬ್ಬರು ಪೆವಿಲಿಯನ್'ಗೆ ತೆರಳಿದರು.  
ಮೂರನೆ ವಿಕೇಟ್ ಜೊತೆಯಾಟದಲ್ಲಿ ಸ್ಫೋಟಕ ಆಟವಾಡಿದ ಮೋಹಿನ್ ಅಲಿ ಹಾಗೂ ಎಬಿಡಿ ವಿಲಿಯರ್ಸ್ ಜೋಡಿ 9.3 ಓವರ್'ಗಳಲ್ಲಿ 107 ರನ್ ಪೇರಿಸಿದರು. ಮೋಯಿನ್ 34 ಚಂಡುಗಳಲ್ಲಿ 6 ಸಿಕ್ಸ್'ರ್ 2 ಬೌಂಡರಿಯೊಂದಿಗೆ 69 ರನ್ ಬಾರಿಸಿದರೆ, ಎಬಿಡಿ 39 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸ್ ನೊಂದಿಗೆ 65 ರನ್ ಸ್ಫೋಟಿಸಿದರು.
ರಶೀದ್ ಖಾನ್'ಗೆ ಇಬ್ಬರು ಔಟಾದ ನಂತರ ಕೊನೆಯ 5 ಓವರ್'ಗಳಿರುವಾಗ ಆಗಮಿಸಿದ ಗ್ರಾಂಡ್'ಹೊಮೆ  17 ಚಂಡುಗಳಲ್ಲಿ 4 ಸಿಕ್ಸ್ , 1 ಬೌಂಡರಿಯೊಂದಿಗೆ  40 ರನ್ ಸಿಡಿಸಿದರು. ಅಂತಿಮವಾಗಿ ಬೆಂಗಳೂರು ತಂಡ 20 ಓವರ್'ಗಳಲ್ಲಿ 218  ರನ್ ಕಲೆ ಹಾಕಿತು. ಹೈದರಾಬಾದ್ ಪರ  ರಶೀದ್ ಖಾನ್  27/3, ಕೌಲ್ 44/2 ವಿಕೇಟ್ ಕಿತ್ತರು

ಸ್ಕೋರ್ 
ಆರ್'ಸಿಬಿ 20 ಓವರ್'ಗಳಲ್ಲಿ 218/6
(ಮೋಯಿನ್ 69, ಎಬಿಡಿ 65, ಗ್ರಾಂಡ್'ಹೊಮೆ 40)

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ

(ವಿವರ ಅಪೂರ್ಣ)

 

Innings Break!

The post a formidable total of 218/6.

Chase coming up in a bit . Stay tuned! pic.twitter.com/B3tH7dOHnp

— IndianPremierLeague (@IPL)
click me!