RCB ಪ್ರದರ್ಶನ ಕೊಹ್ಲಿ ಮೇಲೆ ಪರಿಣಾಮ ಬೀರಲ್ಲ ಎಂದ ಕಿವೀಸ್ ವೇಗಿ..!

By Web DeskFirst Published Apr 18, 2019, 3:56 PM IST
Highlights

ಸತತ ಸೋಲುಗಳಿಂದ ಬಳಲಿ ಬೆಂಡಾಗಿರುವ ಆರ್’ಸಿಬಿ ಪ್ರದರ್ಶನ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ ನ್ಯೂಜಿಲೆಂಡ್ ವೇಗಿ. ಅಷ್ಟಕ್ಕೂ ಯಾವ ವೇಗಿ ಏಕೆ ಹೀಗೆ ಹೇಳಿದ್ರೂ ಅಂತ ನೀವೇ ನೋಡಿ...

ಕೋಲ್ಕತಾ[ಏ.18]: ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ನೀಡುತ್ತಿರುವ ಕಳಪೆ ಪ್ರದರ್ಶನ ಮುಂಬರುವ ವಿಶ್ವಕಪ್ ವೇಳೆ ವಿರಾಟ್ ಕೊಹ್ಲಿ ಆಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂಬರುವ ವಿಶ್ವಕಪ್ ವೇಳೆ ಭಾರತದ ಪರ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನ್ಯೂಜಿಲೆಂಡ್ ತಂಡದ ವೇಗಿ ಲಾಕಿ ಫರ್ಗ್ಯೂಸನ್ ಹೇಳಿದ್ದಾರೆ. 

ವಿರಾಟ್ ಕೊಹ್ಲಿ ಮನೆ ಸೇರಿತು 4 ಕೋಟಿ ರೂಪಾಯಿ ಕಾರು!

‘ನನ್ನ ಪ್ರಕಾರ ಆರ್‌ಸಿಬಿ ಪರವಾಗಿ ಆಡುವುದಕ್ಕೂ, ಭಾರತ ತಂಡದಲ್ಲಿ ಆಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಎರಡು ಸಹ ಸಂಪೂರ್ಣವಾಗಿ ವಿಭಿನ್ನ ತಂಡ ಹಾಗೂ ವಿಭಿನ್ನ ಸ್ವರೂಪದ್ದಾಗಿದೆ’ ಎಂದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ 8 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿ, ಉಳಿದ 7 ಪಂದ್ಯಗಳಲ್ಲಿ ಸೋಲಿನ ನಿರಾಸೆ ಅನುಭವಿಸಿದೆ.

ವಿಶ್ವಕಪ್ 2019: ರಾಯುಡು, ಪಂತ್’ಗೆ ಗುಡ್’ನ್ಯೂಸ್..!

2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಇನ್ನು ಪಾಕಿಸ್ತಾನ ವಿರುದ್ಧ ಜೂನ್ 16ರಂದು ಭಾರತ ಕಾದಾಡಲಿದೆ.  

click me!