ಕೊಹ್ಲಿ ವಿಕೆಟ್ ಪಡೆದ್ರೂ ಜಡ್ಡು ಸಂಭ್ರಮಿಸಲಿಲ್ಲ ಏಕೆ..?

Published : May 07, 2018, 12:19 PM IST
ಕೊಹ್ಲಿ ವಿಕೆಟ್ ಪಡೆದ್ರೂ ಜಡ್ಡು ಸಂಭ್ರಮಿಸಲಿಲ್ಲ ಏಕೆ..?

ಸಾರಾಂಶ

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿರಾಟ್ ವಿಕೆಟ್ ಪಡೆದರೂ ಜಡೇಜಾ ಸಂಭ್ರಮಿಸಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಜಡ್ಡು ಕಾಲೆಳೆದಿದ್ದಾರೆ.

ಪುಣೆ[ಮೇ.07]: ಶನಿವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದಾಗ ತಾನು ಸಂಭ್ರಮಿಸದಿರಲು ಕಾರಣ ಏನೆಂಬುದನ್ನು ಸಿಎಸ್‌'ಕೆ ತಂಡದ ರವೀಂದ್ರ ಜಡೇಜಾ ಇದೀಗ ಬಹಿರಂಗಗೊಳಿಸಿದ್ದಾರೆ. 

‘ಪವರ್ ಪ್ಲೇ ನಂತರ ಎಸೆದ ಮೊದಲ ಓವರ್‌'ನ ಮೊದಲ ಬಾಲ್‌'ನಲ್ಲೇ ವಿಕೆಟ್ ಸಿಗುತ್ತದೆ ಎಂದು ನಾನು ಊಹಿಸಿಯೂ ಇರಲ್ಲಿಲ್ಲ. ಈ ಬಗ್ಗೆ ಚಿಂತಿಸಲೂ ನನಗೆ ಸಮಯ ಇರಲಿಲ್ಲ’ ಎಂದಿದ್ದಾರೆ. ಆದರೆ, ಜಡೇಜಾರ ಈ ಹೇಳಿಕೆ ಭಾರೀ ಟ್ರೋಲ್ ಆಗಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿರಾಟ್ ವಿಕೆಟ್ ಪಡೆದರೂ ಜಡೇಜಾ ಸಂಭ್ರಮಿಸಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಜಡ್ಡು ಕಾಲೆಳೆದಿದ್ದಾರೆ.

ಪುಣೆಯಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್’ಕಿಂಗ್ಸ್ 6 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: RCB ಹೋಮ್‌ ಗ್ರೌಂಡ್‌ ಕುರಿತಾದ ಮಹತ್ವದ ಅಪ್‌ಡೇಟ್ಸ್‌; ಪುಣೆಯಲ್ಲ, ಈ 2 ಸ್ಟೇಡಿಯಂನಲ್ಲೇ ನಡೆಯುತ್ತೆ ಬೆಂಗಳೂರು ಮ್ಯಾಚ್!
ವಿದೇಶಿ ಗರ್ಲ್‌ಫ್ರೆಂಡ್‌ ಜತೆ ಗೋವಾದಲ್ಲಿ ಶಿಖರ್ ಧವನ್ ಎಂಗೇಜ್‌ಮೆಂಟ್! ಗಬ್ಬರ್‌ ಸಿಂಗ್ ಪೋಸ್ಟ್ ವೈರಲ್