
ಸೌತಾಂಪ್ಟನ್(ಸೆ.03): ಕ್ರಿಕೆಟ್ ಹಾಗೂ ಬಾಲಿವುಡ್ ಸಂಬಂಧ ಇಂದು ನಿನ್ನೆಯದಲ್ಲ. ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಡೋ ಮೂಲಕ ಕ್ರಿಕೆಟ್ ಹಾಗೂ ಬಾಲಿವುಡ್ ನಡುವಿ ಪ್ರೀತಿ, ಮದುವೆ ಸಂಪ್ರದಾಯ ಮುಂದುವರಿಸಿದ್ದರು.
ವಿರಾಟ್ ಕೊಹ್ಲಿ ಬಳಿಕ ಇದೀಗ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆಗಿನ ಗಪ್ ಚುಪ್ ಡೇಟಿಂಗ್ ಬಹಿರಂಗವಾಗಿದೆ. 36 ವರ್ಷದ ನಮ್ರತ್ ಕೌರ್ ಬೋಲ್ಡ್ ಮಾಡುವಲ್ಲಿ 56 ವರ್ಷದ ರವಿ ಶಾಸ್ತ್ರಿ ಯಶಸ್ವಿಯಾಗಿದ್ದಾರೆ.
ಮುಂಬೈ ಮಿರರ್ ವರದಿ ಪ್ರಕಾರ, ರವಿ ಶಾಸ್ತ್ರಿ ಹಾಗೂ ನಿಮ್ರತ್ ಕೌರ್ ಕಳೆದೆರಡು ವರ್ಷಗಳಿಂದ ಸದ್ದಿಲ್ಲದೆ ಡೇಟಿಂಗ್ ನಡೆಸುತ್ತಿದ್ದಾರೆ. ರವಿ ಶಾಸ್ತ್ರಿ ಪತ್ನಿ ರಿತೂ ಸಿಂಗ್ ಜೊತೆಗಿನ ಸಂಬಂಧ ಮುರಿದು ಬಿತ್ತು ಹಲವು ವರ್ಷಗಳೇ ಉರುಳಿದೆ. ಹೀಗಾಗಿ ಇದೀಗ ಶಾಸ್ತ್ರಿ ನಮ್ರತ್ ಕೌರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
2015ರಲ್ಲಿ ರವಿ ಶಾಸ್ತ್ರಿ ಹಾಗೂ ನಮ್ರತ್ ಕೌರ್ ಜರ್ಮನಿ ಕಾರು ಕಂಪೆನಿಯ ಪ್ರಮೋಶನ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಇವರಿಬ್ಬರ ನಡುವಿನ ಪ್ರೀತಿ ಚಿಗುರೊಡೆದಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಕ್ರಿಕೆಟಿಗನಾಗಿರುವಾಗಲೇ ರವಿ ಶಾಸ್ತ್ರಿ ಹಲವು ಬಾಲಿವುಟ್ ನಟಿಯರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಶಾಸ್ತ್ರಿ ಫ್ಯಾನ್ ಫಾಲೋವರ್ಸ್‌ಗಳಲ್ಲಿ ಹೆಚ್ಚಿನವರು ಹುಡುಗಿಯರೇ ಆಗಿದ್ದಾರೆ. ಶಾಸ್ತ್ರಿ ಮದುವೆಯಾದ ಮೇಲೂ ಸದ್ದಿಲ್ಲದೇ ಡೇಟಿಂಗ್ ಮಾಡುತ್ತಿದ್ದರು ಎಂದು ರವಿ ಶಾಸ್ತ್ರಿ ಮಾಜಿ ಪತ್ನಿ ರೀತು ಸಿಂಗ್ 2012ರಲ್ಲಿ ಹೇಳಿದ್ದರು. ಇದೇ ಕಾರಣದಿಂದ ರವಿ ಶಾಸ್ತ್ರಿ 2011ರಲ್ಲಿ ವಿಚ್ಚೇಧನಕ್ಕೆ ಬಯಸಿದ್ದರು ಎಂದಿದ್ದರು.
ಸದ್ಯ ಶಾಸ್ತ್ರಿ ನಿಮ್ರತ್ ಕೌರ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಜೊತೆಯಾಟಕ್ಕೆ ಪರದಾಡುತ್ತಿದೆ. ಆದರೆ ರವಿ ಶಾಸ್ತ್ರಿ ಹಾಗೂ ನಮ್ರತ್ ಕೌರ್ ಪಾರ್ಟ್ನರ್‌ಶಿಪ್ ಕಳೆದರಡು ವರ್ಷದಿಂದ ನಡೆಯುತ್ತಿದೆ ಅನ್ನೋದು ಯಾರಿಗೂ ತಿಳಿದೇ ಇರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.