ಸಿಪಿಎಲ್ ಟೂರ್ನಿಯಿಂದಲೂ ಹೊರಬಿದ್ದ ಸ್ಟೀವ್ ಸ್ಮಿತ್ !

Published : Sep 03, 2018, 01:05 PM ISTUpdated : Sep 09, 2018, 10:23 PM IST
ಸಿಪಿಎಲ್ ಟೂರ್ನಿಯಿಂದಲೂ ಹೊರಬಿದ್ದ ಸ್ಟೀವ್ ಸ್ಮಿತ್ !

ಸಾರಾಂಶ

ಸೌತ್ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ 12 ತಿಂಗಳ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸ್ಮಿತ್ ಬಹುತೇಕ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಸಿಪಿಎಲ್ ಟೂರ್ನಿ ಆಡಲು ಮುಂದಾಗಿದ್ದ ಸ್ಮಿತ್‌ಗೆ ಅಲ್ಲೂ ಕೂಡ ಹಿನ್ನಡೆಯಾಗಿದೆ.

ಬಾರ್ಬಡೋಸ್(ಸೆ.03): ಬಾಲ್ ಟ್ಯಾಂಪರ್‌ ನಡೆಸಿ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಐಪಿಎಲ್ ಸೇರಿದಂತೆ ಹಲವು ಟೂರ್ನಿಯಿಂದಲೂ ದೂರ ಉಳಿಯಬೇಕಾಯಿತು. ಇದೀಗ ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದಲೂ ಸ್ಮಿತ್ ಹೊರಬಿದ್ದಿದ್ದಾರೆ.

ಸಿಪಿಎಲ್ ಟೂರ್ನಿಯಲ್ಲಿ ಬಾರ್ಬಡೋಸ್ ಟ್ರೈಡೆಂಟ್ ತಂಡದ ಪರ ಆಡುತ್ತಿದ್ದ ಸ್ಟೀವ್ ಸ್ಮಿತ್ ಮುಂದಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.  ಇಂಜುರಿಗೆ ತುತ್ತಾಗಿರುವ ಸ್ಟೀವ್ ಸ್ಮಿತ್ ಸಿಪಿಎಲ್ ಟೂರ್ನಿಗೆ ಲಭ್ಯರಿಲ್ಲ ಎಂದು ಬಾರ್ಬಡೋಸ್ ನಾಯಕ ಜೇಸನ್ ಹೋಲ್ಡರ್ ಸ್ಪಷ್ಟಪಡಿಸಿದ್ದಾರೆ.

ಬಾಲ್ ಟ್ಯಾಂಪರಿಂಗ್‌ನಿಂದಾಗಿ ನಿಷೇಧಕ್ಕೊಳಗಾದ ಸ್ಟೀವ್ ಸ್ಮಿತ್ ಬಹುತೇಕ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಹೀಗಾಗಿ ಇದೇ ಮೊದಲ ಬಾರಿಗೆ ಸಿಪಿಎಲ್ ಟೂರ್ನಿ ಆಡಲು ಮುಂದಾಗಿದ್ದರು. ಆದರೆ ಇಂಜುರಿ ಕಾರಣದಿಂದ ಸಿಪಿಎಲ್ ಟೂರ್ನಿ ಆಡೋ ಅವಕಾಶವನ್ನು ಕಳೆದುಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPL: ಕೊನೇ 4 ಎಸೆತದಲ್ಲಿ 20 ರನ್‌ ಸಿಡಿಸಿ ಸ್ಮೃತಿ ಮಂಧನಾ ಆರ್‌ಸಿಬಿಗೆ ಮಹಾ ಗೆಲುವು ತಂದ ನಡಿನ್‌ ಡಿ ಕ್ಲರ್ಕ್‌!
ಪಂದ್ಯ ಆಡುವಾಗಲೇ ಕುಸಿದು ಬಿದ್ದು ಭಾರತೀಯ ಕ್ರಿಕೆಟಿಗನ ದಾರುಣ ಸಾವು, ಬಿಸಿಸಿಐ ಸಂತಾಪ!