
ಟೀಂ ಇಂಡಿಯಾದಲ್ಲಿ ಧೀರ್ಘಾವಧಿ ಇರಬೇಕಂದ್ರೆ ಸಖತ್ ಕಷ್ಟ ಪಡಬೇಕು. ಎಷ್ಟೋ ಜನ್ಮಗಳ ಪುಣ್ಯ ಇರಬೇಕು. ಆದ್ರೆ ಇಲ್ಲೊಬ್ಬ ಇದ್ದಾನೆ. ಈತನಿಂದ ತಂಡಕ್ಕೆ ಶೂನ್ಯ ಲಾಭವಾದ್ರೂ ತಂಡದಲ್ಲಿ ಖಾಯಂ. ಅದಕ್ಕೆ ಕಾರಣ ಅವನ ಚಾಲಾಕಿ ಬುದ್ಧಿ. ನಾಯಕ ವಿರಾಟ್ ಕೊಹ್ಲಿಗೆ ಬಕೆಟ್ ಹಿಡಿದೇ ತಂಡದಲ್ಲಿ ಖಾಯಂ ಆಗಿದ್ದಾನೆ. ಅಷ್ಟಕ್ಕೂ ಟೀಂ ಇಂಡಿಯಾದ ಆ ಬಕೆಟ್ ರಾಜ ಯಾರು ಅಂತೀರಾ..?
ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬೇಕಾದ್ರೆ ಅಥವಾ ತಂಡದೊಂದಿಗೆ ಕಾಣಿಸಿಕೊಳ್ಳಬೇಕಾದರೆ ಎಷ್ಟೋ ವರ್ಷಗಳ ಪುಣ್ಯ ಮಾಡಿರಬೇಕು ಅಂತಾರೆ. ಆದರೆ ಇಲ್ಲೊಬ್ಬ ಇದ್ದಾನೆ. ಈತನ ಪ್ರಕಾರ ತಂಡದ ನಾಯಕನಿಗೆ ಚೆನ್ನಾಗಿ ಬಕೆಟ್ ಇಡಿದ್ರೆ ಸಾಕು, ಆರಾಮಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಖಾಯಂ ಆಗಬಹುದು ಅಂದುಕೊಂಡಿದ್ದಾನೆ. ತಮ್ಮ ಜವಾಬ್ದಾರಿಯನ್ನು ಮರೆತರೂ ಪರವಾಗಿಲ್ಲ ನಾಯಕನ ಮನಸು ಗೆದ್ದಿಬಿಟ್ಟರೆ ಸಾಕು ಅಂತ ಅಂದುಕೊಂಡುಬಿಟ್ಟಿದ್ದಾನೆ.
ಕೊಹ್ಲಿ ಆಂಡ್ ಟೀಂ ನಲ್ಲಿರುವ ಆ ಬಕೆಟ್ ರಾಜ ಯಾರು..?
ಅಷ್ಟಕ್ಕೂ ತಂಡದಲ್ಲಿರಬೇಕು ಎನ್ನುವ ಒಂದೇ ಕಾರಣಕ್ಕೆ ನಾಯಕ ವಿರಾಟ್ ಕೊಹ್ಲಿಯ ಚಾಕರಿ ಮಾಡಿಕೊಂಡು, ಕೊಹ್ಲಿಯನ್ನ ಹೊಗಳಿ ಅವರ ಪ್ರೀತಿ ಪಾತ್ರನಾಗುತ್ತಿರುವ ಆ ಮಹಾನ್ ಪುರುಷ ಬೇಱರು ಅಲ್ಲ ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ.
ಮಾಜಿ ಕೋಚ್ ಕುಂಬ್ಳೆಯಿಂದ ಪಾಠ ಕಲಿತ್ರಾ ಶಾಸ್ತ್ರಿ..?
ಕೋಚ್ ಅಂದ್ರೆ ಗುರುವಿದ್ದಂತೆ. ಶಿಷ್ಯ ಏನೇ ಮಾಡಿದರೂ ಅವನನ್ನ ಹೊಗಳದೆ ಇನ್ನೂ ಅಭೂತಪೂರ್ವವಾಗಿ ಆಡುವಂತೆ ಮಾಡಬೇಕಾದ ಜವಾಬ್ದಾರಿ ಗುರುವಿನದ್ದು. ಆದರೆ ಟೀಂ ಇಂಡಿಯಾದಲ್ಲಿ ಆಗಿಲ್ಲ. ಮಾಜಿ ಕೋಚ್ ಅನಿಲ್ ಕುಂಬ್ಳೆ ತನ್ನ ಕಾಯಕವನ್ನ ಸರಿಯಾಗಿ ಮಾಡುತ್ತಿದ್ರೂ ಅವರಿಗೆ ಗೇಟ್ ಪಾಸ್ ಕೊಡಲಾಗಿತ್ತು. ಇದನ್ನ ಅರಿತಿರುವ ಹಾಲಿ ಕೋಚ್ ರವಿಶಾಸ್ತ್ರಿ, ಕುಂಬ್ಳೆಯಿಂದ ಪಾಠ ಕಲಿತು ತಂಡದಲ್ಲಿರಬೇಕಾದರೆ ಏನು ಮಾಡಬೇಕು ಎಂದು ಅರಿತಿದ್ದಾರೆ.
ತಂಡದಲ್ಲಿ ಇರಲೇಬೇಕು, ಬಿಸಿಸಿಐ ನೀಡೋ ಕೋಟಿ ಕೋಟಿ ಹಣ ಬಾಚಲೇಬೇಕು ಎಂದು ನಿರ್ಧರಿಸಿರುವ ಶಾಸ್ತ್ರಿ ಅದಕ್ಕಾಗಿ ತಮಗೆ ನೀಡಿರುವ ಜವಾಬ್ದಾರಿಯನ್ನ ಮರೆತು ನಾಯಕ ಕೊಹ್ಲಿ ಹೇಳಿದಂತೆ ಕೇಳಿಕೊಂಡು ಅವರಿಗೆ ಬಕೆಟ್ ಹಿಡಿಯುತ್ತಾ ಬಹಿರಂಗವಾಗಿ ಕೊಹ್ಲಿಯನ್ನು ಹೊಗಳುತ್ತಾ ಟೈಂ ಪಾಸ್ ಮಾಡುತ್ತಾರೆ.
ಈಗಿರುವ ಟೀಂ ಇಂಡಿಯಾನೇ ಬೆಸ್ಟ್ ಅಂತೆ..!: ಭಾರತದ ಕ್ರಿಕೆಟ್ ಇತಿಹಾಸವನ್ನೇ ಮರೆತುಬಿಟ್ರಾ ಶಾಸ್ತ್ರಿ..?
ಇದು ಟೀಂ ಇಂಡಿಯಾವನ್ನ ದಶಕಗಳ ಹಿಂದೆ ಪ್ರತಿನಿಧಿಸಿದ್ದ ಆಟಗಾರನ ಮಾತು. ಕಳೆದ 100 ವರ್ಷಗಳಿಂದ ಭಾರತದ ಕ್ರಿಕೆಟ್ಗಾಗಿ ಬೆವರು ಹರಿಸಿದ್ದನ್ನೇ ಮರೆತು ತಂಡದಲ್ಲಿನ ಸ್ಥಾನಕ್ಕಾಗಿ ಭಾರತದ ಕ್ರಿಕೆಟ್ ಹಿಸ್ಟರಿಯಲ್ಲಿ ಈಗಿನ ತಂಡವೇ ಬೆಸ್ಟ್ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಕೊಹ್ಲಿಯೇ ಟೀಂ ಇಂಡಿಯಾ ಬಾಸ್ ಅಂತೆ..!
ಕೇವಲ ಸದ್ಯದ ಟೀಂ ಇಂಡಿಯಾ ಬೆಸ್ಟ್ ಅನ್ನುವುದಲ್ಲದೇ ಕೊಹ್ಲಿಯೇ ಟೀಂ ಇಂಡಿಯಾದ ಬಾಸ್ ಎಂದು ಶಾಸ್ತ್ರಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ತಂಡದಲ್ಲಿ ಉಳಿದವರೆಲ್ಲಾ ಅವರ ಸೇವಕರು ಎಂದು ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಇಂಥಹ ಪರಿಸ್ಥಿತಿ ಟೀಂ ಇಂಡಿಯಾದ ಕೋಚ್ ಎನ್ನಿಸಿಕೊಂಡಿರುವ ರವಿಶಾಸ್ತ್ರಿಗೆ ಬರಬಾರದಿತ್ತು ಕಣ್ರಿ. ಕೇವಲ ತಂಡದಲ್ಲಿರಬೇಕು ಅನ್ನುವ ಕಾರಣಕ್ಕೆ ತನ್ನ ಆತ್ಮಸಾಕ್ಷಿಯನ್ನೇ ಬಲಿಕೊಟ್ಟು ಬಾಯಿಗೆ ಬಂದಂತೆ ಮಾತ್ತನ್ನಾಡುತ್ತಿರುವ ಶಾಸ್ತ್ರಿಯ ಬುದ್ಧಿಗೆ ಏನ್ ಹೇಳಬೇಕೋ ಗೊತ್ತಾಗುತ್ತಿಲ್ಲ. ಶಾಸ್ತ್ರಿಯ ಈ ನಡೆಯನ್ನ ಅವರ ಜಾಣ್ಮೆ ಅನ್ನಬೇಕೋ ಅಥವಾ ಮುರ್ಖತನ ಅನ್ನಬೇಕೋ ಗೊತ್ತಾಗುತ್ತಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.