(Video)ವೇದಾ 8 ವರ್ಷವಿದ್ದಾಗ ನಡೆದಿದ್ದಾದ್ರೂ ಏನು?: ಆ ಘಟನೆ ನೆನೆದು ನಿಂತಲ್ಲೇ ಕುಸಿದು ಬೀಳ್ತಾರೆ ವೇದಾ

By Suvarna Web DeskFirst Published Aug 2, 2017, 12:49 PM IST
Highlights

ಗಟ್ಟಿಗಿತ್ತಿ ಅಂತಲೇ ಕರೆಯಿಸಿಕೊಳ್ಳೋ ವೇದಾ ಒಂದು ಹೆಸರು ಕಿವಿಗೆ ಬಿದ್ದರೆ ಭಾವುಕರಾಗಿ ಬಿಡ್ತಾರೆ. ನಿಂತಲ್ಲೇ ಕುಸಿದು ಬೀಳ್ತಾರೆ. ಅಷ್ಟೇ ಅಲ್ಲ ಬಿಕ್ಕಿಬಿಕ್ಕಿ ಅತ್ತು ಬಿಡ್ತಾರೆ. ಅಳಬಾರ್ದು ಅಂತ ಎಷ್ಟೇ ಕಂಟ್ರೋಲ್​​ ಮಾಡಿಕೊಂಡ್ರೂ ಆ ಒಂದು ಘಟನೆ ಅವರ ಕಣ್ಣಲ್ಲಿ ನೀರು ತರಿಸಿಬಿಡುತ್ತೆ. ಕೇವಲ ವೇದಾ ಮಾತ್ರ ಅಲ್ಲ. ಅವರ ಮನೆ ಮಂದಿಯನೆಲ್ಲಾ ಕಣ್ಣೀರಿನ ಕಡಲಲ್ಲಿ ತೇಲಿಸಿಬಿಡುತ್ತೆ.

ಬೆಂಗಳೂರು(ಆ.02): ಮೈದಾನದಲ್ಲಿ ಎದುರಾಳಿ ಬೌಲರ್​​ಗಳನ್ನ ರಣಚಂಡಿಯನ್ನ ಕಾಡುವ ವೇದಾ ಮನೆಯಲ್ಲಿ ಹೇಗಿರ್ತಾರೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡದೇ ಇರದು. ಆದ್ರೆ ಎಲ್ಲ ಮನೆಯ ಹೆಣ್ಣು ಮಕ್ಕಳಂತೆ ವೇದಾ ಕೂಡ ತಂಬಾನೆ ಹಠಮಾರಿ. ಬೇಕು ಅನಿಸಿದ್ದನ್ನ ಪಡಿದೇ ತಿರುತ್ತಾಳೆ. ಅದೇನಾದ್ರೂ ಸಿಗದೇ ಇದ್ರೆ ಮುಗಿದೇ ಹೊಯ್ತು ಮನೆಯಲ್ಲಿ ಯುದ್ಧವೇ ನಡೆದುಬಿಡುತ್ತೆ.

ಗಟ್ಟಿಗಿತ್ತಿ ಅಂತಲೇ ಕರೆಯಿಸಿಕೊಳ್ಳೋ ವೇದಾ ಒಂದು ಹೆಸರು ಕಿವಿಗೆ ಬಿದ್ದರೆ ಭಾವುಕರಾಗಿ ಬಿಡ್ತಾರೆ. ನಿಂತಲ್ಲೇ ಕುಸಿದು ಬೀಳ್ತಾರೆ. ಅಷ್ಟೇ ಅಲ್ಲ ಬಿಕ್ಕಿಬಿಕ್ಕಿ ಅತ್ತು ಬಿಡ್ತಾರೆ. ಅಳಬಾರ್ದು ಅಂತ ಎಷ್ಟೇ ಕಂಟ್ರೋಲ್​​ ಮಾಡಿಕೊಂಡ್ರೂ ಆ ಒಂದು ಘಟನೆ ಅವರ ಕಣ್ಣಲ್ಲಿ ನೀರು ತರಿಸಿಬಿಡುತ್ತೆ. ಕೇವಲ ವೇದಾ ಮಾತ್ರ ಅಲ್ಲ. ಅವರ ಮನೆ ಮಂದಿಯನೆಲ್ಲಾ ಕಣ್ಣೀರಿನ ಕಡಲಲ್ಲಿ ತೇಲಿಸಿಬಿಡುತ್ತೆ.

ವೇದಾ ಕುಟುಂಬವನ್ನ ಕಾಡುತ್ತಿರುವ ಆ ಘಟನೆ ಯಾವುದು..?

ಅಷ್ಟಕ್ಕೂ ಗಟ್ಟಿಗಿತ್ತಿ ವೇದಾ ಮತ್ತು ಅವರ ಕುಟುಂಬವನ್ನ ಕಾಡುತ್ತಿರುವ ಆ ಘಟನೆಯಾದ್ರೂ ಯಾವುದು ಗೊತ್ತಾ.? ವೇದಾ 8 ವರ್ಷ ಇದ್ದಾಗ ಅವರ ಕುಟುಂಬಕ್ಕೆ ಬಂದು ಅಪ್ಪಳಿಸಿದ ಒಂದು ಸಿಡಿಲು ಅವರ ಮನೆಯನ್ನೇ ನೀರವ ಮೌನಕ್ಕೆ ತಳ್ಳಿತ್ತು. ಆ ಒಂದು ಘಟನೆ ನೆನೆದು ಇಡೀ ಕುಂಟುಂಬವೇ ಅಳುತ್ತೆ. ಆ ಘಟನೆಯಾದ್ರೂ ಏನು?

ಮಾವ ನಮ್ಮ ಅಮ್ಮನ ತಮ್ಮ, ನನ್ನ ಅಕ್ಕನ ಗಂಡ ಕೂಡಾ. ನಾನು 8 ವರ್ಷದವಳಿದ್ದಾಗ ಅವರು ರಸ್ತೆ ಅಪಘಾತದಲ್ಲಿ ತೀರಿಕೊಂಡರು. ಅವರಿಗೆ ಕ್ರಿಕೆಟ್ ಹುಚ್ಚು ಬಹಳಷ್ಟಿತ್ತು. ಒಂದು ವೇಳೆ ಅವರು ಜೀವಂತವಾಗಿದ್ದರೆ ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ಬಳಿಕ ಅಕ್ಕ ನನ್ನನ್ನು ನೋಡಿಕೊಳ್ಳಲು ಬೆಂಗಳೂರಿಗೆ ಬಂದಿದ್ದಳು. ಒಂದು ವೇಳೆ ನನ್ನ ಭಾವ ಇದ್ದಿದ್ದರೆ ಇಬ್ಬರೂ ಒಟ್ಟಾಗಿರುತ್ತಿದ್ದರು. ಇನ್ನು ಇಂದು ಅವರು ಜೀವಂತವಾಗಿದ್ದು, ನನ್ನ ಆಟ ನೋಡುತ್ತಿದ್ದರೆ ನಿಜಕ್ಕೂ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು. ಇದು ವೇದಾಳ ಣೊವುಭರಿತ ಮಾತು

ಎಲ್ಲರ ಮುಂದೆ ಸದಾ ಖುಷಿಯಿಂದ ಇರುವ ವೇದಾಳ ಜೀವನದಲ್ಲಿ ಎಂಥಹ ಘೋರ ಘಟನೆ ನಡೆದು ಹೋಗಿದೆ ಅಂತ. ಅವರ ಮಾತುಗಳನ್ನ ಕೇಳುತ್ತಿದ್ರೆ ಎಂಥಹ ಕಲ್ಲು ಹೃದಯಿಯ ಕಣ್ಣುಗಳು ಒದ್ದೆಯಾಗಿಬಿಡುತ್ತೆ. ವೇದಾನೇ ಹೇಳಿದ ಹಾಗೆ ಅವರ ಬಾವನ ಸಾವೇ ಅವರ ಯಶಸ್ಸಿಗೆ ಕಾರಣವಾಗಿಹೊಯ್ತು. ಆದ್ರೆ  ಸದ್ಯ ವೇದಾಳ ಬಾವರ ಸಾವಿನ ಬಗ್ಗೆ ದುಖಃ ಪಡಬೇಕೋ ಅಥವಾ ಆ ಸಾವಿನಿಂದ ನಮ್ಮ ದೇಶಕ್ಕೆ ಅದ್ಭುತ ಆಟಗಾರ್ತಿ ಸಿಕ್ಕಿದ್ಲು ಅಂತ ಖುಷಿ ಪಡಬೇಕೋ ಒಂದೂ ಅರ್ಥವಾಗುತ್ತಿಲ್ಲ.

click me!