ಬಿಗ್'ಬ್ಯಾಶ್'ನಲ್ಲೂ ಮಿಂಚಲು ರೆಡಿಯಾದ ಸನ್'ರೈಸರ್ಸ್ ಆಟಗಾರ

By Suvarna Web DeskFirst Published Sep 15, 2017, 3:49 PM IST
Highlights

ಸನ್'ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದ ರಶೀದ್ 17 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದರು.

ಅಡಿಲೇಡ್(ಸೆ.15): ಯುವ ಲೆಗ್ ಸ್ಪಿನ್ನರ್ ರಶೀದ್ ಖಾನ್, ಬಿಗ್ ಬ್ಯಾಶ್ ಲೀಗ್‌'ನಲ್ಲಿ ಆಡಲಿರುವ ಮೊದಲ ಆಫ್ಘಾನಿಸ್ತಾನದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಬಿಗ್ ಬ್ಯಾಶ್ ಲೀಗ್‌'ನ ಅಡಿಲೇಡ್ ಸ್ಟ್ರೈಕರ್ಸ್‌ ತಂಡ ರಶೀದ್‌'ರನ್ನು ತಂಡಕ್ಕೆ ಸೇರಿಸಿಕೊಂಡಿದೆ. 18 ವರ್ಷದ ಯುವ ಆಟಗಾರ ಇದೇ ವರ್ಷ ಐಪಿಎಲ್‌'ನಲ್ಲಿ ಆಡಿದ ಆಫ್ಘಾನಿಸ್ತಾನದ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದರು. ಸನ್'ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದ ರಶೀದ್ 17 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದರು.

ಇದಷ್ಟೇ ಅಲ್ಲದೇ ವಿಂಡೀಸ್'ನ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20ಯಲ್ಲೂ ಆಡಿ, ಲೀಗ್‌'ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ದಾಖಲೆಗೂ ಪಾತ್ರರಾಗಿದ್ದರು. ಬಿಗ್‌ ಬ್ಯಾಶ್ ಲೀಗ್ ಡಿ.20ರಿಂದ ಆರಂಭಗೊಳ್ಳಲಿದೆ

click me!