
ನವದೆಹಲಿ(ಅ.06): 2017-18ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಇಂದಿನಿಂದ ಆರಂಭಗೊಂಡಿದೆ. 84ನೇ ಆವೃತ್ತಿಯ ರಣಜಿ ಟೂರ್ನಿಗೆ ಚಾಲನೆ ದೊರೆತಿದ್ದು, ಮೊದಲ ಸುತ್ತಿನಲ್ಲಿ ಒಟ್ಟು 12 ಪಂದ್ಯಗಳು ನಡೆಯುತ್ತಿವೆ.
ಕರ್ನಾಟಕ ತಂಡ ಅ.14ರಿಂದ ಆರಂಭಗೊಳ್ಳಲಿರುವ 2ನೇ ಸುತ್ತಿನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿ 28 ತಂಡಗಳನ್ನು ತಲಾ 7ರಂತೆ 4 ಗುಂಪುಗಳಾಗಿ ವಿಂಗಡಿಸಿದ್ದು ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಕ್ವಾ.ಫೈನಲ್ ಪ್ರವೇಶಿಸಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡ ತಲಾ 6 ಪಂದ್ಯಗಳನ್ನು ಆಡಲಿವೆ.
ಭಾರತ ತಂಡ ತನ್ನ ಮುಂದಿನ ಟೆಸ್ಟ್ ಪಂದ್ಯವನ್ನು ನ.14ರಿಂದ ಆಡಲಿರುವುದರಿಂದ ಭಾರತದ ಟೆಸ್ಟ್ ತಾರೆಯರು ಮೊದಲ ಸುತ್ತಿನಲ್ಲಿ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಆರ್.ಅಶ್ವಿನ್, ಮುರಳಿ ವಿಜಯ್, ಅಭಿನವ್ ಮುಕುಂದ್ ತಮಿಳುನಾಡು ಪರ ಆಡಿದರೆ, ಪೂಜಾರ, ಜಡೇಜಾ ಸೌರಾಷ್ಟ್ರ ತಂಡದಲ್ಲಿದ್ದಾರೆ. ವೃದ್ಧಿಮಾನ್ ಸಾಹ, ಮೊಹಮದ್ ಶಮಿ ಪ.ಬಂಗಾಳ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಶಾಂತ್ ಶರ್ಮಾ ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಗುಜರಾತ್ ತಂಡ ಹಾಲಿ ಚಾಂಪಿಯನ್ ಆಗಿದ್ದು ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಅಕ್ಟೋಬರ್ 06-09
ರಾಜಸ್ಥಾನ- ಜಮ್ಮು ಕಾಶ್ಮೀರ - ಗ್ರೂಪ್-ಬಿ
ಓಡಿಶಾ-ತ್ರಿಪುರಾ - ಗ್ರೂಪ್ -ಸಿ
ಡೆಲ್ಲಿ-ಅಸ್ಸಾಂ - ಗ್ರೂಪ್-ಎ
ಉತ್ತರ ಪ್ರದೇಶ-ರೈಲ್ವೇಸ್ - ಗ್ರೂಪ್-ಎ
ಹೈದ್ರಾಬಾದ್-ಮಹರಾಷ್ಟ್ರ - ಗ್ರೂಪ್- ಎ
ಹರ್ಯಾಣ-ಸೌರಾಷ್ಟ್ರ - ಗ್ರೂಪ್- ಬಿ
ಕೇರಳ-ಜಾರ್ಖಂಡ್ - ಗ್ರೂಪ್- ಬಿ
ಮಧ್ಯಪ್ರದೇಶ-ಬರೋಡ - ಗ್ರೂಪ್ -ಸಿ
ತಮಿಳುನಾಡು- ಆಂಧ್ರಪ್ರದೇಶ - ಗ್ರೂಪ್ ಸಿ
ಸರ್ವೀಸ್-ಬೆಂಗಾಲ್ - ಗ್ರೂಪ್ - ಡಿ
ಗೋವಾ-ಛತ್ತೀಸ್'ಘಡ - ಗ್ರೂಪ್- ಡಿ
ಹಿಮಾಚಲ ಪ್ರದೇಶ-ಪಂಜಾಬ್- ಗ್ರೂಪ್ -ಡಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.