
ಕೊಲಂಬೋ(ಜು.17): ಶ್ರೀಲಂಕಾ ಟೆಸ್ಟ್ ತಂಡದ ಅನುಭವಿ ಬೌಲರ್ ರಂಗನಾ ಹೆರಾತ್ ಟೆಸ್ಟ್ ಕ್ರಿಕೆಟ್'ನಲ್ಲಿ 8 ಬಾರಿ 10 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ್ದಾರೆ.
ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಹೆರಾತ್ ಈ ಸಾಧನೆ ಮಾಡಿದರು. ಮೊದಲ ಇನಿಂಗ್ಸ್'ನಲ್ಲಿ 5 ವಿಕೆಟ್ ಕಿತ್ತಿದ್ದ ಎಡಗೈ ಸ್ಪಿನ್ನರ್ ಎರಡನೇ ಇನಿಂಗ್ಸ್'ನಲ್ಲಿ ಸಿಕಂದರ್ ರಾಜಾ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ 8 ಬಾರಿ 10 ವಿಕೆಟ್ ಕಿತ್ತ ಸಾಧನೆ ಮಾಡಿದರು. ಶ್ರೀಲಂಕಾದ ಕ್ರಿಕೆಟ್ ದಂತಕತೆ ಮುತ್ತಯ್ಯಾ ಮುರುಳಿಧರನ್ ಈ ಪಟ್ಟಿಯಲ್ಲಿ ಅಗ್ರಸ್ಥಾನ(22 ಬಾರಿ)ದಲ್ಲಿದ್ದಾರೆ.
ಕೇವಲ 80 ಟೆಸ್ಟ್ ಪಂದ್ಯಗಳಲ್ಲೇ ಹೆರಾತ್ 10 ಬಾರಿ ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್'ನಲ್ಲಿ ಅತಿಹೆಚ್ಚು ಬಾರಿ 10 ವಿಕೆಟ್ ಕಿತ್ತ ಟಾಪ್ 5 ಆಟಗಾರರು ಇವರು:
ಮುತ್ತಯ್ಯ ಮುರುಳಿಧರನ್ : 22
ಶೇನ್ ವಾರ್ನ್ : 10
ರಿಚರ್ಡ್ ಹ್ಯಾಡ್ಲಿ : 9
ರಂಗನಾ ಹೆರಾತ್ : 8*
ಅನಿಲ್ ಕುಂಬ್ಳೆ : 8
* ಟಾಪ್ 5 ಪಟ್ಟಿಯಲ್ಲಿ ರಂಗನಾ ಹೆರಾತ್ ಹೊರತುಪಡಿಸಿದಂತೆ ಉಳಿದೆಲ್ಲಾ ಆಟಗಾರರು ಕ್ರಿಕೆಟ್'ಗೆ ನಿವೃತ್ತಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.