
ನವದೆಹಲಿ(ಸೆ.27): ಪಾಕಿಸ್ತಾನದ ಖ್ಯಾತ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ತಮ್ಮ ಸಾರ್ವಕಾಲಿಕ ಕನಸಿನ ತಂಡವನ್ನು ಪ್ರಕಟಿಸಿದ್ದಾರೆ.
ಲಾರ್ಡ್ ಕ್ರಿಕೆಟ್ ಗ್ರೌಂಡ್ ಅಧಿಕೃತ ಯೂಟ್ಯೂಬ್ ಮೂಲಕ ತಮ್ಮ ಆಯ್ಕೆ ಸಮರ್ಥಿಸಿಕೊಂಡು ಕನಸಿನ ತಂಡವನ್ನು ಅನಾವರಣಗೊಳಿಸಿದ್ದಾರೆ.
ತಮ್ಮ ಕನಸಿನ ತಂಡದಲ್ಲಿ ಆರಂಭಿಕ ಆಟಗಾರರನ್ನಾಗಿ ಭಾರತ ತಂಡದ ಸ್ಪೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಹಾಗೂ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಸರ್. ವಿವ್ ರಿಚರ್ಡ್ಸ್, ಸಚಿನ್ ತೆಂಡೂಲ್ಕರ್, ಬ್ರಯಾನ್ ಲಾರಾ ಅವರಿಗೆ ಸ್ಥಾನ ನೀಡಿದ್ದಾರೆ.
ಇನ್ನು ಆರನೇ ಕ್ರಮಾಂಕಕ್ಕೆ ಶ್ರೇಷ್ಟ ಆಲ್ರೌಂಡರ್ ಸರ್. ಗ್ಯಾರಿ ಸೋಬರ್ಸ್, ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಆಗಿ ಆ್ಯಡಂ ಗಿಲ್'ಕ್ರಿಸ್ಟ್'ಗೆ ಅವಕಾಶ ಕಲ್ಪಿಸಿದ್ದಾರೆ.
ತನ್ನ ಕನಸಿನ ತಂಡದ ನಾಯಕ ಸ್ಥಾನವನ್ನು ಪಾಕಿಸ್ತಾನ ತಂಡದ ಯಶಸ್ವಿ ನಾಯಕ ಎಂದೇ ಗುರುತಿಸಿಕೊಂಡಿರುವ ಇಮ್ರಾನ್ ಖಾನ್ ಅವರಿಗೆ ನೀಡಿದ್ದಾರೆ. ರಾಜಾ ಕನಸಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಪಾಕಿಸ್ತಾನದ ಏಕೈಕ ಆಟಗಾರ ಇಮ್ರಾನ್ ಖಾನ್.
ಮಾಲ್ಕಮ್ ಮಾರ್ಷಲ್, ಗ್ಲೇನ್ ಮೆಕ್'ಗ್ರಾಥ್ ಹಾಗೂ ಸ್ಪಿನ್ ದಂತಕತೆ ಶೇನ್ ವಾರ್ನ್ ಬೌಲಿಂಗ್ ಜವಾಬ್ದಾರಿಯನ್ನು ರಾಜಾ ವಹಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.