
ಕಾನ್ಪುರ(ಸೆ.27): ಐತಿಹಾಸಿಕ ಟೆಸ್ಟ್ನಲ್ಲಿ ಅಶ್ವಿನ್ ಮಾಡಿದ ದಾಖಲೆ ಎಲ್ಲರಿಗೂ ಗೊತ್ತಾಯ್ತು. ಆದರೆ, ರೋಹಿತ್ ಶರ್ಮಾ ಮಾಡಿದ ದಾಖಲೆ ಮಾತ್ರ ಮರೆಯಾಗಿ ಹೋಯ್ತು. 2ನೇ ಇನ್ನಿಂಗ್ಸ್ನಲ್ಲಿ ಅಜೇಯ 68 ರನ್ ಸಿಡಿಸಿದ ಅವರು, ಅಪರೂಪದ ದಾಖಲೆಯೊಂದನ್ನ ನಿರ್ಮಾಣ ಮಾಡಿದ್ದಾರೆ.
ಇದೀಗ ರೋಹಿತ್ ಶರ್ಮಾ ಅಚ್ಚರಿಯ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಭಾರತದ ಪರ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಒಂದು ಸಾವಿರ ರನ್ ಕಲೆ ಹಾಕಿದ್ದಾರೆ. 19ನೇ ಟೆಸ್ಟ್ನಲ್ಲಿ ಈ ಸಾಧನೆ ಮಾಡಿರೋ ಅವರು, ಕಿವೀಸ್ ವಿರುದ್ಧದ 2ನೇ ಇನ್ನಿಂಗ್ಸ್ನಲ್ಲಿ 19 ರನ್ ಮಾಡ್ತಿದ್ದಾಗೆಯೇ ಈ ಮೈಲಿಗಲ್ಲನ್ನು ಮುಟ್ಟಿದರು.
ವಿಶೇಷ ಇರೋದು ಇದೊಂದರಲ್ಲಿಯೇ ಅಲ್ಲ. ಟೆಸ್ಟ್ನಲ್ಲಿ ಸಾವಿರ ರನ್ ಪೂರೈಸುವ ಮೂಲ್ಕ 3 ಮಾದರಿಯಲ್ಲೂ ಸಾವಿರ ರನ್ ಮಾಡಿದ ಆಟಗಾರ ಎನಿಸಿಕೊಂಡರು. ಟೆಸ್ಟ್, ಏಕದಿನ ಹಾಗೂ ಟಿ20 ಹೀಗೆ ಮೂರು ಮೂದರಿಯಲ್ಲಿಯೂ ಸಾವಿರ ರನ್ ಮಾಡಿದ ಭಾರತದ 4ನೇ ಆಟಗಾರ ಅನ್ನೋ ಹೆಗ್ಗಳಿಕೆ ಇದೀಗ ರೋಹಿತ್ ಪಾಲಾಗಿದೆ. ಶರ್ಮಾಗೂ ಮೊದಲು ಧೋನಿ, ಕೊಹ್ಲಿ ಹಾಗೂ ಯುವರಾಜ್ ಈ ದಾಖಲೆಯನ್ನು ಹೊಂದಿದ್ದಾರೆ.
ಒಟ್ಟಾರೆ ರೋಹಿತ್ ಸಾಧನೆ ಹೀಗಿದೆ. 18 ಟೆಸ್ಟ್ಗಳಿಂದ 1049 ರನ್ ಬಾರಿಸಿದ್ದಾರೆ. 148 ಏಕದಿನ ಪಂದ್ಯಗಳಲ್ಲಿ 5008 ರನ್ ಕೂಡಿಹಾಕಿರುವ ರೋಹಿತ್, 62 ಟಿ20ಯಲ್ಲಿ 1364 ರನ್ ಹೊಡೆದಿದ್ದಾರೆ.
ಮೂರು ಮಾದರಿಯಲ್ಲಿ ಸಾವಿರ ರನ್ ಕಲೆ ಹಾಕಿರುವ ರೋಹಿತ್, ಮೂರು ಮಾದರಿಯಲ್ಲೂ ಸೆಂಚುರಿ ಮಾಡಿದ್ದಾರೆ. ಆ ಮೂಲ್ಕ ಸಾವಿರ ರನ್ ಜೊತೆಗೆ ಶತಕವನ್ನೂ ದಾಖಲಿಸಿರೋ ಏಕೈಕ ಆಟಗಾರ ಅನ್ನೋ ಹೆಗ್ಗಳಿಕೂ ಅವರಿಗೆ ಸಲ್ಲುತ್ತೆ.
ಟೀಕೆಗಳ ನದುವೆಯೂ ಮೊದಲ ಟೆಸ್ಟ್ನ ಅಂತಿಮ 11ರಲ್ಲಿ ಸ್ಥಾನ ಪಡ್ಕೊಂಡಿದ್ದ ರೋಹಿತ್, ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತಹ ಪ್ರದರ್ಶನವನ್ನೇ ನೀಡಿದರು. ಮೊದಲ ಇನ್ನಿಂಗ್ಸ್ನಲ್ಲಿ 35 ರನ್ ಕಲೆ ಹಾಕಿದ್ದ ಅವರು, 2ನೇ ಇನ್ನಿಂಗ್ಸ್ನಲ್ಲಿ ಅಜೇಯ 68 ರನ್ ಸಿಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.