ಟೀಕೆಗೆ ತಿರುಗೇಟು ನೀಡಿದ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್

Published : Apr 17, 2019, 03:51 PM IST
ಟೀಕೆಗೆ ತಿರುಗೇಟು ನೀಡಿದ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್

ಸಾರಾಂಶ

ರಾಜಸ್ಥಾನ ರಾಯಲ್ಸ್  ತಂಡದ ಸ್ಟುವರ್ಟ್ ಬಿನ್ನಿ ಪ್ರದರ್ಶನಕ್ಕೆ ಪತ್ನಿ ಮಯಾಂತಿ ಲ್ಯಾಂಗರ್ ಟ್ರೋಲ್ ಆಗುತ್ತಿರುವುದು ಇದೇ ಮೊದಲಲ್ಲ. ಪ್ರತಿ ಭಾರಿಯೂ ಮಯಾಂತಿ, ತಕ್ಕ ತಿರುಗೇಟು ನೀಡಿದ್ದಾರೆ. ಇದೀಗ ಮಯಾಂತಿ ಉತ್ತರಕ್ಕೆ ಟ್ರೋಲಿಗರು ಸುಮ್ಮನಾಗಿದ್ದಾರೆ.  

ಮುಂಬೈ(ಏ.17): ಕ್ರಿಕೆಟಿಗರ ಪ್ರದರ್ಶನ ಹಾಗೂ ಇತರ ವೈಯುಕ್ತಿ ವಿಚಾರಗಳಿಗೆ ಅವರ ಪತ್ನಿಯರು ಟ್ರೋಲ್ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿಯಿಂದ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್ ಅತೀ ಹೆಚ್ಚು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಬಿನ್ನಿ ಪ್ರದರ್ಶನದ ಕುರಿತು ಟೀಕೆ ವ್ಯಕ್ತಪಡಿಸಿದವರಿಗೆ ಮಯಾಂತಿ ಲ್ಯಾಂಗರ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: IPL 2019: ಸ್ಟಾರ್ ಆಟಗಾರನ ಸೇವೆ ಕಳೆದುಕೊಂಡ ಮುಂಬೈ ಇಂಡಿಯನ್ಸ್!

ಐಪಿಎಲ್ ಟೂರ್ನಿ ಆರಂಭವಾದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಸ್ಟುವರ್ಟ್ ಬಿನ್ನಿಗೆ ಅವಕಾಶವೇ ಸಿಕ್ಕಿರಲಿಲ್ಲ. ಹೀಗಾಗಿ ಅಭಿಮಾನಿಗಳು ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್‌ಗೆ ಪ್ರಶ್ನೆಗಳ ಸುರಿಮಳಗೈದಿದ್ದರು. ಬಿನ್ನಿ ಎಲ್ಲಿ ಹೋಗಿದ್ದಾರೆ, ಏನ್ಮಾಡ್ತಿದ್ದಾರೆ ಸೇರಿದಂತೆ ಹಲವು ಟೀಕೆಗಳಿಗೆ ಮಯಾಂತಿ ತಕ್ಕ ಉತ್ತರ ನೀಡಿದ್ದಾರೆ.  

ಇದನ್ನೂ ಓದಿ: ಹರ್ಷಲ್ ಪಟೇಲ್ ಔಟ್, ಕನ್ನಡಿಗನಿಗೆ ಹೊಡೆಯಿತು ಜಾಕ್’ಪಾಟ್..!

ಬಿನ್ನಿ ಎಲ್ಲಿ ಅನ್ನೋ ಪ್ರಶ್ನೆಗೆ ಮಯಾಂತಿ, ಪಂಜಾಬ್ ಹಾಗೂ ರಾಜಸ್ಥಾನ ನಡುವಿನ ಪಂದ್ಯ ನೋಡಿಲ್ವಾ? ಕ್ರಿಕೆಟ್ ನೇರ ಪ್ರಸಾರ ಹಾಗೂ ಚರ್ಚೆ ನೋಡಿ ಎಂದು ಮಯಾಂತಿ ಪ್ರತಿಕ್ರಿಸಿದ್ದಾರೆ. ಇನ್ನೊರ್ವ ಟೀಕಾಕಾರ ಪಂಜಾಬ್ ವಿರುದ್ಧ ಬಿನ್ನಿ ನೀಡಿದ ಪ್ರದರ್ಶನದ ಬಳಿಕ ಪತ್ನಿ ಮಯಾಂತಿ ಡಿಪಿ ಬದಲಾಯಿಸಿದ್ದಾರೆ ಎಂದಿದ್ದ. ಇದಕ್ಕೆ ಮಯಾಂತಿ ನನ್ನ ನಂಬರ್ ಇಲ್ಲ, ನಿಮಗೆ ಡಿಪಿ ಯಾವುದು ಇದೆ ಎಂದು ತಿಳಿದಿಲ್ಲ. ಆದರೂ ಹಳೇ ಚಿತ್ರವನ್ನು ನೆನಪಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ.

 

 

 

 

ಇದನ್ನೂ ಓದಿ: ನನ್ನ ಬೆಂಬಲ ನರೇಂದ್ರ ಮೋದಿಗೆ-ಜಡೇಜಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ!

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸ್ಟುವರ್ಟ್ ಬಿನ್ನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 3 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ ಬಿನ್ನಿ ಅಜೇಯ 33 ರನ್ ಸಿಡಿಸಿದ್ದರು. ಬಿನ್ನಿ ಅಬ್ಬರಿಂದ ರಾಜಸ್ಥಾನ ರಾಯಲ್ಸ್ 183 ರನ್ ಟಾರ್ಗೆಟ್ ಮುಂದೆ 170 ರನ್ ಸಿಡಿಸಿತು. ಈ ಮೂಲಕ ಕೇವಲ 12 ರನ್‌ಗಳಿಂದ ಸೋಲು ಅನುಭವಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು
ಗಂಭೀರ ಸ್ಥಿತಿಯಲ್ಲಿ ಕೋಮಾಕ್ಕೆ ಜಾರಿದ ಆಸೀಸ್‌ ದಿಗ್ಗಜ ಕ್ರಿಕೆಟರ್‌ ಡೇಮಿಯನ್‌ ಮಾರ್ಟಿನ್‌, ಅಪ್‌ಡೇಟ್‌ ನೀಡಿದ ಗಿಲ್‌ಕ್ರಿಸ್ಟ್‌!