ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿ 12 ತಿಂಗಳು ಟೆನಿಸ್‌ನಿಂದ ದೂರವಿದ್ದ ಸ್ಪೇನ್ ತಾರೆ, ಕಳೆದ ವಾರ ಬ್ರಿಸ್ಬೇನ್ ಓಪನ್‌ನಲ್ಲಿ ಪಾಲ್ಗೊಂಡು, ಆಸ್ಟ್ರೇಲಿಯನ್ ಓಪನ್‌ಗೆ ಸಿದ್ಧತೆ ಆರಂಭಿಸಿದ್ದರು. ಆದರೆ, ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಅವರಿಗೆ ಮತ್ತೆ ನೋವು ಕಾಣಿಸಿಕೊಂಡಿದ್ದು, ಜ.14ರಿಂದ ಆರಂಭಗೊಳ್ಳಲಿರುವ ಗ್ರ್ಯಾನ್ ಸ್ಲಾಂನಲ್ಲಿ ಆಡಲು ಸಾಧ್ಯವಿಲ್ಲ ಎಂದು ನಡಾಲ್ ತಿಳಿಸಿದ್ದಾರೆ.
ಮೆಲ್ಬರ್ನ್(ಜ.08): ಗ್ರ್ಯಾನ್ ಸ್ಲಾಂ ಟೆನಿಸ್‌ಗೆ ಮರಳುವ ದಿಗ್ಗಜ ರಾಫೆಲ್ ನಡಾಲ್‌ರ ಕನಸು ಭಗ್ನಗೊಂಡಿದೆ. ಗಾಯದ ಸಮಸ್ಯೆಯಿಂದಾಗಿ ಅವರು ಮುಂಬರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವುದಿಲ್ಲ ಎಂದು ಸಾಮಾಜಿಕ ತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿ 12 ತಿಂಗಳು ಟೆನಿಸ್‌ನಿಂದ ದೂರವಿದ್ದ ಸ್ಪೇನ್ ತಾರೆ, ಕಳೆದ ವಾರ ಬ್ರಿಸ್ಬೇನ್ ಓಪನ್‌ನಲ್ಲಿ ಪಾಲ್ಗೊಂಡು, ಆಸ್ಟ್ರೇಲಿಯನ್ ಓಪನ್‌ಗೆ ಸಿದ್ಧತೆ ಆರಂಭಿಸಿದ್ದರು. ಆದರೆ, ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಅವರಿಗೆ ಮತ್ತೆ ನೋವು ಕಾಣಿಸಿಕೊಂಡಿದ್ದು, ಜ.14ರಿಂದ ಆರಂಭಗೊಳ್ಳಲಿರುವ ಗ್ರ್ಯಾನ್ ಸ್ಲಾಂನಲ್ಲಿ ಆಡಲು ಸಾಧ್ಯವಿಲ್ಲ ಎಂದು ನಡಾಲ್ ತಿಳಿಸಿದ್ದಾರೆ.
ಮಂಡ್ಯ ಓಪನ್ ಟೆನಿಸ್: ವಿಷ್ಣುವರ್ಧನ್‌ಗೆ ಜಯ
ಮಂಡ್ಯ: ಭಾರತದ ತಾರಾ ಟೆನಿಸಿಗ, ಏಷ್ಯನ್ ಗೇಮ್ಸ್ ಪದಕ ವಿಜೇತ ವಿಷ್ಣು ವರ್ಧನ್ ಭಾನುವಾರ ಇಲ್ಲಿ ಆರಂಭಗೊಂಡ ಐಟಿಎಫ್ ಮಂಡ್ಯ ಓಪನ್ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಅರ್ಹತಾ ಹಂತದ 2ನೇ ಸುತ್ತು ಪ್ರವೇಶಿಸಿದ್ದಾರೆ.
ಎಲೈಸಿ ಪೆರ್ರಿ ಸ್ಫೋಟಕ ಆಟಕ್ಕೆ ಮಣಿದ ಟೀಂ ಇಂಡಿಯಾ
ಅರ್ಹತಾ ಹಂತದ ಮೊದಲ ಸುತ್ತಿನಲ್ಲಿ ಅವರು ಭಾರತದವರೇ ಆದ ಧೀರಜ್ ಶ್ರೀನಿವಾಸನ್ ವಿರುದ್ಧ 6-0, 6-7(6), 10-5ರಲ್ಲಿ ಗೆಲುವು ಸಾಧಿಸಿದರು. ಸ್ಥಳೀಯ ಆಟಗಾರ ಪ್ರಜ್ವಲ್ ಎಸ್.ವಿ. ಆಸ್ಟ್ರೇಲಿಯಾದ ಮ್ಯಾಟ್ ಹುಲ್ಮ್ ವಿರುದ್ಧ 0-6, 1-6 ಸೆಟ್‌ಗಳಲ್ಲಿ ಪರಾಭವಗೊಂಡರು.
ರಾಜ್ಯ ಕ್ರಾಸ್ ಕಂಟ್ರಿ ಓಟ: ಗುರು, ಅರ್ಚನಾಗೆ ಚಿನ್ನ
ಹುಬ್ಬಳ್ಳಿ: 58ನೇ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ (ಗುಡ್ಡಗಾಡು) ಓಟ ಸ್ಪರ್ಧೆಯಲ್ಲಿ ಪುರುಷ ಹಾಗೂ ಮಹಿಳೆಯರ 10 ಕಿ.ಮೀ. ಸ್ಪರ್ಧೆಯಲ್ಲಿ ಕ್ರಮವಾಗಿ ತುಮಕೂರಿನ ಗುರುಪ್ರಸಾದ್, ಮೈಸೂರಿನ ಅರ್ಚನಾ ಮೊದಲ ಸ್ಥಾನ ಪಡೆದರು.
Pro Kabaddi League ಪುಣೇರಿ ಪಲ್ಟನ್‌ಗೆ ಸತತ 7ನೇ ಜಯ!
ಭಾನುವಾರ ನಡೆದ ಸ್ಪರ್ಧೆಯಲ್ಲಿ ಗುರುಪ್ರಸಾದ್, 30 ನಿಮಿಷ 6.02 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿದರೆ, ಅರ್ಚನಾ 36 ನಿಮಿಷ 6.03 ಸೆಕೆಂಡ್‌ಗಳಲ್ಲಿ 10 ಕಿ.ಮೀ. ಓಡಿದರು. ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ, ಮಹಿಳೆಯರ ವಿಭಾಗದಲ್ಲಿ ಧಾರವಾಡ ಜಿಲ್ಲೆಗಳು ಟ್ರೋಫಿ ಗೆದ್ದವು.
ಡೇವಿಸ್ ಕಪ್ ಟೆನಿಸ್‌ಗೆ ರಾಜ್ಯದ ಪ್ರಜ್ವಲ್ ದೇವ್
ಬೆಂಗಳೂರು: ಪಾಕಿಸ್ತಾನದಲ್ಲಿ ನಡೆಯಲಿರುವ ಡೆವೀಸ್ ಕಪ್ ಟೆನಿಸ್ ಟೂರ್ನಿಗೆ ಕರ್ನಾಟಕದ ಎಸ್.ಡಿ.ಪ್ರಜ್ವಲ್ ದೇವ್ ಆಯ್ಕೆಯಾಗಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಫೆ.3 ಮತ್ತು 4ಕ್ಕೆ ಆಯೋಜನೆಗೊಂಡಿರುವ ವಿಶ್ವ ಗುಂಪಿನ 1ರ ಪ್ಲೇ-ಆಫ್ ಪಂದ್ಯಗಳಿಗೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ದಿಗ್ವಿಜಯ್ ಸಿಂಗ್ ಟೂರ್ನಿಯಿಂದ ಹಿಂದೆ ಸರಿದ ಕಾರಣ ಪ್ರಜ್ವಲ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮೈಸೂರಿನವರಾದ 27 ವರ್ಷದ ಪ್ರಜ್ವಲ್ ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಎಟಿಪಿ ರ್‍ಯಾಂಕಿಂಗ್‌ನಲ್ಲಿ 609ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡಕ್ಕೆ ಪಾಕಿಸ್ತಾನಕ್ಕೆ ಹೋಗಲು ಇನ್ನಷ್ಟೇ ಅನುಮತಿ ಲಭಿಸಬೇಕಿದೆ. ಈಗಾಗಲೇ ಭಾರತ ಟೆನಿಸ್ ಫೆಡರೇಷನ್(ಎಐಟಿಎ) ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದ್ದು, ಪ್ರತಿಕ್ರಿಯೆಗಾಗಿ ಕಾಯುತ್ತಿದೆ.