
ದುಬೈ(ಮೇ.30): ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಏಕದಿನ ಶ್ರೇಯಾಂಕ ಪ್ರಕಟವಾಗಿದ್ದು ದಕ್ಷಿಣ ಆಫ್ರಿಕಾ ತಂಡ ಮೊದಲ ಸ್ಥಾನ ಪಡೆದಿದ್ದು, ತಂಡದ ಬೌಲರ್ ಹಾಗೂ ಬ್ಯಾಟ್ಸ್'ಮನ್ ಕೂಡಾ ಅಗ್ರಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.
ಇಂದು ನೂತನವಾಗಿ ಪ್ರಕಟಗೊಂಡ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಯುವ ವೇಗದ ಬೌಲರ್ 22 ವರ್ಷದ ಕಗಿಸೊ ರಬಾಡ ಇದೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಸೋಮವಾರವಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಉತ್ತಮ ರೇಟಿಂಗ್ ಪಾಯಿಂಟ್ಸ್ ಕಲೆಹಾಕಿದರು. ಭಾರತದ ಯಾವೊಬ್ಬ ಬೌಲರ್ ಕೂಡಾ ಟಾಪ್-10 ಶ್ರೇಯಾಂಕದಲ್ಲಿ ಸ್ಥಾನ ಪಡೆಯಲು ಸಫಲವಾಗಿಲ್ಲ. ಅಕ್ಷರ್ ಪಟೇಲ್ 11ನೇ ಸ್ಥಾನ ಪಡೆದರೆ, ಅಮಿತ್ ಮಿಶ್ರಾ 13ನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಅವಳಿ ಸ್ಟಾರ್ ಸ್ಪಿನ್ನರ್'ಗಳಾದ ಅಶ್ವಿನ್ 18ನೇ ಸ್ಥಾನದಲ್ಲಿದ್ದರೆ, ಜಡೇಜಾ 26ನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಐಸಿಸಿ ಏಕದಿನ ಬ್ಯಾಟ್ಸ್‌ಮನ್'ಗಳ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಡಿವಿಲಿಯರ್ಸ್ ಜತೆ ಕ್ವಿಂಟನ್ ಡಿ ಕಾಕ್ (4ನೇ ಸ್ಥಾನ), ಫಾಫ್ ಡು ಪ್ಲೆಸಿಸ್ (6ನೇ ಸ್ಥಾನ) ಹಾಗೂ ಹಾಶೀಂ ಆಮ್ಲಾ(10ನೇ ಸ್ಥಾನ) ಪಡೆದಿದ್ದು, ಅಗ್ರ 10 ಬ್ಯಾಟ್ಸ್‌ಮನ್'ಗಳ ಪಟ್ಟಿಯಲ್ಲಿ ಆಫ್ರಿಕಾದ ನಾಲ್ವರಿದ್ದಾರೆ.
ಭಾರತದ ನಾಯಕ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದ್ದು ಅಗ್ರ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ.
ಟಾಪ್-10 ಬ್ಯಾಟ್ಸ್'ಮನ್'ಗಳು
1. ಎಬಿ ಡಿವಿಲಿಯರ್ಸ್
2. ಡೇವಿಡ್ ವಾರ್ನರ್
3. ವಿರಾಟ್ ಕೊಹ್ಲಿ
4. ಕ್ವಿಂಟಾನ್ ಡಿಕಾಕ್
5 ಜೋ ರೂಟ್
6. ಫಾಫ್ ಡ್ಯು ಪ್ಲೆಸಿಸ್
7. ಬಾಬರ್ ಅಜಂ
8. ಮಾರ್ಟಿನ್ ಗಪ್ಟಿಲ್
9. ಕೇನ್ ವಿಲಿಯಮ್ಸನ್
10. ಹಾಶೀಂ ಆಮ್ಲಾ
ಟಾಪ್-10 ಬೌಲರ್'ಗಳು
1. ಕಗಿಸೋ ರಬಾಡ
2. ಇಮ್ರಾನ್ ತಾಹಿರ್
3. ಮಿಚೆಲ್ ಸ್ಟಾರ್ಕ್
4. ಸುನಿಲ್ ನರೈನ್
5. ಜೋಸ್ ಹ್ಯಾಜಲ್'ವುಡ್
6. ಟ್ರೆಂಟ್ ಬೌಲ್ಟ್
7. ಕ್ರಿಸ್ ವೋಕ್ಸ್
8. ಮೊಹ್ಮದ್ ನಬೀ
9. ಶಕೀಬ್ ಅಲ್ ಹಸನ್
10. ಮಿಚೆಲ್ ಸಾನ್ಟರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.