ಕೊಹ್ಲಿ ದಾಖಲೆ ಮುರಿದ ಆಮ್ಲಾ

By Suvarna Web DeskFirst Published May 30, 2017, 5:24 PM IST
Highlights

13 ವರ್ಷಗಳ ಕಾಲ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ(180 ಪಂದ್ಯ) ಹೆಸರಿನಲ್ಲಿದ್ದ ಈ ದಾಖಲೆಯನ್ನು, 2014ರಲ್ಲಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್(172 ಪಂದ್ಯ) ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಸಫಲರಾಗಿದ್ದರು.

ಲಂಡನ್(ಮೇ.30): ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್'ಮನ್ ಹಾಶೀಂ ಆಮ್ಲಾ, ಏಕದಿನ ಕ್ರಿಕೆಟ್‌ನಲ್ಲಿ ವೇಗದ 7000 ರನ್‌ ಕಲೆಹಾಕಿದ ದಾಖಲೆ ಬರೆದಿದ್ದಾರೆ.

ಕೇವಲ 150 ಇನ್ನಿಂಗ್ಸ್‌'ಗಳಲ್ಲಿ ಈ ಸಾಧನೆ ಮಾಡಿದ ಆಮ್ಲಾ, ವಿರಾಟ್‌ ಕೊಹ್ಲಿಯ ದಾಖಲೆಯನ್ನು ಮುರಿದರು. ಐಪಿಎಲ್'ನಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದ ಆಮ್ಲಾ, ಇಂಗ್ಲೆಂಡ್ ವಿರುದ್ಧ ಅತಿವೇಗದ ಏಳು ಸಾವಿರ ರನ್ ದಾಖಲಿಸಿದ ಸಾಧನೆ ಮಾಡಿದರು.

13 ವರ್ಷಗಳ ಕಾಲ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ(180 ಪಂದ್ಯ) ಹೆಸರಿನಲ್ಲಿದ್ದ ಈ ದಾಖಲೆಯನ್ನು, 2014ರಲ್ಲಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್(172 ಪಂದ್ಯ) ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಸಫಲರಾಗಿದ್ದರು. ಇದಾಗಿ ಕೇವಲ ಎರಡು ವರ್ಷ ಮುಗಿಯುವುದರೊಳಗೆ ವಿರಾಟ್ ಕೊಹ್ಲಿ ಕೇವಲ 169 ಪಂದ್ಯಗಳಲ್ಲಿ ಏಳು ಸಾವಿರ ರನ್ ತಲುಪಿ ದಾಖಲೆ ಬರೆದರು, ಇದೀಗ ಆಮ್ಲಾ ಕೇವಲ 153 ಪಂದ್ಯಗಳಲ್ಲೇ ಏಳು ಸಾವಿರ ರನ್ ಮೈಲಿಗಲ್ಲು ತಲುಪಿದ್ದಾರೆ  

ಕೊಹ್ಲಿ ಈ ಮೈಲಿಗಲ್ಲು ತಲುಪಲು 161 ಇನ್ನಿಂಗ್ಸ್‌'ಗಳನ್ನು ತೆಗೆದುಕೊಂಡಿದ್ದರು.

click me!