ಟೀಂ ಇಂಡಿಯಾದಿಂದ ನಿರ್ಲಕ್ಷ್ಯ- ವಿದೇಶಿ ಕ್ರಿಕೆಟ್‌ನತ್ತ ಸ್ಟಾರ್ ಸ್ಪಿನ್ನರ್!

Published : May 20, 2019, 09:37 AM IST
ಟೀಂ ಇಂಡಿಯಾದಿಂದ ನಿರ್ಲಕ್ಷ್ಯ- ವಿದೇಶಿ ಕ್ರಿಕೆಟ್‌ನತ್ತ ಸ್ಟಾರ್ ಸ್ಪಿನ್ನರ್!

ಸಾರಾಂಶ

ಟೀಂ ಇಂಡಿಯಾದಿಂದ ಕಡೆಗಣಿಸಲ್ಪಟ್ಟಿರುವ ಸ್ಟಾರ್ ಸ್ಪಿನ್ನರ್ ಇದೀಗ ವಿದೇಶಿ ಕ್ರಿಕೆಟ್‌ನತ್ತ ಮುಖಮಾಡಿದ್ದಾರೆ. 2019ರ ವಿಶ್ವಕಪ್ ತಂಡದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ದ ಈ ಕ್ರಿಕೆಟಿಗನಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಇದೀಗ ವಿದೇಶಿ ಕ್ರಿಕೆಟ್‌ ಆಡಲು ಸಜ್ಜಾಗಿದ್ದಾರೆ.

ನವದೆಹಲಿ(ಮೇ.20): ಟೀಂ ಇಂಡಿಯಾದಲ್ಲಿ ಪೈಪೋಟಿ ಹೆಚ್ಚಾಗಿದೆ. ಹೀಗಾಗಿ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರೆ ಮತ್ತೊಂದು ಅವಕಾಶ ಸಿಗುವುದು ಕಷ್ಟ. ಅದರಲ್ಲೂ ನಿಗದಿತ ಓವರ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಭಾರತ ಕೂಡ  ಬಹುತೇಕ ಬೇರೆ ಬೇರೆ ತಂಡವನ್ನೇ ರಚಿಸಿದೆ. ಹೀಗಾಗಿ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್‌ ಇದೀಗ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡದಿಲ್ಲ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‍‌ಗೆ ಯುವರಾಜ್ ಶೀಘ್ರದಲ್ಲೇ ನಿವೃತ್ತಿ?

ಹಿರಿಯ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌, ಜುಲೈನಲ್ಲಿ ವಿಂಡೀಸ್‌ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್‌ ಕೌಂಟಿಯಲ್ಲಿ ಆಡಲಿದ್ದು ನಾಟಿಂಗ್‌ಹ್ಯಾಮ್‌ಶೈರ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. 6 ಮೊದಲ ಡಿವಿಜನ್‌ ಪಂದ್ಯಗಳನ್ನು ಅವರು ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ವಿಶ್ವಕಪ್ : ಮೇ 22ರಂದು ಇಂಗ್ಲೆಂಡ್‌ಗೆ ಭಾರತ ತಂಡ ಪ್ರಯಾಣ

2017ರ ಋುತುವಿನಲ್ಲಿ ಅಶ್ವಿನ್‌, ವೋಸೆಸ್ಟರ್‌ಶೈರ್‌ ತಂಡವನ್ನು ಪ್ರತಿನಿಧಿಸಿದ್ದರು. ‘ಅಶ್ವಿನ್‌ ಕೌಂಟಿಯಲ್ಲಿ ಆಡಲು ಬಿಸಿಸಿಐ ಆಡಳಿತ ಸಮಿತಿ ಅನುಮತಿ ನೀಡಿದೆ. ನಾಟಿಂಗ್‌ಹ್ಯಾಮ್‌ಶೈರ್‌ ತಂಡದ ಸಿಇಒ ಸಹಿ ಬಾಕಿ ಇದೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ