2019ರ ವಿಶ್ವಕಪ್'ಗೆ ಅಶ್ವಿನ್, ಜಡೇಜಾ ಸ್ಥಾನ ಪಡೆಯುತ್ತಾರಾ..? ಈ ಬಗ್ಗೆ ಬೌಲಿಂಗ್ ಕೋಚ್ ಹೇಳೋದೇನು..?

By Suvarna Web DeskFirst Published Feb 9, 2018, 8:49 PM IST
Highlights

ಈಗಾಗಲೇ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಚಾಹಲ್ ಹಾಗೂ ಕುಲ್ದೀಪ್ 21 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಈ ಇಬ್ಬರು ಸ್ಪಿನ್ನರ್ ಏಕದಿನ ಕ್ರಿಕೆಟ್'ನಲ್ಲಿ ಮಿಂಚಲು ಆರಂಭಿಸಿದ್ದು, ಇಬ್ಬರು ತಲಾ 17 ಪಂದ್ಯಗಳನ್ನಾಡಿ ಕಾಕತಾಳೀಯವೆಂಬಂತೆ ಇಬ್ಬರು 32 ವಿಕೆಟ್ ಕಬಳಿಸಿದ್ದಾರೆ.

ಜೊಹಾನ್ಸ್'ಬರ್ಗ್(ಫೆ.09): ಯುವ ಸ್ಪಿನ್ನರ್'ಗಳಾದ ಯುಜುವೇಂದ್ರ ಚಾಹಲ್ ಹಾಗೂ ಕುಲ್ದೀಪ್ ಯಾದವ್ ಮಿಂಚುತ್ತಿರುವ ಬೆನ್ನಲ್ಲೇ ಅಶ್ವಿನ್ ಹಾಗೂ ಜಡೇಜಾ ಅವರಿಗೆ ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎಂಬ ಮಾತುಗಳು ದಟ್ಟವಾಗುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಹಿರಿಯ ಸ್ಪಿನ್ನರ್'ಗಳ ಬಗ್ಗೆ ಆಶಾದಾಯಕ ಮಾತುಗಳನ್ನಾಡಿದ್ದಾರೆ.

ಈಗಾಗಲೇ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಚಾಹಲ್ ಹಾಗೂ ಕುಲ್ದೀಪ್ 21 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಈ ಇಬ್ಬರು ಸ್ಪಿನ್ನರ್ ಏಕದಿನ ಕ್ರಿಕೆಟ್'ನಲ್ಲಿ ಮಿಂಚಲು ಆರಂಭಿಸಿದ್ದು, ಇಬ್ಬರು ತಲಾ 17 ಪಂದ್ಯಗಳನ್ನಾಡಿ ಕಾಕತಾಳೀಯವೆಂಬಂತೆ ಇಬ್ಬರು 32 ವಿಕೆಟ್ ಕಬಳಿಸಿದ್ದಾರೆ.

ಚಾಹಲ್ ಹಾಗೂ ಕುಲ್ದೀಪ್ ನಮ್ಮ ನಂಬಿಕೆ ಉಳಿಸಿಕೊಂಡಿದ್ದಾರೆ. ಆದರೆ ಅಶ್ವಿನ್ ಹಾಗೂ ಜಡೇಜಾ ಈಗಾಗಲೇ ವಿಶ್ವಕಪ್ ತಂಡದ ರೇಸ್'ಗೆ ಮರಳಲು ಸಾಕಷ್ಟು ಅವಕಾಶವಿದೆ ಎಂದು ಅರುಣ್ ಹೇಳಿದ್ದಾರೆ.

click me!