ಐಸಿಸಿ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರರಾದ ಅಶ್ವಿನ್

Published : Dec 21, 2016, 07:03 PM ISTUpdated : Apr 11, 2018, 12:59 PM IST
ಐಸಿಸಿ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರರಾದ ಅಶ್ವಿನ್

ಸಾರಾಂಶ

ಅಶ್ವಿನ್ ಪ್ರಸಕ್ತ ವರ್ಷದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿ 15.39ರ ಸರಾಸರಿಯಲ್ಲಿ 48 ವಿಕೆಟ್ ಪಡೆದದ್ದೂ ಅಲ್ಲದೇ ಬ್ಯಾಟಿಂಗ್'ನಲ್ಲಿ ಉಪಯುಕ್ತ 336 ರನ್'ಗಳಿಸಿ ತಂಡಕ್ಕೆ ನೆರವಾಗಿದ್ದಾರೆ.

ದುಬೈ(ಡಿ.22): ಭಾರತ ಅನುಭವಿ ಆಫ್'ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ಐಸಿಸಿ ಟೆಸ್ಟ್ ತಂಡದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಸರ್. ಗ್ಯಾರಿ ಸೋಬರ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡ ಮೂರನೇ ಭಾರತೀಯ ಎನ್ನುವ ಕೀರ್ತಿಯೂ ಅಶ್ವಿನ್ ಪಾಲಾಗಿದೆ. ಈ ಮೊದಲು ರಾಹುಲ್ ದ್ರಾವಿಡ್(2004) ಹಾಗೂ ಸಚಿನ್ ತೆಂಡೂಲ್ಕರ್(2010) ಸರ್. ಗ್ಯಾರಿ ಸೋಬರ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಅಶ್ವಿನ್ ಪ್ರಸಕ್ತ ವರ್ಷದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿ 15.39ರ ಸರಾಸರಿಯಲ್ಲಿ 48 ವಿಕೆಟ್ ಪಡೆದದ್ದೂ ಅಲ್ಲದೇ ಬ್ಯಾಟಿಂಗ್'ನಲ್ಲಿ ಉಪಯುಕ್ತ 336 ರನ್'ಗಳಿಸಿ ತಂಡಕ್ಕೆ ನೆರವಾಗಿದ್ದಾರೆ.

ವಿಶ್ವದ ನಂಬರ್ 1 ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ತಂಡದಲ್ಲಿ ಸ್ಥಾನಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಐಸಿಸಿ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

2016ನೇ ಸಾಲಿನ ಐಸಿಸಿಯ ಪ್ರಮುಖ ಪ್ರಶಸ್ತಿಗಳು ಇಂತಿವೆ:

  • ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ:  ಮಿಸ್ಬಾ ಉಲ್-ಹಕ್(ಪಾಕಿಸ್ತಾನ ತಂಡದ ನಾಯಕ)
  • ವರ್ಷದ ಏಕದಿನ ಕ್ರಿಕೆಟಿಗ   : ಕ್ವಿಂಟಾನ್ ಡಿ'ಕಾಕ್ (ದಕ್ಷಿಣ ಆಫ್ರಿಕಾ)
  • ವರ್ಷದ ಉದಯೋನ್ಮುಖ ಕ್ರಿಕೆಟಿಗ : ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ)
  • ಟಿ20 ಮಾದರಿಯ ಶ್ರೇಷ್ಟ ಆಟಗಾರ: ಕಾರ್ಲೋಸ್ ಬ್ರಾಥ್'ವೇಟ್ (ವೆಸ್ಟ್'ಇಂಡೀಸ್)
  • ಐಸಿಸಿ ಅಸೋಸಿಯೇಟ್ ಆಟಗಾರ : ಮೊಹಮ್ಮದ್ ಶಹಜಾದ್(ಆಫ್ಘಾನಿಸ್ತಾನ)
  • ಐಸಿಸಿ ವರ್ಷದ ಅಂಪೈರ್ ; ಮಾರೀಸ್ ಎರಾಸ್'ಮಸ್

ಐಸಿಸಿ ಟೆಸ್ಟ್ ತಂಡ ಇಂತಿದೆ:

ಅಲಿಸ್ಟರ್ ಕುಕ್(ನಾಯಕ), ಡೇವಿಡ್ ವಾರ್ನರ್, ಕೇನ್ ವಿಲಿಯಮ್'ಸನ್, ಜೋ ರೂಟ್, ಆ್ಯಡಂ ವೋಗ್ಸ್, ಜಾನಿ ಬ್ರಿಸ್ಟೋ(ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ರಂಗನಾ ಹೆರಾತ್, ರವಿಚಂದ್ರನ್ ಅಶ್ವಿನ್, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೇನ್, ಹಾಗೂ ಸ್ಟೀವ್ ಸ್ಮಿತ್.

ಐಸಿಸಿ ಏಕದಿನ ತಂಡ:

ವಿರಾಟ್ ಕೊಹ್ಲಿ(ನಾಯಕ), ಡೇವಿಡ್ ವಾರ್ನರ್, ಕ್ವಿಂಟಾನ್ ಡಿ'ಕಾಕ್, ರೋಹಿತ್ ಶರ್ಮಾ, ಎಬಿ ಡಿ'ವಿಲಿಯರ್ಸ್, ಜೋಸ್ ಬಟ್ಲರ್, ಮಿಚೆಲ್ ಮಾರ್ಸ್, ರವೀಂದ್ರ ಜಡೇಜಾ, ಮಿಚೆಲ್ ಸ್ಟಾರ್ಕ್, ಕಗೀಸೋ ರಬಾಡ, ಸುನೀಲ್ ನರೈನ್ ಹಾಗೂ ಇಮ್ರಾನ್ ತಾಹಿರ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?