
ಧರ್ಮಶಾಲಾ(ಮಾ.25): ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್'ಗೆ ಆತಿಥ್ಯ ವಹಿಸಿರುವ ಧರ್ಮಶಾಲಾ ಕ್ರೀಡಾಂಗಣ ಕುಲ್ದೀಪ್ ಯಾದವ್ ಪಾದಾರ್ಪಣ ಪಂದ್ಯಕ್ಕೆ ಸಾಕ್ಷಿಯಾದರೆ ಇನ್ನೊಂದು ಕಡೆ ಆರ್. ಅಶ್ವಿನ್ ಅವರ ವಿನೂತನ ದಾಖಲೆಗೂ ವೇದಿಕೆ ಒದಗಿಸಿಕೊಟ್ಟಿತು.
ಭುಜನ ವಿರಾಮಕ್ಕೂ ಮುನ್ನ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಅವರನ್ನು ಬಲಿ ಪಡೆಯುವ ಮೂಲಕ ಒಂದೇ ಋತುವಿನಲ್ಲಿ 79 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎನ್ನುವ ದಾಖಲೆಯನ್ನು ನಿರ್ಮಿಸಿದರು. ಈ ದಾಖಲೆ 2007/08ರಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್'ನಲ್ಲಿ ಒಂದೇ ಋತುವಿನಲ್ಲಿ 78 ವಿಕೆಟ್ ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದ್ದರು.
ಕೇವಲ 13 ಟೆಸ್ಟ್ ಪಂದ್ಯಗಳಲ್ಲಿ 25.64ರ ಸರಾಸರಿಯಲ್ಲಿ 79 ವಿಕೆಟ್ ಉರುಳಿಸುವ ಮೂಲಕ ಶೇನ್ ವಾರ್ನ್, ಮುತ್ತಯ್ಯಾ ಮುರುಳಿಧರನ್ , ಅನಿಲ್ ಕುಂಬ್ಳೆಯಂತಹ ಸ್ಪಿನ್ ದಿಗ್ಗಜರು ಮಾಡಲಾಗದ ಸಾಧನೆ ಮಾಡುವಲ್ಲಿ ಚೆನ್ನೈ ಸ್ಪಿನ್ನರ್ ಯಶಸ್ವಿಯಾಗಿದ್ದಾರೆ.
ಪ್ರಸಕ್ತ ವರ್ಷ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 27 ವಿಕೆಟ್ ಕಬಳಿಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಲು ನೆರವಾಗಿದ್ದ ಅಶ್ವಿನ್, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 28 ವಿಕೆಟ್ ಬಾಚಿಕೊಂಡಿದ್ದರು. ಇನ್ನು ಬಾಂಗ್ಲಾದೇಶ ವಿರುದ್ಧದ ಏಕೈಕ ಪಂದ್ಯದಲ್ಲಿ ಆರು ವಿಕೆಟ್ ಪಡೆದ ಅಶ್ವಿನ್ ಆಸೀಸ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಈಗಾಗಲೇ 18 ವಿಕೆಟ್'ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಒಂದೇ ಋತುವಿನಲ್ಲಿ ಗರಿಷ್ಟ ವಿಕೆಟ್ ಕಬಳಿಸಿದ ಬೌಲರ್'ಗಳಿವರು
1. ಆರ್. ಅಶ್ವಿನ್ 79*
2. ಡೇಲ್ ಸ್ಟೇನ್ 78
3. ಆರ್. ಜಡೇಜಾ 68
4. ಗ್ಲೇನ್ ಮೆಗ್ರಾಥ್ 66
5. ಅನಿಲ್ ಕುಂಬ್ಳೆ 64
6. ಕಪಿಲ್ ದೇವ್ 63
7. ಮುತ್ತಯ್ಯ 62
8. ಶೇನ್ ವಾರ್ನ್ 62
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.