
ಕ್ರಿಕೆಟಿಗ ಡಿ ಕಾ ಈಗ ಬ್ಯಾಚುಲರ್ ಪಟ್ಟ ತ್ಯಜಿಸಿದ್ದಾರೆ! ದಕ್ಷಿಣ ಆಫ್ರಿಕದ ಈ ವಿಕೇಟ್ ಕೀಪರ್ ಮಾರಿಷನಲ್ಲಿ ಸಂಗಾತಿ ಸಾಶಾ ಹರ್ಲಿಯನ್ನು ವರಿಸಿದರು. ಈ ಮದ್ವೆ ಸಮಾರಂಭಕ್ಕೆ ಇಡೀ ದಕ್ಷಿಣ ಆಫ್ರಿಕ ತಂಡವೇ ಹಾಜರಾಗಿದ್ದು ವಿಶೇಷ.
ಹೈವೆಲ್ಡ್ ಲಯನ್ಸ್ ತಂಡ ಮುಂಬೈ ಇಂಡಿಯನ್ಸ ವಿರುದ್ಧ ಟಿ20 ಪಂದ್ಯ ಆಡುವಾಗ ಡಿ ಕಾಕ್'ಗೆ ಹರ್ಲಿಯ ಪರಿಚಯವಾಯಿತು.
ಹರ್ಲಿ ಆ ಪಂದ್ಯದಲ್ಲಿ ಚಿಯರ್ ಲೀಡರ್ ಆಗಿ ನರ್ತಿಸಿದ್ದರು. ಪಂದ್ಯದಲ್ಲಿ ಕಾಕ್ ಭರ್ಜರಿ 51 ರ ಗಳಿಸಿದ್ದರು. ಪಂದ್ಯ ಮುಗಿದ ಕೂಡಲೇ ಹರ್ಲಿ, ಕಾಕ್'ಗೆ ವಿಷ್ ಮಾಡಲು ಹೋಗಿದ್ದಾರೆ. ಫಸ್ಟ್ ಸೈಟ್'ನಲ್ಲಿಯೇ ಲವ್ ಆಗಿದೆ. ಮುಂದೆ ಕೇಪ್'ಟೌನಲ್ಲಿ ಇಬ್ಬರೂ ಸುತ್ತಾಡುವಾಗ ಮಾಧ್ಯಮಗಳ ಕಣ್ಣಿಗೂ ಬಿದ್ದರು. ನದಿಯಲ್ಲಿ ಡಿ ಕಾಕ್ ಜೊತೆ ಹರ್ಲಿ ಮೀನು ಹಿಡಿಯುತ್ತಿರುವ ಫೋಟೊ ವೈರಲ್ ಆಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.