
ಲಾಹೋರ್[ಅ.30]; ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಪತಿ ಶೋಯೆಬ್ ಮಲಿಕ್ ಈ ಶುಭಸುದ್ದಿಯನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಇದನ್ನು ಓದಿ:ಮೂಗುತಿ ಸುಂದರಿ ಸಾನಿಯಾ ಮಡಿಲಿಗೆ ಗಂಡು ಕೂಸು !
ಗಂಡು ಮಗುವಾಗಿದೆ ಎಂದು ತಿಳಿಸಲು ಅತೀವ ಸಂತೋಷವಾಗುತ್ತಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ, ಎಲ್ಲರ ಪ್ರಾರ್ಥನೆ ಹಾರೈಕೆಗಳಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ. ಇದೀಗ ಸಾನಿಯಾ ಮಗುವಿಗೆ ಯಾವ ದೇಶದ ಪೌರತ್ವ ಸಿಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು 2010ರಲ್ಲಿ ವಿವಾಹವಾಗಿದ್ದರು. ಸಾನಿಯಾ ಪಾಕ್ ಕ್ರಿಕೆಟಿಗನನ್ನು ವರಿಸಿದ್ದರೂ ಭಾರತದ ಪೌರತ್ವವನ್ನು ಉಳಿಸಿಕೊಂಡಿದ್ದರು. ಇದೀಗ ಸಾನಿಯಾ ಮಗು ಯಾವ ದೇಶದ ಪೌರತ್ವ ಪಡೆಯಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ.
ಇದನ್ನು ಓದಿ: ಸಾನಿಯಾ ಮಿರ್ಜಾ ಸೀಮಂತ: ಚಿತ್ರಗಳೇ ಮಾತನಾಡಲಿ!
ಕೆಲ ತಿಂಗಳುಗಳ ಹಿಂದೆ ಈ ಕುರಿತಂತೆ ಪ್ರತಿಕ್ರಿಯಿಸಿದ್ದ ಶೋಯೆಬ್ ಮಲಿಕ್, ನಮ್ಮ ಮಗು ಭಾರತ ಅಥವಾ ಪಾಕಿಸ್ತಾನದ ಪೌರತ್ವ ಪಡೆಯುವುದಿಲ್ಲ. ಬದಲಾಗಿ ಬೇರೊಂದು ರಾಷ್ಟ್ರದ ಪೌರತ್ವ ಪಡೆಯಲಿದೆ ಎಂದು ಹೇಳಿದ್ದರು. ಇದೀಗ ಕ್ರೀಡಾ ತಾರಾ ದಂಪತಿಗೆ ಗಂಡು ಮಗು ಜನಿಸಿದ್ದು ಯಾವ ದೇಶದ ಪೌರತ್ವ ಬಗ್ಗೆ ಕುತೂಹಲ ಮುಂದುವರೆದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.