ಕೊರಿಯಾ ಸೂಪರ್ ಸೀರೀಸ್: ಪಿ.ವಿ.ಸಿಂಧು ಚಾಂಪಿಯನ್

By Suvarna Web DeskFirst Published Sep 17, 2017, 2:54 PM IST
Highlights

6 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಕೊರಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಗೆದ್ದ ಮೊದಲ ಭಾರತೀಯೆ ಎಂಬ ಕೀರ್ತಿ ಸಿಂಧುವಿಗೆ ಪ್ರಾಪ್ತವಾಗಿದೆ. ವಿಶ್ವ ರ್ಯಾಂಕಿಂಗ್'ನಲ್ಲಿ 4ನೇ ಸ್ಥಾನದಲ್ಲಿರುವ ಪಿ.ವಿ.ಸಿಂಧು ಈಗ ನಂಬರ್ ಒನ್ ಪಟ್ಟವನ್ನು ಮರಳಿ ಪಡೆಯುವ ಹಾದಿಯಲ್ಲಿದ್ದಾರೆ.

ಸೋಲ್(ಸೆ. 17): ಭಾರತದ ಅಪ್ರತಿಮ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕೊರಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ್ದಾರೆ. ಇಂದು ನಡೆದ ಫೈನಲ್'ನಲ್ಲಿ ಜಪಾನ್'ನ ನೊಜೋಮಿ ಒಕುಹಾರಾ ವಿರುದ್ಧ ಸಿಂಧು 22-20, 11-21, 20-18 ಗೇಮ್'ಗಳಿಂದ ರೋಚಕ ಗೆಲುವು ಪಡೆದಿದ್ದಾರೆ. ಕಳೆದ ತಿಂಗಳು ಪಿ.ವಿ.ಸಿಂಧು ವಿಶ್ವ ಚಾಂಪಿಯನ್'ಶಿಪ್ ಜಯಿಸುವ ಸುವರ್ಣಾವಕಾಶವನ್ನು ತಪ್ಪಿಸಿದ್ದು ಇದೇ ಜಪಾನ್ ಆಟಗಾರ್ತಿ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಇವತ್ತಿನ ಫೈನಲ್ ಎಲ್ಲರ ಕುತೂಹಲ ಮೂಡಿಸಿತ್ತು. ಹೆಚ್ಚೂಕಡಿಮೆ ಒಂದೂವರೆ ಗಂಟೆ ಕಾಲ ನಡೆದ ಹಣಾಹಣಿಯಲ್ಲಿ ಸಿಂಧು ಈ ಬಾರಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಎರಡನೇ ಗೇಮ್'ನಲ್ಲಿ ಜಪಾನ್ ಆಟಗಾರ್ತಿ ಸುಲಭವಾಗಿ ಗೆದ್ದಾಗ ಸಿಂಧು ಆಟ ಮುಗಿಯಿತೆಂದೇ ಬಹುತೇಕರು ಭಾವಿಸಿದ್ದರು. ಆದರೆ, ನಿರ್ಣಾಯಕ ಮೂರನೇ ಗೇಮ್'ನಲ್ಲಿ ಸಿಂಧು ಛಲಬಿಡದೇ ಹೋರಾಟ ಮಾಡಿದರು.

click me!